ಕಟ್ಟಡದಿಂದ ಬಿದ್ದು ಕಾರ್ಮಿಕ ಮೃತ್ಯು
ಉಳ್ಳಾಲ: ನಿರ್ಮಾಣ ಹಂತದಲ್ಲಿದ್ದ ಮನೆಯ ಮೇಲಂತಸ್ತಿನ ಗೋಡೆಗೆ ಪೈಂಟ್ ಬಳಿಯುತ್ತಿದ್ದ ಕಾರ್ಮಿಕನೋರ್ವ ಬಿದ್ದು ಮೃತಪಟ್ಟ ಘಟನೆ ಕೊಲ್ಯ ಬಳಿಯ ಅಡ್ಕಬೈಲ್ ಎಂಬಲ್ಲಿ ನಡೆದಿದೆ.
ಮಂಜನಾಡಿ ಗ್ರಾಮದ ಮಂಗಳಾಂತಿ ನಗರದ ಕಟ್ಟೆಮಾರ್ ಹೌಸ್ ನಿವಾಸಿ ಝುಲ್ಪಿಕಾರ್ ಆಲಿ(29) ಮೃತರು.
ಕೊಲ್ಯದ ಬಾಳೆ ಹಣ್ಣಿನ ವ್ಯಾಪಾರಿ ಗಣೇಶ್ ಎಂಬವರು ಅಡ್ಕ ಬೈಲ್ ಎಂಬಲ್ಲಿ ಮನೆ ನಿರ್ಮಿಸುತ್ತಿದ್ದು ,ನಿರ್ಮಾಣ ಹಂತದ ಮನೆಯಲ್ಲಿ ಮಂಗಳವಾರ ಬೆಳಗ್ಗೆ ಘಟನೆ ನಡೆದಿದೆ. ಎಂದಿನಂತೆ ನಿರ್ಮಾಣ ಹಂತದ ಮನೆಯ ಕಟ್ಟಡದಲ್ಲಿ ಹೊರಗಡೆ ಮನೆಯ ಮೇಲಂತಸ್ತಿನ ಗೋಡೆಗೆ ರೋಲರ್ ನಿಂದ ಪೈಂಟ್ ಹೊಡೆಯುತ್ತಿದ್ದ ಝುಲ್ಫಿಕಾರ್ ಬಿದ್ದು ಗಂಭೀರ ಗಾಯಗೊಂಡು ಆಸ್ಪತ್ರೆ ದಾರಿ ಮಧ್ಯದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





