ಕೇಂದ್ರದಿಂದ ಸೋಮವಾರ ‘‘ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್’’ನ ಸೌಲಭ್ಯ ಬಿಡುಗಡೆ

Photo: PTI
ಹೊಸದಿಲ್ಲಿ, ಮೇ 29: ಪ್ರಧಾನಿ ನರೇಂದ್ರ ಮೋದಿ ಅವರು ‘‘ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್’’ ಯೋಜನೆ ಅಡಿಯಲ್ಲಿ ಸೌಲಭ್ಯಗಳನ್ನು ಸೋಮವಾರ ವೀಡಿಯೊ ಕಾನ್ಫರೆನ್ಸ್ ಮೂಲಕ ಬಿಡುಗಡೆ ಮಾಡಲಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ರವಿವಾರ ಹೇಳಿದೆ.
2020 ಮಾರ್ಚ್ 11ರಿಂದ 2022 ಫೆಬ್ರವರಿ 28ರ ನಡುವೆ ಕೋವಿಡ್ನಿಂದ ಹೆತ್ತವರು, ಕಾನೂನಾತ್ಮಕ ಪಾಲಕರು, ದತ್ತು ಪಾಲಕರನ್ನು ಕಳೆದುಕೊಂಡ ಮಕ್ಕಳಿಗೆ ಸರಕಾರ ಈ ಯೋಜನೆಯನ್ನು ಕಳೆದ ವರ್ಷ ಮೇ 29ರಂದು ಆರಂಭಿಸಿತ್ತು
Next Story





