ಪಠ್ಯದಿಂದ ನನ್ನ 'ಶಬ್ದಗಳು' ಎ೦ಬ ಕವಿತೆಯನ್ನು ಕೈ ಬಿಡಿ: ಸಚಿವ ಬಿ.ಸಿ ನಾಗೇಶ್ ಗೆ ಸಾಹಿತಿ ಸರಜೂ ಕಾಟ್ಕರ್ ಪತ್ರ

ಬೆಂಗಳೂರು: ‘ಶಾಲಾ ಪಠ್ಯಪುಸ್ತಕ ಪರಿಷ್ಕರಣೆ ವಿವಾದ ರಾಜ್ಯದಲ್ಲಿ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇದರ ಬೆನ್ನಲ್ಲೆ ‘ತಮ್ಮ ಕಥೆ, ಕಾವ್ಯ, ಪ್ರಬಂಧ ಬೋಧನೆಗೆ ನೀಡಿದ್ದ ಅನುಮತಿ'ಯನ್ನು ಹಿಂಪಡೆದುಕೊಳ್ಳುವ ಮೂಲಕ ಪಠ್ಯ ಪರಷ್ಕರಣೆ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥರ ವಜಾಕ್ಕೆ ಆಗ್ರಹಿಸಿ ಸರಕಾರದ ವಿರುದ್ಧ ಸಾಹಿತಿಗಳು ಆಕ್ರೋಶ ಮುಂದುವರಿಸಿದ್ದಾರೆ.
'ಪಠ್ಯ ಪರಿಷ್ಕರಣೆ ವಿವಾದ ಇಡೀ ಜನ ಸಮೂಹದಲ್ಲಿ ಒಂದು ರೀತಿಯ ಗೊಂದಲಕ್ಕೆ ಕಾರಣವಾಗಿದ್ದು, ಪಠ್ಯದಿಂದ ನನ್ನ 'ಶಬ್ದಗಳು' ಎ೦ಬ ಕವಿತೆಯನ್ನು ಕೈ ಬಿಡಿ' ಎಂದು ಸಾಹಿತಿ, ಕವಿ, ಡಾ. ಸರಜೂ ಕಾಟ್ಕರ್ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಗೆ ಪತ್ರ ಬರೆದಿದ್ದಾರೆ.
''ಈಗಿನ ಪಠ್ಯಪುಸ್ತಕ ಪುನರ್ ರಚನಾ ಸಮಿತಿ ಮತ್ತು ಅದರ ನಿಲುವುಗಳ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದ್ದು ವಿದ್ಯಾರ್ಥಿಗಳು, ಶೈಣಿಕ ಕ್ಷೇತ್ರದಲ್ಲಿ, ಪಾಲಕರಲ್ಲಿ ಹಾಗೂ ಇಡೀ ಜನ ಸಮೂಹದಲ್ಲಿ ಒಂದು ರೀತಿಯ ಗೊಂದಲಕ್ಕೆ ಕಾರಣವಾಗಿದೆ. ಈ ಹಿಂದೆ 9ನೇಯ ಕನ್ನಡ ತೃತೀಯ ಭಾಷೆ ಪಠ್ಯಪುಸ್ತಕದಲ್ಲಿ ನನ್ನ 'ಶಬ್ದಗಳು' ಎ೦ಬ ಕವಿತೆಯನ್ನು ಅಳವಡಿಸಲಾಗಿತ್ತು. ನನ್ನ ಸ೦ಬುಗೆ ಮತ್ತು ಇಷ್ಟುಆಷಗಳ ಕಾಲದ ಬದ್ಧತೆಯು ಕರಣಕ್ಕಾ, ನನ್ನ ಕವಿತೆಗೆ ಈ ಹಿಂದೆ ಕೊಟ್ಟ ಒಪ್ಪಿಗೆಯನ್ನು ಹಿಂಪಡೆಯುತ್ತಿದ್ದೇನೆ' ಎಂದು ಸರಜೂ ಕಾಟ್ಕರ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.








