ಮೇ 31ರಂದು ಫಲಾನುಭವಿಗಳೊಂದಿಗೆ ಚರ್ಚೆ
ಉಡುಪಿ : ಸ್ವತಂತ್ರ ಭಾರತದ ಅಮೃತ ಮಹೋತ್ಸವ ಸುಸಂದರ್ಭದ ಸ್ಮರಣಾರ್ಥವಾಗಿ ಪ್ರಧಾನ ಮಂತ್ರಿ ಕೇಂದ್ರದ ೯ ಸಚಿವರು/ಇಲಾಖೆಗಳನ್ನು ಒಳಗೊಂಡ ೧೬ ಯೋಜನೆಗಳು/ಕಾರ್ಯಕ್ರಮಗಳ ಕುರಿತು ಫಲಾನುಭವಿ ಗಳೊಂದಿಗೆ ಮೇ 31ರಂದು ಚರ್ಚೆ ನಡೆಸಲಿದ್ದಾರೆ.
ಉಡುಪಿ ಜಿಲ್ಲೆಯ ಈ ಕಾರ್ಯಕ್ರಮವನ್ನು ಬೆಳಗ್ಗೆ 10ಗಂಟೆಗೆ ಮಣಿಪಾಲ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಹಮ್ಮಿಕೊಳ್ಳ ಲಾಗಿದೆ. ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಉದ್ಘಾಟಿಸಲಿರುವರು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭಾಗವಹಿಸಲಿರು ವರು. ಅಧ್ಯಕ್ಷತೆಯನ್ನು ಉಡುಪಿ ಶಾಸಕ ಕೆ.ರಘುಪತಿ ಭಟ್ ವಹಿಸಲಿರುವರು ಎಂದು ಪ್ರಕಟಣೆ ತಿಳಿಸಿದೆ.
Next Story





