ಯೆನೆಪೋಯ ವೈದ್ಯಕೀಯ ಕಾಲೇಜಿನಲ್ಲಿ ಕಾರ್ಯಾಗಾರ

ಕೊಣಾಜೆ: ಯೆನೆಪೋಯ ವಿಶ್ವವಿದ್ಯಾಲಯದ (ಪರಿಗಣಿತ)ಪೆಥಾಲಜಿ ಮತ್ತು ಆಂಕೊಪಾಥಾಲಜಿ ವಿಭಾಗ, ಯೆನೆಪೋಯ ವೈದ್ಯಕೀಯ ಕಾಲೇಜು ಮತ್ತು ಸೈಟ್‌ಕೇರ್ ಕ್ಯಾನ್ಸರ್ ಆಸ್ಪತ್ರೆಯ ಸೈಟಲ್ಯಾಬ್ಸ್, ಬೆಂಗಳೂರು ಮತ್ತು ಡಯಾಗ್ನೋಸ್ಟಿಕ್ ಬಯೋಸಿಸ್ಟಮ್ಸ್ ಸಹಯೋಗದೊಂದಿಗೆ ಎರಡು ದಿನಗಳ ಇಮ್ಯುನೊಹಿಸ್ಟೊಕೆಮಿಸ್ಟ್ರಿ ಕಾರ್ಯಾಗಾರ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮವನ್ನು ಯೆನಪೋಯ ವಿವಿಯ ಕುಲಸಚಿವ ಡಾ.ಗಂಗಾಧರ ಸೋಮಯಾಜಿ ಅವರು ಉದ್ಘಾಟಿಸಿ ಮಾತನಾಡಿದರು.
ಯೆನೆಪೋಯ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಎಸ್.ಮೂಸಬ್ಬ ಅವರು ಉಪಸ್ಥಿತರಿದ್ದರು.
ವೈಎಂಸಿಯ ಪೆಥಾಲಜಿ ವಿಭಾಗದ ಪ್ರಾಧ್ಯಾಪಕಿ ಮತ್ತು ಮುಖ್ಯಸ್ಥೆ ಡಾ.ಪ್ರೇಮಾ ಸಲ್ಡಾನ್ಹಾ, ವೈಎಂಸಿಯ ಆಂಕೊಪೆಥಾಲಜಿಯ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ.ಸಿದ್ಧಾರ್ಥ ಬಿಸ್ವಾಸ್ ಮತ್ತು ಬೆಂಗಳೂರಿನ ಸೈಟಿಕೇರ್ ಕ್ಯಾನ್ಸರ್ ಆಸ್ಪತ್ರೆಯ ಲ್ಯಾಬ್ ನಿರ್ದೇಶಕಿ ಮತ್ತು ಹಿರಿಯ ಸಲಹೆಗಾರ ಆಂಕೊಪೆಥಾಲಜಿಸ್ಟ್ ಡಾ.ಅಪರ್ಣಾ ಗಂಗೊಳ್ಳಿ ಅವರು ಕಾರ್ಯಾಗಾರವನ್ನು ಆಯೋಜಿಸಿದ್ದರು.
ಡಾ. ಸಂಜೀವ್ ಕಟ್ಟಿ, ಮುಖ್ಯಸ್ಥರು, ಲ್ಯಾಬ್ ಮೆಡಿಸಿನ್ ಯೂನಿಟ್, ವರ್ತೂರು, ಮಣಿಪಾಲ್ ಆಸ್ಪತ್ರೆ, ಡಾ. ನವೀನ್ ಕೃಷ್ಣಮೂರ್ತಿ, ಕನ್ಸಲ್ಟೆಂಟ್ ಪೆಥಾಲಜಿಸ್ಟ್, ಕೌಶಿಕ್ ಲ್ಯಾಬ್, ಬೆಂಗಳೂರು, ಡಾ. ಆದರ್ಶ್ ಸಿ ಸಾನಿಕೋಪ್, ಸಹಾಯಕ ಪ್ರಾಧ್ಯಾಪಕರು, ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜು, ಬೆಳಗಾವಿ, ಡಾ. ಕೋಮಲ್ ಡಿ ಚಿಪ್ಪಲಕಟ್ಟಿ, ಕನ್ಸಲ್ಟೆಂಟ್ ಪೆಥಾಲಜಿಸ್ಟ್, ಸೈಟಿಕೇರ್ ಕ್ಯಾನ್ಸರ್ ಹಾಸ್ಪಿಟಲ್ & ಸೈಟಲ್ಯಾಬ್ಸ್, ಬೆಂಗಳೂರು, ಮತ್ತು ಡಾ. ಮದನ್ ಕೆ, ಸಹಾಯಕ ಪ್ರಾಧ್ಯಾಪಕ, ಆಂಕೋಪೆಥಾಲಜಿ, ಯೆನೆಪೋಯ ಮೆಡಿಕಲ್ ಕಾಲೇಜು ಮೊದಲಾದವರು ಭಾಗವಹಿಸಿದ್ದರು.







