'ತಿಳಿ ಕನ್ನಡ' ಪಠ್ಯಪುಸ್ತಕ ರಚನಾ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಕೆ. ಎಸ್. ಮಧುಸೂದನ್ ರಾಜೀನಾಮೆ

ಬೆಂಗಳೂರು: ಒಂಬತ್ತನೇ ತರಗತಿಯ ತಿಳಿ ಕನ್ನಡ ಪಠ್ಯಪುಸ್ತಕದ ಅಧ್ಯಕ್ಷರಾಗಿರುವ ಪ್ರೊ. ಕೆ.ಎಸ್ ಮಧುಸೂದನ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಶಿಕ್ಷಣ ಸಚಿವ ಬಿ.ಸಿ ನಾಗೇಶ್‌ರವರಿಗೆ ಪತ್ರ ಬರೆದಿರುವ ಮಧುಸೂದನ್ ಅವರು, “ಕರ್ನಾಟಕ ರಾಜ್ಯದ 9ನೇ ತರಗತಿಯ ದ್ವೀತಿಯ ಭಾಷಾ ಕನ್ನಡ ಪುಸ್ತಕ “ತಿಳಿಗನ್ನಡ” ಪಠ್ಯ ಪುಸ್ತಕ ರಚನಾ ಸಮಿತಿ ಅಧ್ಯಕ್ಷನಾಗಿ ನಾನು ಕಾರ್ಯ ನಿರ್ವಹಿಸಿದ್ದೆನು. ಈಗಲೂ ನನ್ನ ಅಧ್ಯಕ್ಷತೆಯಲ್ಲಿ ಅದೇ ಪಠ್ಯ ಮುಂದುವರಿದಿದೆ ಎಂದು ತಿಳಿದು ಬಂದಿದೆ. ಕರ್ನಾಟಕದ ನಾಡು ನುಡು ಸಂಸ್ಕೃತಿಯ ಅಂತಃಸಾಕ್ಷಿಯಂತಿರುವ ಮಾನ್ಯ ಕುವೆಂಪುರವರನ್ನು ಈಗನ ಪಠ್ಯ ಪರಿಷ್ಕರಣ ಸಮಿತಿಯ ಅಧ್ಯಕ್ಷರು ಲಘುವಾಗಿ ಗೇಲಿ ಮಾಡಿದ್ದಕ್ಕೆ ಮನನೊಂದು ಹಾಗೂ ಪ್ರತಿಭಟಿಸುತ್ತಾ ಭಾಷಾ ಪಠ್ಯಪುಸ್ತಕ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ” ಎಂದು ತಿಳಿಸಿದ್ದಾರೆ.
Next Story





