ವಿಯೆಟ್ನಾಮ್: ವಿಶ್ವದ ಅತ್ಯಂತ ಉದ್ದದ ಗಾಜಿನ ಸೇತುವೆಗೆ ವಿಶ್ವದಾಖಲೆಯ ಗರಿ
PHOTO CREDIT: AFP
ಹನೋಯಿ, ಮೇ 30: ವಿಯೆಟ್ನಾಮ್ನ ಗಾಜಿನ ತಳ ಹೊಂದಿರುವ ಬಾಚ್ ಸೇತುವೆ ವಿಶ್ವದ ಅತೀ ಉದ್ದದ ಗಾಜಿನ ಸೇತುವೆ ಎಂದು ಗಿನ್ನೆಸ್ ವಿಶ್ವದಾಖಲೆಗೆ ಪಾತ್ರವಾಗಿದೆ.
ಈ ಕುರಿತ ಗಿನ್ನೆಸ್ ವಿಶ್ವದಾಖಲೆಯ ಅಧಿಕಾರಿಗಳು ಕಳೆದ ವಾರಾಂತ್ಯ ಅಧಿಕೃತವಾಗಿ ಪ್ರಮಾಣೀಕರಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. 2,073 ಅಡಿ ಉದ್ದದ ತೂಗುಸೇತುವೆ ಹನೋಯಿಯ ವಾಯವ್ಯದ ಸೋನ್ಲಾ ಪ್ರಾಂತದಲ್ಲಿದ್ದು ಭೂಮಿಯ 492 ಅಡಿ ಎತ್ತರದಲ್ಲಿರುವ ಈ ಸೇತುವೆ ಸ್ಥಳೀಯ ಪ್ರವಾಸೋದ್ಯಮ ಪ್ರಾಧಿಕಾರ ಮತ್ತು ಫ್ರಾನ್ಸ್ ನ ನಿರ್ಮಾಣ ಸಂಸ್ಥೆಯ ಜಂಟಿ ಸಹಯೋಗದಲ್ಲಿ ನಿರ್ಮಾಣಗೊಂಡಿದೆ.
ಮೌಂಟೇನ್ ರೆಸಾರ್ಟ್ ನಲ್ಲಿ ಈ ಸೇತುವೆಯಿದ್ದು ಸೇತುವೆಯ ತಳಕ್ಕೆ ತಲಾ 40 ಮಿಲಿಮೀಟರ್ ದಪ್ಪದ 3 ಪದರದ ಗಾಜನ್ನು ಅಳವಡಿಸಲಾಗಿದೆ. ಒಂದೇ ಬಾರಿ 450 ಜನರ ಭಾರವನ್ನು ಹೊರುವ ಸಾವುರ್ಥ್ಯವನ್ನು ಈ ಸೇತುವೆ ಹೊಂದಿದೆ. ಚೀನಾದ ಗ್ವಾಂಗ್ಡಾಂಗ್ನಲ್ಲಿ 2020ರಲ್ಲಿ ನಿರ್ಮಿಸಲಾದ 526 ಅಡಿ ಉದ್ದದ ಗಾಜಿನ ಸೇತುವೆಯ ದಾಖಲೆಯನ್ನು ವಿಯೆಟ್ನಾಮ್ನ ಸೇತುವೆ ಮುರಿದಿದೆ.
World's longest glass bridge is unveiled in Vietnam pic.twitter.com/nw098n8YEm
— TRT World Now (@TRTWorldNow) May 30, 2022