ಕಣಚೂರು ವೈದ್ಯಕೀಯ ಕಾಲೇಜು; ಪದವಿ ಪ್ರದಾನ ಸಮಾರಂಭ

ಕೊಣಾಜೆ: ನಾವು ಪಡೆದಿರುವ ಪದವಿಯೊಂದಿಗೆ ಮಾನವೀಯ ಮೌಲ್ಯಗಳು ಸೇವೆಯೊಂದಿಗೆ ನಮ್ಮ ಘನತೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವೈದ್ಯಕೀಯ ವೃತ್ತಿ ಶ್ರೇಷ್ಠ ವೃತ್ತಿಯಾಗಿದೆ ಎಂದು ವಿಧಾನಸಭಾ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಅವರು ಹೇಳಿದರು.
ಅವರು ಶನಿವಾರ ಕಣಚೂರು ವೈದ್ಯಕೀಯ ಶಿಕ್ಷಣ ಸಂಸ್ಥೆಯ ಪ್ರಥಮ ಬ್ಯಾಚ್ ನ ಪದವಿ ಪ್ರದಾನ ಸಮಾರಂಭ ದಲ್ಲಿ ಪದವೀಧರರಿಗೆ ಪದವಿ ಪ್ರಮಾಣಪತ್ರ ವಿತರಿಸಿ ಮಾತನಾಡಿದರು.
ನಾವು ಸದಾ ಸಂಶೋಧನಾತ್ಮಕ ಚಿಂತನೆಗಳನ್ನು ಬೆಳೆಸಿಕೊಂಡರೆ ಉತ್ತಮ ಸಾಧನೆಯೊಂದಿಗೆ ಮುನ್ನಡೆಯಲು ಸಾಧ್ಯವಾಗುತ್ತದೆ. ಕಣಚೂರು ಮೋನು ಅವರ ಬದ್ಧತೆ ಮತ್ತು ಪ್ರಾಮಾಣಿಕತೆ ಮಾದರಿಯಾಗಿದೆ. ನಾಟೆಕಲ್, ದೇರಳಕಟ್ಟೆ ಪ್ರದೇಶ ಅಭಿವೃದ್ಧಿಯಲ್ಲಿ ಕಣಚೂರು ಶಿಕ್ಷಣ ಸಂಸ್ಥೆಯ ಪಾತ್ರವು ಮಹತ್ತರವಾದುದು. ಮೂರು ಸಾವಿರಕ್ಕೂ ಹೆಚ್ಷು ಜನರಿಗೆ ಉದ್ಯೋಗ ನೀಡಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.
ರಾಜೀವ್ ಗಾಂದೀ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಎಸ್.ಸಚ್ಚಿದಾನಂದ ಅವರು ಮಾತನಾಡಿ, ನಾವು ಪದವೀಧರಾದ ಬಳಿಕ ಸಮಾಜಕ್ಕೆ ಸಮಾಜಕ್ಕೆ ಕೊಡುಗೆಯಾಗಬೇಕಿದೆ. ಅದರಲ್ಲೂ ವೈದ್ಯಕೀಯ ವೃತ್ತಿಯೊಂದಿಗೆ ನಾವು ಸಮಾಜದಲ್ಲಿ ಮಾನವೀಯ ಮೌಲ್ಯಗಳೊಂದಿಗೆ ಮುನ್ನಡೆಯಬೇಕಿದೆ ಎಂದರು.
ನಾವು ಯಾವುದೇ ಅಡ್ಡದಾರಿ ಹಿಡಿಯದೆ ಕಠಿಣ ಪರಿಶ್ರಮದೊಂದಿಗೆ ಮುನ್ನಡೆದರೆ ಯಶಸ್ಸಿನ ಮೆಟ್ಟಿಲನ್ನೇರ ಬಹುದು. ಪದವೀಧರರಾದ ಬಳಿಕ ಸಮಾಜದ ಸೇವೆಗೈಯ್ಯಲು ಉತ್ತಮ ಅವಕಾಶ ದೊರೆತಿದ್ದು ಇದನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಿ ಎಂದರು.
ಇದೇ ಸಂದರ್ಭದಲ್ಲಿ ರ್ಯಾಂಕ್ ಪಡೆದ ಹಾಗೂ ಶೈಕ್ಷಣಿಕ ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸಲಾ ಯಿತು. ಕಣಚೂರು ವೈದ್ಯಕೀಯ ಕಾಲೇಜಿನ ಅಧ್ಯಕ್ಷರಾದ ಹಾಜಿ ಯು.ಕೆ.ಮೋನು ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕೇರಳದ ಅಝೀಜಿಯಾ ಮೆಡಿಕಲ್ ಎಜ್ಯುಕೇಶನ್ ಸೊಸೈಟಿಯ ಹಾಜಿ ಅಬ್ದುಲ್ ಅಝೀಜ್, ಝೊಹರ ಯು.ಕೆ ಮೋನು, ಮೆಡಿಕಲ್ ಸುಪರಿಡೆಂಟ್, ಹರೀಶ್ ಶೆಟ್ಟಿ , ಡೀನ್ ವಿರೂಪಾಕ್ಷ ಮೊದಲಾದವರು ಉಪಸ್ಥಿತರಿದ್ದರು.
ಕಣಚೂರು ಮೆಡಿಕಲ್ ಅಕಾಡೆಮಿಯ ಡಾ.ಅಬ್ದುಲ್ ರಹಿಮಾನ್ ಸ್ವಾಗತಿಸಿದರು. ಡಾ.ವಿರೂಪಾಕ್ಷ ಅವರು ವಂದಿಸಿದರು.










