''ಕನಕಪುರದ ಬಂಡೆಯನ್ನು ಸಿದ್ದರಾಮಯ್ಯ ಒಳಗಿನಿಂದಲೇ ಕೊರೆಯುತ್ತಿದ್ದಾರೆ'': ಬಿಜೆಪಿ

ಬೆಂಗಳೂರು: 'ರಾಜ್ಯ ಸಭೆ ಚುನಾವಣೆಯಲ್ಲಿ 2ನೇ ಅಭ್ಯರ್ಥಿ ಹಾಕದೆ, ತಮ್ಮ ಹೆಚ್ಚುವರಿ ಮತಗಳ ಮೂಲಕ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಡಿಕೆಶಿ ರಣತಂತ್ರ ರೂಪಿಸಿದ್ದರು' ಎಂದು ಬಿಜೆಪಿ ರೋಪಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ಈ ವಿಚಾರ ಅರಿತ ಸಿದ್ದರಾಮಯ್ಯ, ಡಿಕೆಶಿ ಆಪ್ತರನ್ನೇ ಎರಡನೇ ಅಭ್ಯರ್ಥಿಯಾಗಿಸಿದರು. ಅಸಹಾಯಕ ಡಿಕೆಶಿ ಈಗ, ಜೆಡಿಎಸ್‌ಗೆ ನೀಡಿದ ಮಾತು ಉಳಿಸಿಕೊಳ್ಳುತ್ತಾರೋ ಅಥವಾ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿಕೊಳ್ಳುತ್ತಾರೋ?' ಎಂದು ಪ್ರಶ್ನಿಸುವ ಮೂಲಕ ಡಿಕೆಶಿ ವಿರುದ್ಧ ಟೀಕಿಸಿದೆ.
'ಗೆದ್ದಲು ಹುಳ ಇಡಿ ಮರವನ್ನೇ ಒಳಗ್ಗಿನಿಂದ ಕೊರೆದು, ಒಮ್ಮೆಲೇ ಹೆಮ್ಮರವನ್ನು ಬುಡ ಸಮೇತ ಬೀಳಿಸುತ್ತದೆ. ಈ ಕಲೆ ಸಿದ್ದರಾಮಯ್ಯ ಅವರಿಗೆ ಸಿದ್ಧಿಸಿದೆ. ಕನಕಪುರದ ಬಂಡೆಯನ್ನು ಒಳಗಿನಿಂದ ಕೊರೆಯಲಾಗುತ್ತಿದೆ. ಶೀಘ್ರದಲ್ಲೇ ಬಂಡೆ ಟೊಳ್ಳಾಗಿ, ಕುಸಿಯಲಿದೆ, ಅಸಹಾಯಕ ಡಿಕೆಶಿ ಮೂಕಪ್ರೇಕ್ಷಕ ಅಷ್ಟೇ!' ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಎರಡನೇ ಅಭ್ಯರ್ಥಿ ಹಾಕದೆ, ತಮ್ಮ ಹೆಚ್ಚುವರಿ ಮತಗಳ ಮೂಲಕ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಡಿಕೆಶಿ ರಣತಂತ್ರ ರೂಪಿಸಿದ್ದರು.
— BJP Karnataka (@BJP4Karnataka) May 31, 2022
ಇದನ್ನರಿತ ಸಿದ್ದರಾಮಯ್ಯ, ಡಿಕೆಶಿ ಆಪ್ತರನ್ನೇ ಎರಡನೇ ಅಭ್ಯರ್ಥಿಯಾಗಿಸಿದರು.#ಅಸಹಾಯಕಡಿಕೆಶಿ ಈಗ, ಜೆಡಿಎಸ್‌ಗೆ ನೀಡಿದ ಮಾತು ಉಳಿಸಿಕೊಳ್ಳುತ್ತಾರೋ ಅಥವಾ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿಕೊಳ್ಳುತ್ತಾರೋ?







