Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಮಂಗಳೂರು ‘ಕೋಮುವಾದಿ’ಗಳ ಕೇಂದ್ರವಲ್ಲ :...

ಮಂಗಳೂರು ‘ಕೋಮುವಾದಿ’ಗಳ ಕೇಂದ್ರವಲ್ಲ : ಸಸಿಕಾಂತ್ ಸೆಂಥಿಲ್

‘ಸಾಮರಸ್ಯ ಮಂಗಳೂರು’ ವತಿಯಿಂದ ‘ಸೌಹಾರ್ದ ಸಮ್ಮಿಲನ’ ಕಾರ್ಯಕ್ರಮ

ವಾರ್ತಾಭಾರತಿವಾರ್ತಾಭಾರತಿ29 May 2022 8:14 PM IST
share
ಮಂಗಳೂರು ‘ಕೋಮುವಾದಿ’ಗಳ ಕೇಂದ್ರವಲ್ಲ : ಸಸಿಕಾಂತ್ ಸೆಂಥಿಲ್

ಮಂಗಳೂರು : ಮಂಗಳೂರು ಕೋಮುವಾದಿಗಳ ಕೇಂದ್ರ ಎಂಬ ಭಾವನೆ ಕೆಲವರಲ್ಲಿದೆ. ಸುಮಾರು ಎರಡುವರೆ ವರ್ಷಗಳ ಕಾಲ ದ.ಕ.ಜಿಲ್ಲಾಧಿಕಾರಿಯಾಗಿದ್ದಾಗ ಇಲ್ಲಿನ ಸ್ಥಿತಿಗತಿಗಳನ್ನು ತುಂಬಾ ಹತ್ತಿರದಿಂದ ತಿಳಿದು ಕೊಂಡಿರುವ ನನಗೆ ಮಂಗಳೂರು ಕೋಮುವಾದಿಗಳ ಕೇಂದ್ರವೆಂದು ಅನಿಸಿಲ್ಲ. ಇಲ್ಲಿನ ಶೇ.೧೦ರಷ್ಟು ಮಂದಿ ಮಾತ್ರ ಕೋಮು ಸಾಮರಸ್ಯ ಹದಗೆಡಿಸುತ್ತಿದ್ದಾರೆ. ಉಳಿದಂತೆ ಶೇ.೯೦ರಷ್ಟು ಮಂದಿ ಕೋಮು ಸಾಮರಸ್ಯಕ್ಕೆ ಹಾತೊರೆಯುತ್ತಿದ್ದಾರೆ. ಹಾಗಾಗಿ ಮಂಗಳೂರು ಯಾವತ್ತೂ ‘ಕೋಮುವಾದಿ’ಗಳ ಕೇಂದ್ರವಲ್ಲ ಎಂದು ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಅಭಿಪ್ರಾಯಪಟ್ಟರು.

‘ಸಾಮರಸ್ಯ ಮಂಗಳೂರು‘ ಇದರ ವತಿಯಿಂದ ರವಿವಾರ ನಗರದ ಸಿವಿ ನಾಯಕ್ ಹಾಲ್‌ನಲ್ಲಿ ನಡೆದ ‘ಸೌಹಾರ್ದ ಸಮ್ಮಿಲನ’ ಉದ್ಘಾಟಿಸಿ ಅವರು ಮಾತನಾಡಿದರು.

ನೀವು ದಿನನಿತ್ಯ ಮಂಗಳೂರಿನಲ್ಲಿ ಸಂಚರಿಸುವಾಗ ಎಷ್ಟು ಮಂದಿಯ ಜೊತೆ ಮಾತುಕತೆ ನಡೆಸಿದಿರಿ, ವ್ಯವಹರಿಸಿದಿರಿ ಎಂಬುದರ ಬಗ್ಗೆ ಒಮ್ಮೆ ನೆನಪಿಸಿಕೊಳ್ಳಿ. ಆವಾಗ ನಿಮ್ಮ ಮನಸ್ಸಿನಲ್ಲಿ ಕಿಂಚಿತ್ತೂ ಕೋಮುವಾದದ ಅನುಭವ ಆಗಿರುವುವುದಿಲ್ಲ. ಅದರ ಸುಳಿವೂ ಸಿಕ್ಕಿರುವುದಿಲ್ಲ. ಶೇ.೧೦ರಷ್ಟು ಮಂದಿ ಜನರಲ್ಲಿ ಮಾತ್ರ ಕೋಮುವಾದದ ಅಥವಾ ವಿಭಜನೆಯ ಮನಸ್ಥಿತಿ ಇದೆ ಎಂದ ಸಸಿಕಾಂತ್ ಸೆಂಥಿಲ್ ನೀನು ಹಿಂದೂ ಪರ ಇದ್ದೀಯಾ ಅಥವಾ ಮುಸ್ಲಿಂ ಪರ ಇದ್ದೀಯಾ? ಎಂದು ಕೇಳುವ ಬದಲು ನೀನು ಭಾರತದ ಪರ ಇದ್ದೀಯಾ? ಎಂದು ಕೇಳುತ್ತಲೇ ಎಲ್ಲರನ್ನೂ ಒಗ್ಗೂಡಿಸಲು ಪ್ರಯತ್ನಿಸಬೇಕು. ವಿಭಜನೆಯ ಮನಸ್ಥಿತಿಯನ್ನು ಕಂಡು ಸುಮ್ಮನಿ ರದೆ ಅದರ ವಿರುದ್ಧ ಹೋರಾಟ ಮಾಡಬೇಕಾಗಿದೆ ಎಂದರು.

ಭಾರತವನ್ನು ನಂಬುವವರು ಮತ್ತು ನಂಬದವರು ಯಾರು ಎಂಬುದನ್ನು ನಾವು ಚೆನ್ನಾಗಿ ಅರ್ಥ ಮಾಡಿಕೊಳ್ಳ ಬೇಕು. ನಾವು ನಮ್ಮ ಮಕ್ಕಳು, ಮೊಮ್ಮಕ್ಕಳಿಗೆ ಉತ್ತಮ ಶಿಕ್ಷಣ, ಆಸ್ತಿ ಸಂಪಾದಿಸಿಕೊಟ್ಟರೆ ಸಾಲದು. ನೆಮ್ಮದಿಯಿಂದ ಬದುಕುವ ವಾತಾವರಣವನ್ನೂ ಕೂಡ ಸೃಷ್ಟಿಸಬೇಕು. ಅದಕ್ಕಾಗಿಯಾದರೂ ನಾವು ನ್ಯಾಯದ ಪರ ನಿಲ್ಲಬೇಕು. ಅನ್ಯಾಯದ ವಿರುದ್ಧ ಹೋರಾಟ ಮಾಡಬೇಕು. ಹಾಗಂತ ಬೀದಿಗಿಳಿಯಬೇಕು ಅಂತ ನಾನು ಹೇಳುವುದಿಲ್ಲ. ಅವರವರ ಇತಿಮಿತಿಯೊಳಗೆ ಏನೇನು ಮಾಡಲು ಸಾಧ್ಯವೋ ಅದನ್ನು ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ವಿಭಜನೆಯ ಮನಸ್ಥಿತಿಯ ಶೇ.೧೦ರಷ್ಟು ಮಂದಿಯ ಜೊತೆ ಜಗಳವಾಡುವ ಬದಲು ಜನರ ಪರವಾಗಿ ಕೆಲಸ ಮಾಡಬೇಕಿದೆ ಎಂದು ಸಸಿಕಾಂತ್ ಸೆಂಥಿಲ್ ಹೇಳಿದರು.

ಹುಬ್ಬಳ್ಳಿ-ಧಾರವಾಡದ ವಿರಕ್ತಮಠದ ಗುರುಪಾದೇಶ್ವರ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು.

ಅತಿಥಿಯಾಗಿ ಭಾಗವಹಿಸಿದ್ದ ಸಂತ ಅಲೋಶಿಯಸ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಶಿಕಾರಿಪುರ ಕೃಷ್ಣಮೂರ್ತಿ ಮಾತನಾಡಿ ಸಾಮರಸ್ಯದಿಂದ ಕೂಡಿದ ಮಂಗಳೂರನ್ನು ಮಾಧ್ಯಮಗಳು ಅಪಾಯಕಾರಿ ನಗರ ಎಂದು ಬಿಂಬಿಸಿದೆ. ಆದಾಗ್ಯೂ ಸಾಮರಸ್ಯ ಬಯಸುವ ಎಲ್ಲರೂ ಶಿಕ್ಷಣದ ಮೂಲಕ ಮನುಷ್ಯ ಧರ್ಮದ ಸಮನ್ವಯತೆ ಸಾಧಿಸುವ ಕೆಲಸ ಮಾಡಬೇಕಿದೆ ಎಂದರು.

ದೇರೇಬೈಲ್ ಚರ್ಚ್‌ನ ಫಾ. ಜೋಸೆಫ್ ಮಾರ್ಟಿಸ್ ಮಾತನಾಡಿ ಭಾರತವು ಮೌಲ್ಯಯುತವಾದ, ವೈವಿಧ್ಯತೆಯ, ನೆಮ್ಮದಿಯ, ಒಗ್ಗಟ್ಟಿನ, ಪ್ರೀತಿಭರಿತ ದೇಶವಾಗಿದೆ ಎಂದು ಹೇಳಲು ನನಗೆ ಹೆಮ್ಮೆಯಿದೆ. ಜಗತ್ತಿನ ಯಾವ ರಾಷ್ಟ್ರದಲ್ಲೂ ಕೂಡ ಇಂತಹ ವೈವಿಧ್ಯತೆ ಕಾಣಲು ಸಾಧ್ಯವಿಲ್ಲ. ಭವಿಷ್ಯದಲ್ಲೂ ಈ ಐಕ್ಯತೆ, ಸೌಹಾರ್ದವನ್ನು ಉಳಿಸಿ, ಬೆಳೆಸಬೇಕಿದೆ ಎಂದರು.

ಸಾಮಾಜಿಕ ಚಿಂತಕ ಇಸಾಕ್ ಪುತ್ತೂರು ಮಾತನಾಡಿ ಯಾವ ಧರ್ಮವೂ ಕೋಮುವಾದವನ್ನು ಪ್ರತಿಪಾದಿ ಸುತ್ತಿಲ್ಲ. ಆದರೆ ಕೆಲವರು ಧರ್ಮವನ್ನು ದುರುಪಯೋಗಪಡಿಸುತ್ತಿದ್ದಾರೆ. ಧರ್ಮಗಳ ಮೌಲ್ಯವನ್ನು ನಾಶಗೊಳಿಸಿ ಕೆಡುಕುಗಳಿಗೆ ಪ್ರಚೋದನೆ ನೀಡುತ್ತಿದ್ದಾರೆ. ಧರ್ಮವನ್ನು ಕೋಮುವಾದದಿಂದ ಮುಕ್ತಗೊಳಿಸುವ ಸಲುವಾಗಿ ಇಂತಹ ಸೌಹಾರ್ದ ಸಮ್ಮಿಲನವನ್ನು ಹೆಚ್ಚೆಚ್ಚು ಆಯೋಜಿಸಬೇಕಿದೆ ಎಂದರು.

ಉಡುಪಿ ಸಹಬಾಳ್ವೆಯ ಅಧ್ಯಕ್ಷ ಅಮೃತ್ ಶೆಣೈ, ಸತ್ಯ ಸಾರಮನಿ ಯುವ ವೇದಿಕೆಯ ಕೇಂದ್ರ ಸಮಿತಿಯ ಅಧ್ಯಕ್ಷ ರಘು ಧರ್ಮಸೇನ ಬೆಳ್ತಂಗಡಿ, ಯುವ ಪತ್ರಕರ್ತ ರಾ. ಚಿಂತನ್, ವಿರಕ್ತ ಮಠದ ಉಪಾಧ್ಯಕ್ಷೆ ಮಂಜುಳಾ ಹಿರೇಮಠ, ಸಾಮಾಜಿಕ ಹೋರಾಟಗಾರ್ತಿ ವಿದ್ಯಾ ದಿನಕರ್ ಮಾತನಾಡಿದರು.

ಸಾಮರಸ್ಯ ಮಂಗಳೂರು ಇದರ ಅಧ್ಯಕ್ಷೆ ಮಂಜುಳಾ ವೈ. ನಾಯಕ್ ಸ್ವಾಗತಿಸಿದರು. ಸಾಮರಸ್ಯ ಮಂಗಳೂರು ಇದರ ಸಂಚಾಲಕ ಮುಹಮ್ಮದ್ ಕುಂಜತ್ತಬೈಲ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರೋಹಿತ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X