Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಭಾರತದ ಆರ್ಥಿಕ ಅಭಿವೃದ್ಧಿಯನ್ನು...

ಭಾರತದ ಆರ್ಥಿಕ ಅಭಿವೃದ್ಧಿಯನ್ನು ತಡೆಯುತ್ತಿರುವ ಧ್ರುವೀಕರಣ

ಭರತ್ ಡೋಗ್ರಾಭರತ್ ಡೋಗ್ರಾ30 May 2022 10:01 AM IST
share
ಭಾರತದ ಆರ್ಥಿಕ ಅಭಿವೃದ್ಧಿಯನ್ನು ತಡೆಯುತ್ತಿರುವ ಧ್ರುವೀಕರಣ

ಒಂದು ಆರ್ಥಿಕತೆಯಲ್ಲಿ ಲಕ್ಷಾಂತರ ಜನರು ತಮ್ಮದೇ ಮಟ್ಟ ಗಳಲ್ಲಿ ಹಾಗೂ ವಿವಿಧ ಬಾಂಧವ್ಯಗಳಲ್ಲಿ ಕೆಲಸ ಮಾಡುತ್ತಾರೆ. ಜೊತೆಗಾರಿಕೆ, ಸಹಕಾರ ಮತ್ತು ಸಮಾನ ಧ್ಯೇಯದ ಭಾವನೆಗಳಿಂದ ಜನರು ಎಷ್ಟು ಪ್ರಭಾವಿತರಾಗುತ್ತಾರೋ, ಅದೇ ಮಟ್ಟದಲ್ಲಿ ಆರ್ಥಿಕತೆ ಬಲಗೊಳ್ಳುತ್ತದೆ.

ಭಾರತ ಸರಕಾರದ ಮಾಜಿ ಸಲಹೆಗಾರ ಪ್ರೊಫೆಸರ್ ಕೌಶಿಕ್ ಬಸು ಇತ್ತೀಚೆಗೆ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (ಪಿಟಿಐ)ಕ್ಕೆ ನೀಡಿದ ಸಂದರ್ಶನವೊಂದರಲ್ಲಿ, ಭಾರತೀಯ ಸಮಾಜದ ಹೆಚ್ಚುತ್ತಿರುವ ಧ್ರುವೀಕರಣದ ವಿರುದ್ಧ ಸಕಾಲಿಕ ಎಚ್ಚರಿಕೆ ನೀಡಿದ್ದಾರೆ. ‘‘ಭಾರತೀಯ ಸಮಾಜದಲ್ಲಿ ಹೆಚ್ಚುತ್ತಿರುವ ವಿಭಜನೆ ಮತ್ತು ಧ್ರುವೀಕರಣವು ಬೇಸರದ ಸಂಗತಿ ಮಾತ್ರವಲ್ಲ, ಅದು ದೇಶದ ಬೆಳವಣಿಗೆಯ ಪಂಚಾಂಗಕ್ಕೇ ಹಾನಿಗೈಯುತ್ತಿದೆ’’ ಎಂದು ವಿಶ್ವಬ್ಯಾಂಕ್‌ನಲ್ಲಿ ಮುಖ್ಯ ಆರ್ಥಿಕ ತಜ್ಞನಾಗಿಯೂ ಸೇವೆ ಸಲ್ಲಿಸಿರುವ ಅವರು ಹೇಳಿದರು.

‘‘ದೇಶವೊಂದರ ಬೆಳವಣಿಗೆಯು ಆರ್ಥಿಕ ನೀತಿಯೊಂದನ್ನೇ ಅವಲಂಬಿಸಿಲ್ಲ. ಜನರಲ್ಲಿ ಇರುವ ಪರಸ್ಪರ ವಿಶ್ವಾಸವು ದೇಶವೊಂದರ ಆರ್ಥಿಕ ಯಶಸ್ಸಿನಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎನ್ನುವುದಕ್ಕೆ ಪುರಾವೆಯಿದೆ’’ ಎಂದು ಅವರು ಹೇಳಿದರು.

ಪ್ರೊ. ಬಸು ಈ ಸಂದರ್ಶನದಲ್ಲಿ ಭಾರತದ ಆರ್ಥಿಕತೆಯ ವಿವಿಧ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಅವುಗಳೆಂದರೆ ಯುವಕರ ಅತ್ಯಧಿಕ ನಿರುದ್ಯೋಗ ದರ (24 ಶೇ.), ಚಿಲ್ಲರೆ ಹಣದುಬ್ಬರವು ಎಪ್ರಿಲ್‌ನಲ್ಲಿ 8 ವರ್ಷಗಳಲ್ಲೇ ಗರಿಷ್ಠ (7.8ಶೇ.), ಅದೇ ತಿಂಗಳಲ್ಲಿ ಸಗಟು ಹಣದಬ್ಬರ 24 ವರ್ಷಗಳಲ್ಲೇ ಗರಿಷ್ಠ (15.08 ಶೇ.) ಹಾಗೂ ಸಣ್ಣ ಉದ್ಯಮಿಗಳು, ರೈತರು ಮತ್ತು ಕಾರ್ಮಿಕರ ನೆರವಿಗೆ ಸರಕಾರ ತುರ್ತಾಗಿ ಧಾವಿಸುವ ಅಗತ್ಯವಿದೆ.

ಆರ್ಥಿಕ ಸ್ಥಿತಿಗತಿ ಕುರಿತ ಈ ಎಲ್ಲ ಅಂಶಗಳು ಮುಖ್ಯವಾದರೂ, ಧ್ರುವೀಕರಣದ ಬಗ್ಗೆ ಅವರು ಆಡಿರುವ ಮಾತುಗಳು ತಲೆಬರಹಗಳಾಗಿವೆ. ಇದಕ್ಕೆ ಕಾರಣ ಹುಡುಕುವುದೇನೂ ಕಷ್ಟವಲ್ಲ. ಧ್ರುವೀಕರಣದ ಬಗ್ಗೆ ಹೆಚ್ಚೆಚ್ಚು ಜನರು ಚಿಂತಿತರಾಗುತ್ತಿದ್ದಾರೆ ಹಾಗೂ ಉನ್ನತ ಅರ್ಥಶಾಸ್ತ್ರಜ್ಞರೊಬ್ಬರು ಇದನ್ನು ಖಚಿತಪಡಿಸಿರುವುದು ಹೆಚ್ಚು ಪ್ರಾಮುಖ್ಯವನ್ನು ಪಡೆದುಕೊಂಡಿದೆ.

ಸುಮಾರು 8 ವರ್ಷಗಳ ಹಿಂದಿನವರೆಗೂ, ಎಲ್ಲ ಸಮುದಾಯ ಗಳನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವಲ್ಲಿ, ಸಾಂವಿಧಾನಿಕ ವೌಲ್ಯಗಳಾದ ಸಮಾನತೆ ಮತ್ತು ನಿಷ್ಪಕ್ಷಪಾತತೆಯನ್ನು ಕಾಯ್ದು ಕೊಂಡು ಬರುವಲ್ಲಿ ಸಾಕಷ್ಟು ಉತ್ತಮ ದಾಖಲೆಯನ್ನು ಭಾರತ ಹೊಂದಿತ್ತು. ಆದರೆ, ಕಳೆದ 8 ವರ್ಷಗಳ ಅವಧಿಯಲ್ಲಿ, ದೇಶದಲ್ಲಿ ಮತ್ತು ಆರ್ಥಿಕತೆಯಲ್ಲಿ ಗಮನಾರ್ಹ ಉಪಸ್ಥಿತಿ ಹೊಂದಿರುವ ಕೆಲವು ಅಲ್ಪಸಂಖ್ಯಾತ ಸಮುದಾಯಗಳು ಅಭದ್ರತೆಯ ಭಾವನೆ ಯಿಂದ ಬಳಲುತ್ತಿವೆ ಹಾಗೂ ತಮ್ಮ ವಿರುದ್ಧ ತಾರತಮ್ಯ ಧೋರಣೆ ಅನುಸರಿಸಲಾಗುತ್ತಿದೆ ಎಂಬುದಾಗಿ ಭಾವಿಸಿವೆ.

ಅನೌಪಚಾರಿಕ ಕ್ಷೇತ್ರವು ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗಗಳನ್ನು ಒದಗಿಸುತ್ತದೆ. ಈ ಕ್ಷೇತ್ರದಲ್ಲಿ ಮತ್ತು ದುಡಿಯುವ ವರ್ಗದಲ್ಲಿ ಈ ಸಮುದಾಯಗಳು ವಹಿಸಿರುವ ಮಹತ್ವದ ಪಾತ್ರವನ್ನು ಮತ್ತು ಅವರ ವಿಶೇಷ ಪರಿಣತಿಯನ್ನು ಎಲ್ಲರೂ ಗುರುತಿಸುತ್ತಾರೆ. ಅವರು ಆರ್ಥಿಕತೆಯಲ್ಲಿನ ಪ್ರಮುಖ ಅಂತರವನ್ನೂ ತುಂಬಿದ್ದಾರೆ. ಆ ಸ್ಥಾನವನ್ನು ಬದಲಿಸುವುದು ಸುಲಭವಲ್ಲ.

ಈ ಮಹತ್ವದ ಸಮುದಾಯಗಳು ಅಭದ್ರತೆಯ ಭಾವನೆಯಿಂದ ಬಳಲುತ್ತಿರುವಾಗ ಮತ್ತು ಕಡಿಮೆ ಆತ್ಮವಿಶ್ವಾಸ ಹೊಂದಿರುವಾಗ, ಹೂಡಿಕೆ ಮಾಡಲು ಮುಂದಾಗುವುದಿಲ್ಲ ಹಾಗೂ ಕೆಲಸ ಮತ್ತು ವ್ಯಾಪಾರಕ್ಕಾಗಿ ಪ್ರಯಾಣಿಸಲು ಹೆಚ್ಚಿನ ಉತ್ಸಾಹ ಹೊಂದಿರುವುದಿಲ್ಲ. ಹಾಗಾಗಿ, ಆ ಸಮುದಾಯಗಳ ಸದಸ್ಯರು ಹೆಚ್ಚಿನ ಪ್ರಮಾಣದಲ್ಲಿ ನಿರುದ್ಯೋಗ ಮತ್ತು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. ಇವು ಗಳೆಲ್ಲದರ ಪರಿಣಾಮವಾಗಿ ಆರ್ಥಿಕತೆಗೆ ಅವರು ನೀಡುವ ದೇಣಿಗೆ ಕುಂಠಿತವಾಗುತ್ತದೆ. ಇದರ ಫಲವಾಗಿ, ವಸ್ತುಗಳು ಮತ್ತು ಸೇವೆಗಳ ಪೂರೈಕೆ ಮಾರ್ಗದಲ್ಲಿ ವ್ಯತ್ಯಯ ಕಂಡುಬರಬಹುದು ಹಾಗೂ ಇದು ಸಮಸ್ಯೆಗಳಿಗೆ ಕಾರಣವಾಗಬಹುದು.

ಇದು ವಿಭಜನೆ ಮತ್ತು ಧ್ರುವೀಕರಣವು ಆರ್ಥಿಕತೆಯ ಮೇಲೆ ಬೀರುವ ಅತ್ಯಂತ ಸಹಜ ಪರಿಣಾಮಗಳು. ಪ್ರೊ. ಕೌಶಿಕ್ ತನ್ನ ಕಳವಳಗಳನ್ನು ವ್ಯಕ್ತಪಡಿಸುವಾಗ ‘ನಂಬಿಕೆ’ ಎಂಬ ಮಹತ್ವದ ಪದವನ್ನು ಬಳಸಿದ್ದಾರೆ. ಸಮಾಜವೊಂದರಲ್ಲಿ ನಂಬಿಕೆ ಹೆಚ್ಚುತ್ತಿದೆಯೇ ಅಥವಾ ಕುಗ್ಗುತ್ತಿದೆಯೇ ಎನ್ನುವುದು ಆ ಸಮಾಜದ ಆರ್ಥಿಕತೆಯ ಮೇಲೆ ಮಹತ್ವದ ಪರಿಣಾಮವನ್ನು ಬೀರುತ್ತದೆ. ಅಂತಿಮವಾಗಿ, ಆರ್ಥಿಕತೆಯು ಕೊಡುವುದು ಎಲ್ಲ ವ್ಯಕ್ತಿಗಳ ದೇಣಿಗೆಗಳ ಒಟ್ಟು ಮೊತ್ತ ವನ್ನು ಮಾತ್ರವಲ್ಲ, ಅದಕ್ಕಿಂತಲೂ ತುಂಬಾ ಹೆಚ್ಚಿನದು. ಜನರ ನಡುವಿನ ನಂಬಿಕೆ, ಸಹಕಾರ, ಜೊತೆಗಾರಿಕೆ ಮತ್ತು ಉತ್ಸಾಹ ಹಾಗೂ ಒಂದು ಸಮಾನ ಧ್ಯೇಯ ಮತ್ತು ಒಗ್ಗಟ್ಟು ಅತ್ಯಂತ ಮಹತ್ವದ್ದಾಗಿದೆ.

ಒಂದು ಆರ್ಥಿಕತೆಯಲ್ಲಿ ಲಕ್ಷಾಂತರ ಜನರು ತಮ್ಮದೇ ಮಟ್ಟ ಗಳಲ್ಲಿ ಹಾಗೂ ವಿವಿಧ ಬಾಂಧವ್ಯಗಳಲ್ಲಿ ಕೆಲಸ ಮಾಡುತ್ತಾರೆ. ಜೊತೆಗಾರಿಕೆ, ಸಹಕಾರ ಮತ್ತು ಸಮಾನ ಧ್ಯೇಯದ ಭಾವನೆಗಳಿಂದ ಜನರು ಎಷ್ಟು ಪ್ರಭಾವಿತರಾಗುತ್ತಾರೋ, ಅದೇ ಮಟ್ಟದಲ್ಲಿ ಆರ್ಥಿಕತೆ ಬಲಗೊಳ್ಳುತ್ತದೆ.

ಸಮಾನತೆ ಮತ್ತು ನಿಷ್ಪಕ್ಷಪಾತತೆ ಆಧಾರಿತ ಒಗ್ಗಟ್ಟಿಗೆ ಸರಕಾರಿ ನೀತಿಯು ಒತ್ತು ನೀಡಿದರೆ, ಅದು ಹೆಚ್ಚಿನ ಸ್ಥಿರತೆಗೆ ಪೂರಕವಾ ಗುತ್ತದೆ. ಉದ್ಯಮ ಬೆಳೆಯಲು ಸ್ಥಿರತೆ ಮುಖ್ಯವಾಗಬೇಕಾಗಿದೆ. ಇದು ಹೆಚ್ಚಿನ ವ್ಯಾಪಾರ ಮತ್ತು ಹೂಡಿಕೆಗೆ ಅವಕಾಶ ಕಲ್ಪಿಸುತ್ತದೆ. ಇಂಥ ವಾತಾವರಣದಲ್ಲಿ ವ್ಯಾಪಾರ ಮಾಡಲು ಇತರ ದೇಶಗಳಿಗೂ ಹೆಚ್ಚಿನ ಧೈರ್ಯ ಬರುತ್ತದೆ. ಹೆಚ್ಚಿನ ಒಗ್ಗಟ್ಟು, ಸ್ಥಿರತೆ ಹಾಗೂ ಅಲ್ಪಸಂಖ್ಯಾತರ ಹಕ್ಕುಗಳು ಸೇರಿದಂತೆ ಮಾನವಹಕ್ಕುಗಳಿಗೆ ನೀಡಲಾಗುವ ಹೆಚ್ಚಿನ ಗೌರವವು ದೇಶದ ಒಟ್ಟಾರೆ ಮಟ್ಟ ಮೇಲಕ್ಕೇ ರುತ್ತದೆ. ಆಗ ದೇಶದೊಂದಿಗೆ ಆರ್ಥಿಕ ಸಹಕಾರ ಏರ್ಪಡಿಸಲು ಮತ್ತು ವ್ಯಾಪಾರ ಮಾಡಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರುತ್ತಾರೆ. ಆದರೆ, ಸಮಾಜದಲ್ಲಿ ವಿಭಜನೆ ಮತ್ತು ಧ್ರುವೀಕರಣಕ್ಕೆ ಪ್ರೋತ್ಸಾಹ ನೀಡಿದರೆ ಇದರ ವಿರುದ್ಧ ಪರಿಸ್ಥಿತಿ ಸೃಷ್ಟಿಯಾಗುತ್ತದೆ.

share
ಭರತ್ ಡೋಗ್ರಾ
ಭರತ್ ಡೋಗ್ರಾ
Next Story
X