ಐಪಿಎಲ್ ಫೈನಲ್: ಗುಜರಾತ್ ತಂಡಕ್ಕೆ 131 ರನ್ ಗಳ ಗುರಿ ನೀಡಿದ ರಾಜಸ್ಥಾನ ರಾಯಲ್ಸ್

Photo: BCCI/PTI
ಅಹಮದಾಬಾದ್: ಐಪಿಎಲ್ ಟ್ವೆಂಟಿ-20 ಟೂರ್ನಿಯ ಫೈನಲ್ ನಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಗುಜರಾತ್ ಟೈಟಾನ್ಸ್ ತಂಡದ ಗೆಲುವಿಗೆ 131 ರನ್ ಗುರಿ ನೀಡಿದೆ.
ರವಿವಾರ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಟಾಸ್ ಜಯಿಸಿದ ರಾಜಸ್ಥಾನ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ಗಳ ನಷ್ಟಕ್ಕೆ 130 ರನ್ ಗಳಿಸಲಷ್ಟೇ ಶಕ್ತವಾಯಿತು.
ಅಗ್ರ ಕ್ರಮಾಂಕದ ಬ್ಯಾಟರ್ ಗಳಾದ ಜೋಸ್ ಬಟ್ಲರ್ 39 ರನ್ (35 ಎಸೆತ ),ಯಶಸ್ವಿ ಜೈಸ್ವಾಲ್ 22 ರನ್(16 ಎಸೆತ), ಸಂಜು ಸ್ಯಾಮ್ಸನ್ 14 ರನ್ (11ಎಸೆತ), ದೇವದತ್ತ ಪಡಿಕ್ಕಲ್ 2 ರನ್ (10 ಎಸೆತ), ಹೆಟ್ಮೆಯರ್ 11 ರನ್ (12 ಎಸೆತ ) ಐಪಿಎಲ್ ಫೈನಲ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು.
ನಾಯಕ ಹಾರ್ದಿಕ್ ಪಾಂಡ್ಯ 4 ಓವರ್ ಗಳಲ್ಲಿ 17 ರನ್ ನೀಡಿ 3 ವಿಕೆಟ್ ಗಳನ್ನು ಉರುಳಿಸಿ ರಾಜಸ್ಥಾನದ ಬ್ಯಾಟರ್ ಗಳಿಗೆ ಸಿಂಹಸ್ವಪ್ನರಾದರು. ಸಾಯಿಕಿಶೋರ್(2-20) ಎರಡು ವಿಕೆಟ್ ಪಡೆದರು.
Next Story