ಭದ್ರತೆ ಹಿಂಪಡೆದ ಮರುದಿನವೇ ಕಾಂಗ್ರೆಸ್ ನಾಯಕ, ಗಾಯಕ ಸಿಧು ಮೂಸೇವಾಲಾರನ್ನು ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು

ಹೊಸದಿಲ್ಲಿ: ಕಾಂಗ್ರೆಸ್ ನಾಯಕ ಹಾಗೂ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರನ್ನು ಇಂದು ಮಾನ್ಸಾ ಜಿಲ್ಲೆಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಗುಂಡಿನ ದಾಳಿಯಲ್ಲಿ ಇತರ ಇಬ್ಬರು ಗಾಯಗೊಂಡಿದ್ದಾರೆ. ಪಂಜಾಬ್ ನೂತನ ಸರಕಾರವು ಮೂಸೇವಾಲಾ ಸೇರಿದಂತೆ 424 ಜನರ ಭದ್ರತೆಯನ್ನು ಹಿಂತೆಗೆದುಕೊಂಡ ಕೇವಲ ಒಂದು ದಿನದ ನಂತರ ಈ ಘಟನೆ ಸಂಭವಿಸಿದೆ.
ಶುಭದೀಪ್ ಸಿಂಗ್ ಸಿಧು ಮೂಸೇವಾಲಾ ಎಂಬ ಹೆಸರಿನ ಮೂಲಕ ಜನಪ್ರಿಯರಾಗಿದ್ದರು. ಮೂಸೇವಾಲ ಮತ್ತು ಅವರ ಇಬ್ಬರು ಸ್ನೇಹಿತರು ಪಂಜಾಬ್‌ನ ತಮ್ಮ ಗ್ರಾಮವಾದ ಮಾನ್ಸಾಗೆ ತೆರಳುತ್ತಿದ್ದಾಗ ಈ ದಾಳಿ ನಡೆದಿದೆ.
Next Story





