ಕಾರ್ಕಳ; ರಸ್ತೆ ದಾಟುತ್ತಿದ್ದ ಕಾಡುಕೋಣಕ್ಕೆ ಬೈಕ್ ಢಿಕ್ಕಿ: ಸವಾರ ಮೃತ್ಯು

ರೋಹಿತ್
ಕಾರ್ಕಳ : ರಸ್ತೆ ದಾಟುತ್ತಿದ್ದ ಕಾಡುಕೋಣಕ್ಕೆ ಬೈಕೊಂದು ಢಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟ ಘಟನೆ ಮೇ 31ರಂದು ರಾತ್ರಿ ಮಾಳ ಗ್ರಾಮದ ಕೋಡಂಗೆ ಶಾಲೆಯ ಬಳಿ ನಡೆದಿದೆ.
ಮೃತರನ್ನು ಸವಾರ ಹುಕ್ರಟ್ಟೆ ನಿವಾಸಿ ರೋಹಿತ್ ಡಿಮೆಲ್ಲೋ (25) ಎಂದು ಗುರುತಿಸಲಾಗಿದೆ. ಸಹ ಸವಾರ ಮೃತರ ಸಂಬಂಧಿ ರೋಲ್ಸನ್ ಡಿಸೋಜ (23)ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.
ಇವರಿಬ್ಬರು ಹುಕ್ರಟ್ಟೆ ಕಡೆಯಿಂದ ಬಜಗೋಳಿ ಕಡೆಗೆ ಬೈಕಿನಲ್ಲಿ ಹೋಗುತ್ತಿ ರುವಾಗ ಏಕಾಏಕಿ ಕಾಡುಕೋಣಗಳ ಹಿಂಡು ರಸ್ತೆಗೆ ಬಂದಿದ್ದು, ಈ ವೇಳೆ ಬೈಕ್ ಕಾಡುಕೋಣವೊಂದಕ್ಕೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಸವಾರರಿಬ್ಬರು ರಸ್ತೆಗೆ ಬಿದ್ದು ತೀವ್ರವಾಗಿ ಗಾಯಗೊಂಡರು. ಇದರಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ರೋಹಿತ್ ಡಿಮೆಲ್ಲೋ ಕಾರ್ಕಳ ಸರಕಾರಿ ಆಸ್ಪತ್ರೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





