ನಂದಾವರ: ಎಸೆಸೆಲ್ಸಿ ವಿದ್ಯಾರ್ಥಿ, ಶಿಕ್ಷಕರಿಗೆ ಸನ್ಮಾನ

ಬಂಟ್ವಾಳ : ನಂದಾವರ ಸರಕಾರಿ ಪ್ರೌಢಶಾಲೆಯ ಎಸೆಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ನಂದಾವರ ದಿಲ್ ಫ್ರೆಂಡ್ಸ್ ವತಿಯಿಂದ ಸನ್ಮಾನಿಸಲಾಯಿತು.
ಸಲ್ಮಾ ಮುನ್ಸೀರ (556) ಎಸ್.ಎಮ್. ಮುಹಮ್ಮದ್ ರಾಝಿ (552), ಫಾತಿಮಾ ನಿಶಾನ (551) ಫಾತಿಮಾ ಜೆಸೀದ (545), ಫಾತಿಮಾತ್ ಶಹನಾಝ್ (539), ಹಾಗೂ ಆಯಿಷಾ ಅಫ್ರೀದ (521) ಮತ್ತು ಶಿಕ್ಷಕರನ್ನು ಅಭಿನಂದಿಸಲಾಯಿತು.
ಹಿದಾಯ ಫೌಂಡೇಶನ್ ಇದರ ಸದಸ್ಯ ಮುಹಮ್ಮದ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಉನ್ನತ ಶಿಕ್ಷಣದ ಬಗ್ಗೆ ಮಾಹಿತಿ ನೀಡಿದರು.
ಇತರ ಶಾಲೆಯ ವಿದ್ಯಾರ್ಥಿಗಳಾಗಿ ಎಸೆಸೆಲ್ಸಿಯಲ್ಲಿ ಸಾಧನೆ ಮಾಡಿದ ಊರಿನ ವಿದ್ಯಾರ್ಥಿಗಳಾದ ಐಫಾನ (574) ಎಮ್.ಮಾಝಿಮ್ (566), ಆಯಿಷ ನಿಹಾನ (536), ಮುಹಮ್ಮದ್ ಅಲಿ ಯೂನುಶ್ (532) ಅವರನ್ನೂ ಇದೇ ಸಂದರ್ಭ ಅಭಿನಂದಿಸಲಾಯ್ತು.
ದಿಲ್ ಪ್ರೆಂಡ್ಸ್ ಅಧ್ಯಕ್ಷ ಇಂತಿಯಾಝ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಜಿಪ ಮುನ್ನೂರು ಗ್ರಾಮ ಪಂಚಾಯತ್ ಸದಸ್ಯರಾದ ಶಮೀರ್, ನಂದಾವರ ಪ್ರೌಢಶಾಲೆ ಶಾಲಾಭಿವೃತಿ ಸಮಿತಿ ಅಧ್ಯಕ್ಷ ಗೋಪಾಲ ಆಚಾರ್ಯ, ಮೇಲ್ವಿಚಾರಕ ಅಬ್ದುಲ್ ರಹ್ಮಾನ್, ಪ್ರವಾಸಿ ನಂದಾವರ ಚಾರಿಟೇಬಲ್ ಟ್ರಸ್ಟ್ ಸೌದಿ ಅರೇಬಿಯಾದ ಅಧ್ಯಕ್ಷ ಅಬ್ದುಲ್ ಜಬ್ಬಾರ್, ಸಜಿಪ ಮುನ್ನೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಶರೀಫ್, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸಮತಿಯ ಸದಸ್ಯ ಹೈದರ್, ಚಂದ್ರಿಕಾ ವೆಜ್ಟೇಬಲ್ ನ ಮಾಲಕ ಶೆರೀಫ್ ಅತಿಥಿಗಳಾಗಿ ಭಾಗವಹಿಸಿದ್ದರು.
ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರಿಕಾಂತ್.ಎಮ್. ಶುಭ ಹಾರೈಸಿದರು. ಈ ಸಂದರ್ಭ ದಿಲ್ ಫ್ರೆಂಡ್ಸ್ ನಂದಾವರ ಸದಸ್ಯರು ಉಪಸ್ಥಿತರಿದ್ದರು. ಅಕ್ಬರ್ ಅಲಿ ನಂದಾವರ ಕಾರ್ಯಕ್ರಮ ನಿರೂಪಿಸಿದರು.