ಯುನಿವೆಫ್ ನಿಂದ ಹಜ್ ತರಬೇತಿ ಶಿಬಿರ
ಮಂಗಳೂರು : ಯುನಿವೆಫ್ ಕರ್ನಾಟಕ ಇದರ ದ.ಕ. ಘಟಕದ ವತಿಯಿಂದ ಹಜ್ ಪ್ರಾಯೋಗಿಕ ತರಬೇತಿ ಶಿಬಿರವನ್ನು ಜೂನ್ 3ರ ಅಪರಾಹ್ನ 3.30ಕ್ಕೆ ಕಂಕನಾಡಿಯ ಜಮೀಯತುಲ್ ಫ಼ಲಾಹ್ ಹಾಲ್ ನಲ್ಲಿ ಆಯೋಜಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಯುನಿವೆಫ್ ಕರ್ನಾಟಕ ಅಧ್ಯಕ್ಷ ಮತ್ತು ಉಳ್ಳಾಲ ನಿಮ್ರಾ ಮಸೀದಿಯ ಖತೀಬ್ ರಫೀಉದ್ದೀನ್ ಕುದ್ರೋಳಿ ಹಜ್ ಮತ್ತು ಉಮ್ರಾದ ವಿಧಿವಿಧಾನಗಳ ಬಗ್ಗೆ ಪ್ರಾಯೋಗಿಕವಾಗಿ ಪ್ರಾತ್ಯಕ್ಷಿಕೆ ಸಹಿತ ತರಬೇತಿ ನೀಡಲಿದ್ದಾರೆ. ಹಜ್ ಕರ್ಮದ ಬಗ್ಗೆ ಹಾಜಿಗಳ ಸಂಶಯಗಳಿಗೆ ಸರಿಯಾದ ಮಾಹಿತಿಯನ್ನೂ ನೀಡಲಿರುವರು.
ಹಜ್ ಕರ್ಮದ ವಿವಿಧ ಆಯಾಮಗಳ ಛಾಯಾಚಿತ್ರ ಪ್ರದರ್ಶನವನ್ನು ಕೂಡಾ ಈ ಸಂದರ್ಭದಲ್ಲಿ ಏರ್ಪಡಿಸಲಾಗುವುದು. ಹೆಚ್ವಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9380397807 ಯನ್ನು ಸಂಪರ್ಕಿಸಬೇಕೆಂದು ತಿಳಿಸಲಾಗಿದೆ.
Next Story