ನಕಲಿ 500ರೂ. ನೋಟುಗಳಲ್ಲಿ 100% ಹೆಚ್ಚಳವಾಗಿದೆ: ರಿಸರ್ವ್ ಬ್ಯಾಂಕ್ ರಿಪೋರ್ಟ್
500ರ ನೋಟಿನ ಅಸಲಿಯತ್ತನ್ನು ತಿಳಿಯುವುದು ಹೇಗೆ? ಇಲ್ಲಿದೆ ಮಾಹಿತಿ

ಹೊಸದಿಲ್ಲಿ,ಮೇ 29: ಕಳೆದ ವಿತ್ತವರ್ಷ (2021-22)ದಲ್ಲಿ ಎಲ್ಲ ಮುಖಬೆಲೆಗಳ ನಕಲಿ ನೋಟುಗಳ ಚಲಾವಣೆ ಹೆಚ್ಚಿದೆ ಎಂದು ಆರ್ಬಿಐ ತನ್ನ ವರದಿಯಲ್ಲಿ ತಿಳಿಸಿದೆ. 2016,ನ.8ರಂದು ದೇಶವನ್ನುದ್ದೇಶಿಸಿ ಮಾಡಿದ್ದ ಭಾಷಣದಲ್ಲಿ 500 ರೂ. ಮತ್ತು 1,000 ರೂ.ಮುಖಬೆಲೆಗಳ ನಿಷೇಧವನ್ನು ಪ್ರಕಟಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರು ಕಪ್ಪುಹಣ ಸಂಗ್ರಹ ಮತ್ತು ನಕಲಿ ನೋಟುಗಳನ್ನು ತಡೆಗಟ್ಟುವುದು ಈ ಕ್ರಮದ ಪ್ರಮುಖ ಉದ್ದೇಶಗಳಾಗಿವೆ ಎಂದು ಹೇಳಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
2021-22ರಲ್ಲಿ ಎಲ್ಲ ಮುಖಬೆಲೆಗಳ ನಕಲಿ ನೋಟುಗಳ ಪೈಕಿ 500 ರೂ.ಗಳ ನಕಲಿ ನೋಟುಗಳಲ್ಲಿ ಶೇ.101.9ರಷ್ಟು ಮತ್ತು 2,000 ರೂ.ಗಳ ನಕಲಿ ನೋಟುಗಳಲ್ಲಿ ಶೇ.54.16ರಷ್ಟು ಏರಿಕೆಯನ್ನು ಆರ್ಬಿಐ ಪತ್ತೆ ಹಚ್ಚಿದೆ.
500 ರೂ.ನೋಟುಗಳ ಸಾಚಾತನ ದೃಢಪಡಿಸಿಕೊಳ್ಳುವುದು ಹೇಗೆ?
*ನೋಟನ್ನು ಬೆಳಕಿಗೊಡ್ಡಿದರೆ ವಿಶೇಷ ಸ್ಥಳಗಳಲ್ಲಿ 500 ಎಂದು ಬರೆದಿರುವುದು ಕಂಡು ಬರುತ್ತದೆ.
* ದೇವನಾಗರಿ ಲಿಪಿಯಲ್ಲಿಯೂ 500 ಎಂದು ಬರೆದಿರುತ್ತದೆ.
* ಮಹಾತ್ಮಾ ಗಾಂಧಿಯವರ ಚಿತ್ರದ ದೃಷ್ಟಿಕೋನ ಮತ್ತು ಸಂಬಂಧಿತ ಸ್ಥಾನ ಬಲಕ್ಕೆ ಸ್ಥಳಾಂತರಗೊಳ್ಳುತ್ತದೆ.
* ನೋಟಿನ ಮೇಲೆ ಇಂಡಿಯಾ ಎಂದು ಬರೆದಿರುತ್ತದೆ.
* ನೋಟನ್ನು ಬಗ್ಗಿಸಿದಾಗ ಸೆಕ್ಯುರಿಟಿ ಹೆಡ್ನ ಬಣ್ಣ ಹಸಿರಿನಿಂದ ನೇರಳೆಗೆ ಬದಲಾಗುತ್ತದೆ.
*ಗವರ್ನರ್ ಸಹಿ,ಖಾತರಿ ಷರತ್ತು,ಭರವಸೆ ಷರತ್ತು ಮತ್ತು ಆರ್ಬಿಐ ಲಾಂಛನಗಳು ನೋಟಿನ ಬಲಬದಿಗೆ ಸ್ಥಳಾಂತರಗೊಂಡಿವೆ.
* ನೋಟು ಮಹಾತ್ಮಾ ಗಾಂಧಿಯವರ ಚಿತ್ರ ಮತ್ತು ಎಲೆಕ್ಟ್ರೋಟೈಪ್ ವಾಟರ್ಮಾರ್ಕ್ನ್ನು ಹೊಂದಿದೆ.
* ನೋಟಿನ ಮೇಲೆ ಬರೆದಿರುವ 500ರ ಬಣ್ಣವು ಹಸಿರಿನಿಂದ ನೀಲಿಗೆ ಬದಲಾಗುತ್ತದೆ.
* ನೋಟಿನ ಬಲಬದಿಯಲ್ಲಿ ಅಶೋಕ ಸ್ತಂಭವನ್ನು ಮುದ್ರಿಸಲಾಗಿದೆ.
* ಸ್ವಚ್ಛ ಭಾರತ ಲೋಗೊ ಮತ್ತು ಘೋಷಣೆಯನ್ನು ನೋಟು







