ಪರ್ಲಡ್ಕ ಮುಹಿಯುದ್ದೀನ್ ಜುಮಾ ಮಸೀದಿಯ ಖಾಝಿಯಾಗಿ ಜಿಫ್ರೀ ತಂಙಳ್ ಅಧಿಕಾರ ಸ್ವೀಕಾರ

ಪುತ್ತೂರು: ಪರ್ಲಡ್ಕ ಮುಹಿಯುದ್ದೀನ್ ಜುಮ್ಮಾ ಮಸೀದಿಯ ಖಾಝಿಯಾಗಿ ಸೈಯದ್ ಉಲಮಾ ಜಿಫ್ರೀ ಮುತ್ತುಕೋಯ ತಂಙಳ್ ಅವರು ಮಂಗಳವಾರ ನಡೆದ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿದರು.
ಬಳಿಕ ಮಾತನಾಡಿದ ಅವರು ಖಾಝಿ ಪದವಿಯು ಅತ್ಯಂತ ಜವಾಬ್ದಾರಿಯುತ ಸ್ಥಾನವಾಗಿದ್ದು ಅತ್ಯಂತ ಸೂಕ್ಷ್ಮವಾಗಿ ಕಾರ್ಯ ನಿರ್ವಹಿಸಬೇಕಾದ ವಿಚಾರವಾಗಿದೆ. ಪೂರ್ವಿಕ ಉಲಮಾಗಳು ಅತ್ಯಂತ ಭಯದಿಂದ ಖಾಝಿ ಸ್ಥಾನವನ್ನು ನಿರ್ವಹಿಸಿದ್ದರು. ಪರಲೋಕದಲ್ಲಿ ಪ್ರಶ್ನಿಸಲ್ಪಡುವ ಜವಾಬ್ದಾರಿ ಇದಾಗಿದೆ ಎಂದರು.
ಸಮಸ್ತ ಮುಶಾವರದ ದಕ್ಷಿಣ ಕರ್ನಾಟಕ ಅಧ್ಯಕ್ಷ ಸೈಯದ್ ಝೈನುಲ್ ಅಬಿದೀನ್ ತಂಙಳ್ ದುಗ್ಗಲಡ್ಕ ಸಮಾರಂಭ ಉದ್ಘಾಟಿಸಿದರು. ಸೈಯದ್ ಅಹ್ಮದ್ ಪೂಕೋಯ ತಂಙಳ್ ದುವಾ ನೆರವೇರಿಸಿದರಯು.
ಜಮಾಅತ್ ಅಧ್ಯಕ್ಷ ಅಬ್ದುಲ್ ರಝಾಕ್ ಹಾಜಿ ಸಮಾರಂಭದ ಅಧ್ಯಕ್ಷತೆ ವಹಿಸಿ ಖಾಝಿ ಬೈಅತ್ ನಿರ್ವಹಿಸಿದರು. ಸಮಸ್ತ ಉಪಾಧ್ಯಕ್ಷ ಯು.ಎಂ. ಉಸ್ತಾದ್ ಮೊಗ್ರಾಲ್ ಶಿರೋವಸ್ತ್ರ ಧಾರಣೆ ನಡೆಸಿದರು.
ಸಮಸ್ತ ಮುಶಾವರದ ಸದಸ್ಯ ಅಬ್ದುಲ್ ಖಾಎ ಖಾಸಿಮಿ ಬಂಬ್ರಾಣ, ಉಳ್ಳಾಲ ಸೈಯದ್ ಮದನಿ ಕಾಲೇಜ್ ಪ್ರಾಂಶುಪಾಲ ಉಸ್ಮಾನ್ ಫೈಝಿ ತೋಡಾರು, ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಎಲ್.ಟಿ. ಅಬ್ದುಲ್ ರಝಾಕ್ ಹಾಜಿ, ಶಂಸುಲ್ ಉಲಮಾ ಮೆಮೋರಿಯಲ್ ಕಾಲೇಜ್ ಪ್ರಾಂಶುಪಾಲ ಅಬೂಬಕ್ಕರ್ ಸಿದ್ದೀಕ್ ಜಲಾಲಿ, ಅಬ್ಬಾಸ್ ಫೈಝಿ ಪುತ್ತಿಗೆ, ಫಾರೂಕ್ ಸಅದಿ ಬಪ್ಪಳಿಗೆ, ಅಬ್ದುಲ್ ಹಮೀದ್ ಹನೀಫಿ ದರ್ಬೆ, ಎಎಸ್ ಕೌಸರಿ ಒಳತ್ತಡ್ಕ ಮತ್ತಿತರರು ಉಪಸ್ಥಿತರಿದ್ದರು.
ಉಮ್ಮರ್ ದಾರಿಮಿ ಸಾಲ್ಮರ ಸ್ವಾಗತಿಸಿದರು. ಜಮಾಅತ್ ಕಾರ್ಯದರ್ಶಿ ಫಾರೂಕ್ ನಿಶ್ಮಾ ವಂದಿಸಿದರು. ಮುಸ್ತಫಾ ಫೈಝಿ ಮಲಪ್ಪುರಂ ನಿರೂಪಿಸಿದರು.







