ರೈತ ನಾಯಕನ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮ ಆಗಬೇಕು -ಮಾವಳ್ಳಿ ಶಂಕರ್
ಮಂಗಳೂರು: ಬಿಕೆಯು ವಕ್ತಾರ ರೈತ ಮುಖಂಡ ರಾಕೇಶ್ ಟಿಕಾಯತ್ ವಿರುದ್ಧ ದುಷ್ಕರ್ಮಿಗಳು ಹಲ್ಲೆ ನಡೆಸಿರು ವುದನ್ನು ಖಂಡಿಸಿರುವ ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್ ವಾದ) ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ರಾಜ್ಯ ದಲ್ಲಿ ಅರಾಜಕತೆ ಯ ವಾತವರಣ ಸೃಷ್ಟಿ ಯಾಗು ತ್ತಿದೆ.ಪಠ್ಯ ಪುಸ್ತಕ ಪರಿಷ್ಕರಣೆ ಯಲ್ಲೂ ಗೊಂದಲ ಸೃಷ್ಟಿ ಸಲಾಗಿದೆ. ಬರಗೂರು ನೇತೃತ್ವದ ಹಿಂದಿನ ಸಮಿತಿ ಎಲ್ಲಾ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡಿದೆ. ಇತಿಹಾಸ, ಸಾಮಾಜಿಕ ನ್ಯಾಯ ಕ್ಕೆ ಚ್ಯುತಿ ಬಾರದಂತೆ ಕರ್ತವ್ಯ ನಿರ್ವಹಿಸಿದವರು. ಅಂತ ವ್ಯಕ್ತಿ ಗಳು ಕಾರ್ಯ ನಿರ್ವಹಿಸಿದ ಹುದ್ದೆಗೆ ನಾಡಗೀತೆಗೆ, ಕುವೆಂಪುರವರಿಗೆ ಅವಮಾನ ಮಾಡಿದ ವ್ಯಕ್ತಿ ರೋಹಿತ್ ಚಕ್ರ ತೀರ್ಥ ಎಂಬ ವ್ಯಕ್ತಿಯನ್ನು ನೇಮಿಸಿ ಸರಕಾರ ನಾಡಿನ ಜನರಿಗೆ ಅನ್ಯಾಯವೆಸಗಿದೆ. ಆತನ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಸಾಮಾಜಿಕ ನ್ಯಾಯ, ಲಿಂಗ ಸಮಾನತೆ ತುರುಕಲು ಪ್ರಯತ್ನಿಸುವುದಿಲ್ಲ ಎನ್ನುವ ರೋಹಿತ್ ಚಕ್ರ ತೀರ್ಥ ನಂತಹ ವ್ಯಕ್ತಿ ಯ ನೇಮಕಾತಿಯನ್ನು ತಕ್ಷಣ ರದ್ದು ಗೊಳಿಸಬೇಕು ಎಂದು ಮಾವಳ್ಳಿ ಶಂಕರ್ ಆಗ್ರಹಿಸಿದರು.
ಜೂ.9ರಂದು ರಾಜ್ಯಾದ್ಯಂತ ದ.ಸಂ. ಸಮಿತಿಯ ಸಂಸ್ಥಾಪಕ ಕೃಷ್ಣ ಪ್ಪ ನವರ ಜನ್ಮ ದಿನವನ್ನು ಕೋಮುವಾದಿ ವಿರೋಧಿ ಸಮಾವೇಶ ದ ಮೂಲಕ ಆಚರಿಸಲಾಗು ವುದು ಎಂದು ಮಾವಳ್ಳಿ ಶಂಕರ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಮತ್ತು ರಾಜ್ಯದಲ್ಲಿ ಡಿ.ಸಿ.ಮನ್ನಾ ಭೂಮಿ ಯನ್ನು ಭೂಹೀನರಿಗೆ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ರವೀಂದ್ರ ನಾಥರಂತಹ ಪ್ರಮಾಣಿಕ ಅಧಿಕಾರಿ ರಾಜಿನಾಮೆ ನೀಡಲು ಸರಕಾರದ ಆಡಳಿತ ರೀತಿ ಕಾರಣ ಎಂದು ಮಾವಳ್ಳಿ ಶಂಕರ್ ಆಗ್ರಹಿಸಿದರು. ಎಸ್ ಇಪಿ ಯೋಜನೆ ಗಳ ಅನುದಾನ ವನ್ನು ಕಡಿತಗೊ ಳಿಸುವ ಮೂಲಕ ಸರಕಾರ ದಲಿತರಿಗೆ ಅನ್ಯಾಯ ವೆಸಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ದ.ಸಂ.ಸ ಮುಖಂಡ ರಾದ ಚಂದು ಎಲ್,ಜಗದೀಶ್ ಪಾಂಡೇಶ್ವರ, ಪಿ.ಕೆ.ವಸಂತ, ನೇಮಿರಾಜ್, ಪ್ರಭಾಕರ ಶಾಂತಿ ಗೋಡ್,ನಾಗೇಶ್ ಮುಲ್ಲಕಾಡು,ಭಾಸ್ಕರ ಮೊದಲಾದವರು ಉಪಸ್ಥಿತರಿದ್ದರು.