ಯುಪಿಎಸ್ಸಿ ಪರೀಕ್ಷೆ: ಶ್ರುತಿ ಶರ್ಮಾ ಟಾಪರ್, ಮೊದಲ ಮೂರೂ ಸ್ಥಾನಗಳು ಮಹಿಳಾ ಅಭ್ಯರ್ಥಿಗಳಿಗೆ
![ಯುಪಿಎಸ್ಸಿ ಪರೀಕ್ಷೆ: ಶ್ರುತಿ ಶರ್ಮಾ ಟಾಪರ್, ಮೊದಲ ಮೂರೂ ಸ್ಥಾನಗಳು ಮಹಿಳಾ ಅಭ್ಯರ್ಥಿಗಳಿಗೆ ಯುಪಿಎಸ್ಸಿ ಪರೀಕ್ಷೆ: ಶ್ರುತಿ ಶರ್ಮಾ ಟಾಪರ್, ಮೊದಲ ಮೂರೂ ಸ್ಥಾನಗಳು ಮಹಿಳಾ ಅಭ್ಯರ್ಥಿಗಳಿಗೆ](https://www.varthabharati.in/sites/default/files/images/articles/2022/05/30/337011-1653903388.gif)
ಶ್ರುತಿ ಶರ್ಮಾ (Photo: Twitter)
ಹೊಸದಿಲ್ಲಿ: ಕೇಂದ್ರ ಲೋಕ ಸೇವಾ ಆಯೋಗದ (ಸಿವಿಲ್ ಸರ್ವಿಸಸ್) 2021 ಪರೀಕ್ಷೆಗಳ ಫಲಿತಾಂಶ ಇಂದು ಘೋಷಣೆಯಾಗಿದ್ದು ಶ್ರುತಿ ಶರ್ಮಾ ಅವರು ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಈ ಬಾರಿ ಮೊದಲ ಮೂರು ಸ್ಥಾನಗಳನ್ನು ಮಹಿಳಾ ಅಭ್ಯರ್ಥಿಗಳೇ ಪಡೆದಿರುವುದು ವಿಶೇಷವಾಗಿದೆ. ಎರಡನೇ ಸ್ಥಾನವನ್ನು ಅಂಕಿತಾ ಅಗರ್ವಾಲ್ ಮತ್ತು ಮೂರನೇ ಸ್ಥಾನವನ್ನು ಗಾಮಿನಿ ಸಿಂಗ್ಲಾ ಗಳಿಸಿದ್ದಾರೆ.
ಈ ಬಾರಿ ಒಟ್ಟು 685 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಆಯೋಗ ತಿಳಿಸಿದೆ.
Next Story