ಮಾಲ್ಡಾ: ಟಿಎಂಸಿ ಬಣಗಳ ನಡುವೆ ಘರ್ಷಣೆ; ಕನಿಷ್ಠ 12 ಮನೆಗಳಿಗೆ ಹಾನಿ

PTI
ಇಂಗ್ಲಿಷ್ ಬಾಝಾರ್ (ಪ.ಬಂ),ಮೇ 29: ಮಾಲ್ಡಾ ಜಿಲ್ಲೆಯಲ್ಲಿ ಟಿಎಂಸಿಯ ಎರಡು ಬಣಗಳ ನಡುವೆ ಘರ್ಷಣೆ ನಡೆದಿದ್ದು,ಕಚ್ಚಾ ಬಾಂಬ್ಗಳನ್ನು ಎಸೆಯಲಾಗಿತ್ತು. ಕನಿಷ್ಠ 12 ಮನೆಗಳು ಹಾನಿಗೊಂಡಿದ್ದು,ಜನರಲ್ಲಿ ಉದ್ವಿಗ್ನತೆ ತಲೆದೋರಿದೆ.
ಶನಿವಾರ ಮಾಣಿಕ್ಚಾಕ್ ಬ್ಲಾಕ್ ನ ಗೋಪಾಲಪುರ ಬಲುತೋಲಾ ಪ್ರದೇಶದಲ್ಲಿ ಘಟನೆ ನಡೆದಿದೆ. ಪಂಚಾಯತ್ ಸಮಿತಿ ಪದಾಧಿಕಾರಿ ಸೈಫುದ್ದೀನ್ ಶೇಖ್ ನೇತೃತ್ವದ ಟಿಎಂಸಿ ಕಾರ್ಯಕರ್ತರ ಗುಂಪು ಮತ್ತು ಪಕ್ಷದ ಪ್ರದೇಶ ಅಧ್ಯಕ್ಷ ನಾಸಿರ್ ಅಲಿ ನೇತೃತ್ವದ ಬಣ ಪರಸ್ಪರ ಹೊಡೆದಾಡಿಕೊಂಡಿವೆ.
ಪ್ರದೇಶದಲ್ಲಿ ಭಾರೀ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ಈ ಘಟನೆಗೂ ಟಿಎಂಸಿಗೂ ಸಂಬಂಧವಿಲ್ಲ. ಶೇಖ್ ಮತ್ತು ಅಲಿ ನಡುವೆ ಹಳೆಯ ಭೂ ವಿವಾದವಿದೆ ಮತ್ತು ಅದು ಹಿಂದೆಯೂ ಹಿಂಸೆಗೆ ಕಾರಣವಾಗಿತ್ತು ಎಂದು ಮಾಣಿಕ್ಚಾಕ್ ನ ಟಿಎಂಸಿ ಶಾಸಕಿ ಸಾವಿತ್ರಿ ಮಿತ್ರಾ ತಿಳಿಸಿದ್ದಾರೆ.
Next Story