ಪ್ಯಾಂಥರ್ ಪಾರ್ಟಿ ಸ್ಥಾಪಕ ಭೀಮ್ ಸಿಂಗ್ ನಿಧನ

photo: @DevenderSRana/Twitter
ಜಮ್ಮು, ಮೇ 31: ಜಮ್ಮು ಆ್ಯಂಡ್ ಕಾಶ್ಮೀರ್ ನ್ಯಾಷನಲ್ ಪ್ಯಾಂಥರ್ ಪಾರ್ಟಿಯ ಸ್ಥಾಪಕ ಪ್ರೊ. ಭೀಮ್ ಸಿಂಗ್ (81) ಅವರು ಜಮ್ಮುವಿನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾದರು.
ಅವರು ಪತ್ನಿ ಜೈ ಮಾಲಾ ಹಾಗೂ ಲಂಡನ್ನಲ್ಲಿ ವಾಸಿಸುತ್ತಿರುವ ಪುತ್ರ ಅಂಕಿತ್ ಲವೆ ಅವರನ್ನು ಅಗಲಿದ್ದಾರೆ.
ಅವರು ಒಂದು ತಿಂಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿದ್ದರು. ಅವರನ್ನು ಇಲ್ಲಿನ ಜಿಎಂಸಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.
ಮಾಜಿ ಶಾಸಕರಾಗಿರುವ ಭೀಮ್ ಸಿಂಗ್ ಉಧಮ್ಪುರ ಜಿಲ್ಲೆಯ ಭುಗ್ಟೇರಿಯನ್ ಗ್ರಾಮದವರು.
ಸಿಂಗ್ ಅವರ ನಿಧಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ.
Next Story