Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಎರಚಿದ ಮಸಿ ಬಿದ್ದದ್ದು ಯಾರ ಮುಖಕ್ಕೆ?

ಎರಚಿದ ಮಸಿ ಬಿದ್ದದ್ದು ಯಾರ ಮುಖಕ್ಕೆ?

ವಾರ್ತಾಭಾರತಿವಾರ್ತಾಭಾರತಿ1 Jun 2022 12:05 AM IST
share
ಎರಚಿದ ಮಸಿ ಬಿದ್ದದ್ದು ಯಾರ ಮುಖಕ್ಕೆ?

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಭಾರತೀಯ ಕಿಸಾನ್ ಯೂನಿಯನ್ ವಕ್ತಾರ, ರೈತ ಮುಖಂಡ ರಾಕೇಶ್ ಟಿಕಾಯತ್ ಅವರ ಮೇಲೆ ಬಲಪಂಥೀಯ ಸಂಘಟನೆಯೆಂದು ಗುರುತಿಸಿಕೊಂಡಿರುವ ಭಾರತ ರಕ್ಷಣಾ ವೇದಿಕೆಯ ಕೆಲವು ಕಾರ್ಯಕರ್ತರು ಮಸಿ ಎರಚಿ ಹಲ್ಲೆ ನಡೆಸಿದ್ದಾರೆ. ರಾಕೇಶ್ ಟಿಕಾಯತ್ ಮತ್ತು ಅವರ ಜೊತೆಗಾರರು ಯಾವುದೇ ರಾಜಕೀಯ ಪಕ್ಷಗಳ ಮುಖಂಡರಲ್ಲ. ಅವರು ರಾಷ್ಟ್ರಮಟ್ಟದಲ್ಲಿ ರೈತ ಚಳವಳಿಯ ನೇತೃತ್ವವನ್ನು ವಹಿಸಿದ ಕಾರಣದಿಂದ ಇತ್ತೀಚಿನ ದಿನಗಳಲ್ಲಿ ಹೆಚ್ಚು ಗುರುತಿಸಿಕೊಳ್ಳುತ್ತಿದ್ದಾರೆ. ರೈತರನ್ನು ಪ್ರತಿನಿಧಿಸಿ ಮಾತನಾಡುವುದು, ರೈತ ವಿರೋಧಿ ನೀತಿಗಳನ್ನು ಖಂಡಿಸುವುದು ತಪ್ಪು ಎಂದು ಭಾವಿಸಿ ಈ ದಾಳಿ ನಡೆದಿದೆಯಾದರೆ, ದುಷ್ಕರ್ಮಿಗಳು ತಾವು ಉಣ್ಣುವ ಅನ್ನಕ್ಕೆ ಮಸಿ ಎರಚಿಕೊಂಡಿದ್ದಾರೆ ಎಂದು ಹೇಳಬೇಕಾಗುತ್ತದೆ. ಇದನ್ನು ಎಸಗಿದವರು ಹೊಟ್ಟೆಗೆ ಅನ್ನ ತಿನ್ನುವವರಂತೂ ಅಲ್ಲ ಎನ್ನುವುದು ಸ್ಪಷ್ಟ.

ಟಿಕಾಯತ್ ವಿರುದ್ಧ ದಾಳಿ ನಡೆಸುವುದಕ್ಕೆ ಇದ್ದ ಕಾರಣ ಏನು ಎನ್ನುವುದು ದೇಶಕ್ಕೆ ಚೆನ್ನಾಗಿ ಗೊತ್ತಿದೆ. ಯಾವುದೇ ರಾಜಕೀಯ ಪಕ್ಷಗಳ ಜೊತೆಗೆ ಕೈ ಜೋಡಿಸದೆಯೇ ಈ ದೇಶದ ಪ್ರಧಾನಿ ನರೇಂದ್ರ ಮೋದಿಯವರ ರೈತ ವಿರೋಧಿ ನೀತಿಗಳ ವಿರುದ್ಧ ದೇಶಾದ್ಯಂತ ಚಳವಳಿಯನ್ನು ಸಂಘಟಿಸಿ ಪ್ರಧಾನಿಯನ್ನು ರೈತರ ಮುಂದೆ ಬಾಗುವಂತೆ ಮಾಡಿದ ಟಿಕಾಯತ್, ಬಿಜೆಪಿ ಸೇರಿದಂತೆ ಸಂಘಪರಿವಾರದ ಆಕ್ರೋಶಕ್ಕೆ ಬಲಿಯಾಗುವುದು ಸಹಜವೇ ಆಗಿದೆ. ರೈತರು ಬೀದಿಗಿಳಿದಾಗ ಅವರನ್ನು ‘ಭಯೋತ್ಪಾದಕರು, ಉಗ್ರರು’ ಎಂದು ಕರೆದು ದಮನಿಸಲು ಯತ್ನಿಸಿ ಕೇಂದ್ರ ಸರಕಾರ ವಿಫಲವಾಯಿತು. ಕೃಷಿ ನೀತಿಗಳನ್ನು ಹಿಂದೆಗೆಯುವ ಪ್ರಶ್ನೆಯೇ ಇಲ್ಲ ಎಂದು ಮೋದಿ ನೇತೃತ್ವದ ಸರಕಾರ ಪದೇ ಪದೇ ಹೇಳಿಕೆಗಳನ್ನು ನೀಡುತ್ತಾ, ರೈತರ ಪ್ರತಿಭಟನೆಯನ್ನು ಮೂಲೆಗುಂಪು ಮಾಡಲು ಯತ್ನಿಸಿತ್ತಾದರೂ ರೈತ ಮುಖಂಡರು ತಮ್ಮ ಹೋರಾಟದಿಂದ ಹಿಂದೆ ಸರಿಯಲಿಲ್ಲ. ಸುಮಾರು ಒಂದು ವರ್ಷಗಳ ಕಾಲ ಈ ಪ್ರತಿಭಟನೆ ಮುಂದುವರಿಯಿತು. ನೂರಾರು ರೈತರು ಈ ಹೋರಾಟದಲ್ಲಿ ಮಡಿದರು. ಅಂತಿಮವಾಗಿ ಟಿಕಾಯತ್ ತಂಡವನ್ನು ಪ್ರಧಾನಿ ನರೇಂದ್ರ ಮೋದಿಯವರು ಗಂಭೀರವಾಗಿ ಸ್ವೀಕರಿಸಬೇಕಾಯಿತು ಮಾತ್ರವಲ್ಲ, ತನ್ನ ಅಂಬಾನಿ ಪರ ಮತ್ತು ರೈತ ವಿರೋಧಿಯಾಗಿದ್ದ ನೀತಿಗಳನ್ನು ಹಿಂದೆಗೆಯಲೇ ಬೇಕಾದಂತಹ ಸ್ಥಿತಿ ನಿರ್ಮಾಣವಾಯಿತು. ಜನಸಾಮಾನ್ಯರ ಭಾವನೆಗಳಿಗೆ ಚಿಕ್ಕಾಸಿನ ಬೆಲೆಯನ್ನೂ ನೀಡದೆ ‘ಸರ್ವಾಧಿಕಾರಿ ಮಾದರಿ’ಯಲ್ಲಿ ಆಡಳಿತ ನಡೆಸುತ್ತಾ ಬಂದಿದ್ದ ಪ್ರಧಾನಿ ಮೋದಿ ಮತ್ತು ಸಂಗಡಿಗರಿಗೆ ಇದೊಂದು ಭಾರೀ ಮುಖಭಂಗವಾಗಿತ್ತು. ರೈತ ಹೋರಾಟಕ್ಕೆ ಮಣಿದ ಕಾರಣದಿಂದಾಗಿ ಮೋದಿಯ ನಕಲಿ ವರ್ಚಸ್ಸಿಗೆ ಭಾರೀ ಧಕ್ಕೆಯಾಗಿತ್ತು. ಉತ್ತರ ಪ್ರದೇಶದ ಚುನಾವಣೆಯ ಹಿನ್ನೆಲೆಯಲ್ಲಿ ರೈತ ನಾಯಕರನ್ನು ಎದುರು ಹಾಕಿಕೊಳ್ಳುವ ಧೈರ್ಯ ಮೋದಿ ಬಳಗಕ್ಕೆ ಇರಲಿಲ್ಲ. ಆವರೆಗೆ ಯಾರನ್ನು ಉಗ್ರರು, ಭಯೋತ್ಪಾದಕರು ಎಂದು ಕರೆಯುತ್ತಾ ಬರಲಾಗಿತ್ತೋ ಅವರ ಬೇಡಿಕೆಗಳಿಗೆ ಕೊನೆಗೂ ಸರಕಾರ ತಲೆಬಾಗಿ, ಅವರನ್ನು ಈ ದೇಶದ ರೈತರ ಪ್ರತಿನಿಧಿಗಳು ಎನ್ನುವುದನ್ನು ಒಪ್ಪಿಕೊಂಡಿತು.
 
ಹೀಗೆ, ಅತಿ ಮಹತ್ವದ್ದು ಎಂದು ಭಾವಿಸಿದ ಕೃಷಿ ನೀತಿಗಳನ್ನು ಟಿಕಾಯತ್ ಮತ್ತು ಅವರ ತಂಡದ ಬೇಡಿಕೆಗೆ ಅನುಗುಣವಾಗಿ ಪ್ರಧಾನಿ ನರೇಂದ್ರ ಮೋದಿಯವರೇ ಹಿಂದೆಗೆದರು. ಆ ಮೂಲಕ, ಸುಮಾರು ಒಂದು ವರ್ಷಗಳ ಕಾಲ ಬೀದಿಯಲ್ಲಿ ನಡೆಯುತ್ತಿದ್ದ ಪ್ರತಿಭಟನಾಕಾರರನ್ನು ‘ನಿಜವಾದ ರೈತರು’ ಎನ್ನುವುದನ್ನು ಪ್ರಧಾನಿಯೇ ಒಪ್ಪಿಕೊಂಡರು. ಪ್ರಧಾನಿ ಮೋದಿಯವರೇ ತಲೆಬಾಗಿದ ರೈತ ನಾಯಕನಿಗೆ ಬೆಂಗಳೂರಿನಲ್ಲಿ ಸಂಘಪರಿವಾರದ ಕೆಲವು ಕಾರ್ಯಕರ್ತರು ಮಸಿ ಬಳಿದರು. ‘ಯಾವ ಕಾರಣಕ್ಕಾಗಿ ಈ ಮಸಿ ಬಳಿಯಲಾಯಿತು?’ ಎನ್ನುವ ಪ್ರಶ್ನೆಗೆ ಈವರೆಗೂ ಉತ್ತರ ದೊರಕಿಲ್ಲ. ಬಹುಶಃ ಪ್ರಧಾನಿ ಮೋದಿಯವರ ದುರಹಂಕಾರವನ್ನು ಮಣಿಸಿದ ಕಾರಣಕ್ಕಾಗಿ, ಸಂಘಪರಿವಾರ ಕಾರ್ಯಕರ್ತರು ಟಿಕಾಯತ್‌ಗೆ ಮಸಿ ಬಳಿದಿರಬಹುದು ಎಂದು ಮಾಧ್ಯಮಗಳು ಊಹಿಸುತ್ತಿವೆ. ಹಾಗಿದ್ದರೆ, ಈ ಮಸಿ ಬಿದ್ದಿರುವುದು ನೇರವಾಗಿ ನರೇಂದ್ರ ಮೋದಿಯವರ ಮುಖಕ್ಕೇ ಆಗಿದೆ. ಈ ಮಸಿ ಎರಚಾಟದಲ್ಲಿ ಪ್ರಧಾನಿಯವರ ಕೈವಾಡ ಇಲ್ಲದೇ ಇರಬಹುದು. ಆದರೆ ತನಗಾದ ಮುಖಭಂಗವನ್ನು ತನ್ನ ಕಾರ್ಯಕರ್ತರ ಮೂಲಕ ಮೋದಿ ಈ ರೀತಿ ತೀರಿಸಿಕೊಂಡರು ಎಂಬ ಆರೋಪಗಳ ಕಳಂಕದಿಂದ ಅವರು ಪಾರಾಗುವಂತಿಲ್ಲ. ಈಗಾಗಲೇ ಮೈ ತುಂಬಾ ಆರೋಪ, ಕಳಂಕಗಳ ಕರಿ ಮಸಿಯನ್ನು ಮೆತ್ತಿಕೊಂಡ ಪ್ರಧಾನಿಗೆ, ತನ್ನ ಹಿಂಬಾಲಕರೇ ತನ್ನ ಮುಖಕ್ಕೆ ಎರಚಿರುವ ಕಪ್ಪು ಮಸಿಯಿಂದ ದೊಡ್ಡ ಸಮಸ್ಯೆಯಾಗಲಾರದು. ಅವರದನ್ನು ಒರೆಸದೇ ತನ್ನ ಸಾಧನೆಯಾಗಿ ಬಿಂಬಿಸಿ ಸಾರ್ವಜನಿಕವಾಗಿ ಓಡಾಡಿದರೆ ಅದರಲ್ಲಿ ಅಚ್ಚರಿಯೇನೂ ಇಲ್ಲ.

ಒಟ್ಟಿನಲ್ಲಿ, ಟಿಕಾಯತ್ ಅವರ ಮೇಲೆ ಎರಚಿದ ಮಸಿ, ಮೋದಿ ಪಟಾಲಂನ ಹತಾಶೆಯನ್ನಷ್ಟೇ ಹೇಳುತ್ತದೆ. ಜೊತೆಗೆ ರೈತರ ಕುರಿತಂತೆ ಇವರಿಗಿರುವ ಬದ್ಧತೆ ಏನು ಎನ್ನುವುದು ಮತ್ತೊಮ್ಮೆ ಬಯಲಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ರೈತ ಮುಖಂಡರ ಬಗ್ಗೆ ಇವರ ಭಯವನ್ನೂ ಈ ಘಟನೆ ಬಟಾಬಯಲು ಗೊಳಿಸಿದೆ. ಇಂದು ಯಾವುದೇ ವಿರೋಧ ಪಕ್ಷದ ನಾಯಕರೊಂದಿಗೆ ಇರದ ಆಕ್ರೋಶ ಒಬ್ಬ ರೈತ ಮುಖಂಡನ ಮೇಲೆ ಅದೂ ಉತ್ತರ ಭಾರತದ ಒಬ್ಬ ರೈತ ನಾಯಕನ ಮೇಲೆ ಇರಬೇಕಾದರೆ ಆತ ಸಂಘಪರಿವಾರ ಮಂದಿಗೆ ನೀಡಿರುವ ಎಚ್ಚರಿಕೆ ಎಷ್ಟು ತೀಕ್ಷ್ಣವಾಗಿತ್ತು ಎನ್ನುವುದನ್ನು ಹೇಳುತ್ತದೆ. ಒಂದು ರೀತಿಯಲ್ಲಿ ದುಷ್ಕರ್ಮಿಗಳು ತಮಗೆ ತಾವೇ ಮುಖಕ್ಕೆ ಮಸಿಯನ್ನು ಮೆತ್ತಿಕೊಂಡಿದ್ದಾರೆ. ಆದರೆ ಈ ಘಟನೆ ಕರ್ನಾಟಕದ ವರ್ಚಸ್ಸಿಗೆ ಭಾರೀ ಕುಂದು ತಂದಿದೆ. ಈ ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಇಷ್ಟರ ಮಟ್ಟಿಗೆ ಕುಸಿದ ಉದಾಹರಣೆ ಹಿಂದೆಂದೂ ಇರಲಿಲ್ಲ. ಹತ್ತು ಹಲವು ಕುಖ್ಯಾತ ವಿವಾದಗಳಿಗಾಗಿ ಕರ್ನಾಟಕ ಗುರುತಿಸಿಕೊಳ್ಳುತ್ತಿರುವ ಸಮಯ ಇದು. ಉತ್ತರ ಭಾರತದಿಂದ ರಾಜ್ಯಕ್ಕೆ ಆಗಮಿಸಿದ ರೈತನಾಯಕನೊಬ್ಬನ ಮುಖಕ್ಕೆ ಎರಚಿದ ಮಸಿ, ಸ್ವತಃ ಕನ್ನಡಮ್ಮನ ಮುಖಕ್ಕೂ ಬಿದ್ದಿದೆ. ಅದನ್ನು ಒರಸುವ ಹೊಣೆಗಾರಿಕೆ ರಾಜ್ಯ ಸರಕಾರದ್ದು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X