ವಾರಸುದಾರರಿಗೆ ಸೂಚನೆ
ಉಡುಪಿ : ಉಡುಪಿ ಸರ್ವಿಸ್ ಬಸ್ ನಿಲ್ದಾಣದಲ್ಲಿ ಮೇ ೨೯ ರಂದು ಕುಸಿದು ಬಿದ್ದ ಸುಮಾರು ೭೦ರಿಂದ ೭೫ ವಷರ್ ಪ್ರಾಯದ ಅಪರಿಚಿತ ವ್ಯಕ್ತಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ವ್ಯಕ್ತಿಯು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಮೃತರ ವಾರಸುದಾರರ ಯಾರಾದರೂ ಇದ್ದಲ್ಲಿ ಉಡುಪಿ ನಗರ ಠಾಣೆ ದೂ.ಸಂಖ್ಯೆ:೦೮೨೦-೨೫೨೦೪೪೪, ಪಿ.ಐ ಉಡುಪಿ ನಗರ ಮೊ.ನಂ: ೯೪೮೦೮೦೫೪೦೮ ಅನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಯುವಕನ ಮೃತದೇಹ ಪತ್ತೆ: ಉಡುಪಿ ತೆಂಕುಪೇಟೆಯ ವುಡ್ಲ್ಯಾಂಡ್ಸ್ ಹೋಟೆಲ್ ರಸ್ತೆಯ ತಾಜ್ಮಹಲ್ ಹೋಟೆಲ್ನ ಎದುರಿನ ಕಟ್ಟಡದಲ್ಲಿ ಮೇ ೨೨ ರಂದು ಸುಮಾರು ೩೦ ರಿಂದ ೩೫ ವಷರ್ ಪ್ರಾಯದ ಅಪರಿಚಿತ ವ್ಯಕ್ತಿಯ ಮೃತದೇಹವು ಪತ್ತೆಯಾಗಿದೆ.
ಮೃತ ವ್ಯಕ್ತಿಯು ೫ ಅಡಿ ೪ ಇಂಚು ಎತ್ತರ, ಗೋಧಿ ಮೈಬಣ್ಣ ಹೊಂದಿದ್ದು, ಬೂದು ಬಣ್ಣದ ಪ್ಯಾಂಟ್ ಹಾಗೂ ಅರ್ಧ ತೋಳಿನ ಟೀ ಶರ್ಟ್ ಧರಿಸಿದ್ದಾರೆ. ಮೃತರ ವಾರಿಸುದಾರರ ಯಾರಾದರೂ ಇದ್ದಲ್ಲಿ ಉಡುಪಿ ನಗರ ಪೋಲಿಸ್ ಠಾಣೆ ದೂ. ಸಂಖ್ಯೆ : ೦೮೨೦-೨೫೨೦೪೪೪, ಮೊ.ನಂ: ೯೪೮೦೮೦೫೪೪೫, ೯೪೮೦೮೦೫೪೦೮, ಜಿಲ್ಲಾ ನಿಸ್ತಂತು ಕಚೇರಿ ೦೮೨೦-೨೫೨೬೪೪೪ ಅನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.