ಶ್ರೀನಿವಾಸ ಜೋಕಟ್ಟೆಗೆ ‘ಗಡಿನಾಡು ಮಾಧ್ಯಮ ಪ್ರಶಸ್ತಿ’ ಪ್ರದಾನ

ಮುಂಬೈ : ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಆದರ್ಶ ಕನ್ನಡ ಬಳಗ ಮಹಾರಾಷ್ಟ್ರ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಮಹಾರಾಷ್ಟ್ರ ಘಟಕದ ಸಹಯೋಗದಲ್ಲಿ ಅಕ್ಕಲಕೋಟ ನಗರದ ಪ್ರಿಯದರ್ಶನಿ ಮಂಗಲ ಕಾರ್ಯಾಲಯದಲ್ಲಿ ಇತ್ತೀಚೆಗೆ ನಡೆದ ಗಡಿನಾಡು ಕನ್ನಡ ಜಾಗೃತಿ ಸಾಂಸ್ಕೃತಿಕ ಉತ್ಸವದಲ್ಲಿ ಪತ್ರಕರ್ತ, ಸಾಹಿತಿ ಶ್ರೀನಿವಾಸ ಜೋಕಟ್ಟೆ ಅವರಿಗೆ ‘ಗಡಿನಾಡು ಮಾಧ್ಯಮ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ಈ ಸಂದರ್ಭ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ, ಶಾಸಕ ಸಚಿನ್ ಕಲ್ಯಾಣಶೆಟ್ಟಿ, ಕಬೀರ ಮಹಾಸ್ವಾಮೀಜಿ, ಬಸವಲಿಂಗ ಮಹಾಸ್ವಾಮೀಜಿ, ಮಹಾನಂದಾತಾಯಿ ಹಿರೇಮಠ, ಶ್ರೀಸ್ವಾಮಿ ಸಮರ್ಥ ಅನ್ನಛತ್ರ ಮಂಡಳಿಯ ಪ್ರಮುಖ ಕಾರ್ಯಕಾರಿ ವಿಶ್ವಸ್ತ ಅಮೋಲರಾಜೆ ಭೋಸಲೆ, ಯುವನಾಯಕ ಪ್ರಥಮೇಶ ಮ್ಹೇತ್ರೆ, ಹಿರಿಯ ಸಾಹಿತಿ ಡಾ. ಮಧುಮಾಲ ಲಿಗಾಡೆ, ಸರ್ವಮಂಗಲಾ ಸೋಮ ಶೇಖರ, ಜಿಲ್ಲಾ ಪ್ರಾಥಮಿಕ ಶಿಕ್ಷಣಾಧಿಕಾರಿ ಕಿರಣ ಲೋಹಾರ, ಕಸಾಪ ಕಲಬುರಗಿ ಜಿಲ್ಲಾಧ್ಯಕ್ಷ ವಿಜಯ ಕುಮಾರ ತೆಗಲತಿಪ್ಪಿ, ಕಸಾಪ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಸೋಮಶೇಖರ ಜಮಶೆಟ್ಟಿ, ಶಿಕ್ಷಣ ವಿಸ್ತಾರ ಅಧಿಕಾರಿ ರತಿಲಾಲ ಭೂಸೆ, ಆದರ್ಶ ಕನ್ನಡ ಬಳಗದ ಅಧ್ಯಕ್ಷ ಮಲಿಕಕಾನ ಶೇಖ ಉಪಸ್ಥಿತರಿದ್ದರು.





