ಉಡುಪಿ ಜಯಂಟ್ಸ್ ಗ್ರೂಪ್ ಅಧ್ಯಕ್ಷ ಇಕ್ಬಾಲ್ ಮನ್ನಾ ಅಧಿಕಾರ ಸ್ವೀಕಾರ

ಉಡುಪಿ : ಉಡುಪಿಯ ಜಯಂಟ್ಸ್ ಗ್ರೂಪ್‌ನ ನೂತನ ಅಧ್ಯಕ್ಷ ಎಂ.ಇಕ್ಬಾಲ್ ಮನ್ನಾ ಶನಿವಾರ ಉಡುಪಿಯ ಹೋಟೆಲ್ ಕಿದಿಯೂರಿನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಅಧಿಕಾರ ವಹಿಸಿಕೊಂಡರು.
ನಿರ್ಗಮನ ಅಧ್ಯಕ್ಷ ಲಕ್ಷ್ಮೀಕಾಂತ ಬೆಸ್ಕೂರ್ ಸ್ವಾಗತಿಸಿ, ತಮ್ಮ ಅವಧಿಯಲ್ಲಿ ನಡೆದ ಚಟುವಟಿಕೆಗಳ ಸಂಕ್ಷಿಪ್ತ ವರದಿಯನ್ನು ಮಂಡಿಸಿದರು. ಮುಂಬೈನ ಜೈಂಟ್ಸ್ ಫೌಂಡೇಶನ್ ಸಮಿತಿ ಸದಸ್ಯ ದಿನಕರ ಅಮೀನ್, ಫೆಡರೇಶನ್ ಅಧ್ಯಕ್ಷೆ ತಾರಾದೇವಿ ವಾಲಿ, ಫೆಡರೇಶನ್ ಉಪಾಧ್ಯಕ್ಷ ರಮೇಶ್ ಪೂಜಾರಿ, ಫೆಡರೇಶನ್ ಸಂಯೋಜಕ ತೇಜಶ್ವರ ರಾವ್ ಹಾಗೂ ನೂತನ ಅಧ್ಯಕ್ಷ ಎಂ.ಇಕ್ಬಾಲ್ ಮನ್ನಾ ಮಾತನಾಡಿದರು.
ಈ ಸಂದರ್ಭದಲ್ಲಿ ವಿಶೇಷ ಅಗತ್ಯವುಳ್ಳ ಶಾಲೆಯ ಶಿಕ್ಷಕರಾದ ಉಡುಪಿಯ ಶಶಿಕಲಾ ಕೋಟ್ಯಾನ್, ಆಗ್ನೆಸ್ ಹೇಮಲತಾ ಕುಂದರ್ ಮತ್ತು ಕಾರ್ಕಳದ ಡಾ. ಕಾಂತಿ ಹರೀಶ್ ಅವರನ್ನು ಸನ್ಮಾನಿಸಲಾಯಿತು.
ಉಪಾಧ್ಯಕ್ಷ ಯಶವಂತ ಸಾಲಿಯಾನ್, ಬ್ರಹ್ಮಾವರ ಜೈಂಟ್ಸ್ ಅಧ್ಯಕ್ಷ ಸುಂದರ್ ಪೂಜಾರಿ, ಮಾಜಿ ಅಧ್ಯಕ್ಷ ಜಗದೀಶ್ ಅಮೀನ್, ರಾಜೇಶ್ ಶೆಟ್ಟಿ, ಚಿದಾನಂದ್ ಪೈ, ದೇವದಾಸ್ ಕಾಮತ್, ಮಧುಸೂದನ್ ಹೇರೂರು, ದಿನೇಶ್ ಪುತ್ರನ್, ಉಷಾ ರಮೇಶ್, ನವೀನ್ ಚಂದ್ರ ಉಪಸ್ಥಿತರಿದ್ದರು.
ಆಡಳಿತ ನಿರ್ದೇಶಕ ರೋಶನ್ ಬಲ್ಲಾಳ್ ವಂದಿಸಿದರು. ಗಣೇಶ್ ಉರಾಳ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.