ಮಂಗಳೂರು: ಜೂ. 2-3ರಂದು ವಿದ್ಯುತ್ ಕಡಿತ
ಮಂಗಳೂರು : ನಗರದ ನಂದಿಗುಡ್ಡ ಉಪಕೇಂದ್ರದಿಂದ ಹೊರಡುವ ಮಂಗಳಾದೇವಿ ಫೀಡರ್‌ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿಒಎಸ್ ದುರಸ್ತಿ ಕಾಮಗಾರಿ ನಡೆಯಲಿರುವುದರಿಂದ ಜೂ.೨ರಂದು ಬೆಳಗ್ಗೆ ೧೦ರಿಂದ ಸಂಜೆ ೫ರವರೆಗೆ ಮಾರ್ನಮಿಕಟ್ಟೆ, ಮಂಕಿಸ್ಟ್ಯಾಂಡ್, ಅಮರ್ ಆಳ್ವ ರೋಡ್, ಸುಭಾಶ್‌ನಗರ, ಶಿವನಗರ, ಹೊಗೆ ಬಝಾರ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.
*ಕದ್ರಿ ಉಪಕೇಂದ್ರದಿಂದ ಹೊರಡುವ ಲೈಟ್ ಹೌಸ್‌ಹಿಲ್ ರೋಡ್ ಫೀಡರ್ ಮತ್ತು ಬಂಟ್ಸ್ ಹಾಸ್ಟೆಲ್ ಫೀಡರ್‌ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿಒಎಸ್ ದುರಸ್ತಿ ಕಾಮಗಾರಿ ನಡೆಯಲಿರುವುದರಿಂದ ಜೂ.೩ರಂದು ಬೆಳಗ್ಗೆ ೧೦ರಿಂದ ಸಂಜೆ ೪ರವರೆಗೆ ಬಂಟ್ಸ್ ಹಾಸ್ಟೆಲ್, ವುಡ್‌ಲ್ಯಾಂಡ್ಸ್, ಗೋಲ್ಡ್ ಫಿಂಚ್, ಜ್ಯೋತಿ ಟಾಕೀಸ್, ಲೈಟ್‌ಹೌಸ್, ಲೇಡಿಸ್ ಕ್ಲಬ್, ಸೈಂಟ್ ಅಲೋಶಿಯಸ್ ಕಾಲೇಜು, ಜಾರ್ಜ್ ಮಾರ್ಟಿಸ್ ರೋಡ್, ಮಲ್ಲಿಕಟ್ಟೆ, ಕ್ಯಾಸ್ಟಲ್‌ಭಾಗ್, ಸಿಟಿ ಹಾಸ್ಪಿಟಲ್, ಕಾಮತ್ ನಸಿರ್ಂಗ್ ಹೋಂ, ಗಿರಿಯಾಸ್, ಆರ್ಯ ಸಮಾಜ ರಸ್ತೆ, ಭಾರತ್ ಬೀಡಿ, ಪ್ಲಾಂಟರ್ಸ್ ಲೇನ್, ಪತ್ರಾವೋ ಲೇನ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.
*ನೆಹರೂ ಮೈದಾನ ಉಪಕೇಂದ್ರದಿಂದ ಹೊರಡುವ ಮಾರ್ಕೆಟ್ ಫೀಡರ್ ಮತ್ತು ವಿವೇಕ್ ಮೋಟಾರ್ ಫೀಡರ್‌ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿಒಎಸ್ ದುರಸ್ತಿ ಕಾಮಗಾರಿ ನಡೆಯಲಿರುವುದರಿಂದ ಜೂ.೩ರಂದು ಬೆಳಗ್ಗೆ ೧೦ರಿಂದ ಸಂಜೆ ೫ರವರೆಗೆ ಲೇಡಿಗೋಷನ್ ಆಸ್ಪತ್ರೆ, ಸೆಂಟ್ರಲ್ ಮಾರ್ಕೆಟ್, ಶಾಂತದುರ್ಗಾ, ಜೆಎಚ್‌ಎಸ್ ರಸ್ತೆ, ಪಿ.ಎಂ. ರಾವ್ ರೋಡ್, ಗೌರಿ ಮಠ ರೋಡ್, ರಾಘವೇಂದ್ರ ಮಠ ರೋಡ್, ಮೈದಾನ್ ೩ನೇ ಕ್ರಾಸ್, ಮೈದಾನ್ ೪ನೇ ಕ್ರಾಸ್, ಬೀಬಿ ಅಲಾಬಿ ರಸ್ತೆ, ರಾವ್ ಆ್ಯಂಡ್ ರಾವ್ ಸರ್ಕಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.
*ಕುಲಶೇಖರ ಉಪಕೇಂದ್ರದ ಶಕ್ತಿ ಪರಿವರ್ತಕ-೧ರಲ್ಲಿ ತುರ್ತು ನಿರ್ವಹಣಾ ಕಾಮಗಾರಿಯನ್ನು ಕಾವೂರಿನ ಕೆಪಿಟಿಸಿಎಲ್‌ನವರು ನಡೆಸಲಿರುವುದರಿಂದ ಜೂ.೩ರಂದು ಬೆಳಗ್ಗೆ ೧೦ರಿಂದ ಸಂಜೆ ೪ರವರೆಗೆ ಮತ್ತು ಕುಲಶೇಖರ ಉಪಕೇಂದ್ರದಿಂದ ಹೊರಡುವ ಇಂಡಸ್ಟ್ರಿಯಲ್, ಪಂಪ್‌ವೆಲ್, ಕಣ್ಣೂರು, ನೀರುಮಾರ್ಗ, ಉಜ್ಜೋಡಿ, ಎಕ್ಕೂರು, ಶಕ್ತಿನಗರ, ಕೆನರಾ ವರ್ಕ್‌ಶಾಪ್ ಮತ್ತು ಕುಡ್ಸೆಂಪು ಫೀಡರ್‌ಗಳಲ್ಲಿ ಯೆಯ್ಯಾಡಿ, ಶರಬತ್ತು ಕಟ್ಟೆ, ಪದವು, ಉಜ್ಜೋಡಿ, ನೆಕ್ಕರೆಮಾರ್, ಗೋರಿಗುಡ್ಡ, ಎಕ್ಕೂರು, ನೇತ್ರಾವತಿ ಗ್ಯಾರೇಜ್, ಕಡೆಕಾರ್, ಜೆಪ್ಪಿನಮೊಗರು, ತಾರ್ದೊಲ್ಯ, ತಂದೊಳಿಗೆ, ಡೆನ್ಮಾರ್ಕ್ ಲೇಔಟ್, ವಾಸುಕಿ ನಗರ, ಅಳಪೆ ಮಠ, ಕನಕರಬೆಟ್ಟು, ಕುಡ್ಪಾಡಿ ತೋಟ, ಸದಾಶಿವ ನಗರ, ಪಡೀಲ್ ಜಂಕ್ಷನ್, ಕಂಕನಾಡಿ ರೈಲ್ವೇ ಸ್ಟೇಷನ್, ನಾಗುರಿ, ಪಂಪ್‌ಹೌಸ್, ಗರೋಡಿ, ಕಪಿತಾನಿಯೋ, ಬಲಿಪಮಾರ್, ನೇತ್ರಾವತಿ ಲೇಔಟ್, ಪ್ರಶಾಂತ್‌ಬಾಗ್, ಪಡೀಲ್ ಗ್ಯಾಸ್ ಗೋಡೌನ್, ಪಡೀಲ್, ಸೈಮನ್ ಲೇನ್, ಮೇಘನಗರ, ಗುಡ್ಡೆತೋಟ, ರೆಡ್ ಬಿಲ್ಡಿಂಗ್, ಕೆಂಬಾರ್, ಕಲ್ಪನೆ, ಕೈಕಂಬ, ಶಕ್ತಿನಗರ, ಕುಚ್ಚಿಕಾಡ್, ಸರಕೋಡಿ ನ್ಯೂರೋಡ್, ಬೇಕಲ್‌ಕರ್, ಕ್ಯಾಸ್ತಲಿನೋ ಕಾಲೋನಿ, ಬೊಲ್ಯಪದವು, ಪಂಜಿರೆಲ್, ನಲ್ಪಾಡ್, ರಾಮ್‌ನಗರ, ಜೋಡುಕಟ್ಟೆ, ಮರೋಳಿ, ವಸಂತನಗರ, ಕೊಡಕ್ಕಲ್, ಬಲ್ಲೂರು, ಗಾಣದಬೆಟ್ಟು, ಬೋರುಗುಡ್ಡೆ, ಕೆಲರಾಯಿ, ನೀರುಮಾರ್ಗ, ಬೊಂಡಂತಿಲ, ಮಲ್ಲೂರು, ಮಾಣೂರು, ಬಿತ್ತುಪಾದೆ, ದೆಮ್ಮಲೆ, ಕೆನರಾ ವರ್ಕ್ ಶಾಪ್, ಕುಡ್ಸೆಂಪ್, ಕುಡ್ತಡ್ಕ, ಕಾಂತನ ಬೆಟ್ಟು, ಕಾಂತಪ್ಪಬಡಾವಣೆ, ನೇತ್ರಾವತಿ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.







