ಮಾನನಷ್ಟ ಪ್ರಕರಣ ಗೆದ್ದ ಜಾನಿ ಡೆಪ್; ಮಾಜಿ ಪತ್ನಿ ನೀಡಬೇಕಿರುವ ಪರಿಹಾರ 15 ದಶಲಕ್ಷ ಡಾಲರ್!
ಜಾನಿ ಡೆಪ್ (PTI)
ಫೇರ್ಫ್ಯಾಕ್ಸ್: ಮಾಜಿ ಪತ್ನಿ ಅಂಬರ್ ಹರ್ಡ್ ವಿರುದ್ಧ ಹಾಲಿವುಡ್ ನಟ ಜಾನಿ ಡೆಪ್ ಹೂಡಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ಡೆಪ್ ಅವರಿಗೆ ನ್ಯಾಯಾಲಯ 10.35 ದಶಲಕ್ಷ ಡಾಲರ್ ಪರಿಹಾರ ಘೋಷಿಸಿ ತೀರ್ಪು ನೀಡಿದೆ. ವಿವಾಹಕ್ಕೆ ಮುನ್ನ ಹಾಗೂ ಅಲ್ಪಾವಧಿಯ ವೈವಾಹಿಕ ಸಂಬಂಧದ ವೇಳೆ ಡಿಪ್ ಕಿರುಕುಳ ನೀಡಿದ್ದಾರೆ ಎಂದು ಹರ್ಡ್ ಮಾಡಿರುವ ಆರೋಪ ಸುಳ್ಳು ಎಂಬ ವಾದವನ್ನು ನ್ಯಾಯಾಲಯ ಎತ್ತಿಹಿಡಿದಿದೆ.
ಹರ್ಡ್ ಆರೋಪ ಸುಳ್ಳು ಎಂದು ಹೇಳಿಕೆ ನೀಡಿದ ಡೆಪ್ ಅವರ ವಕೀಲರಿಗೆ ಮಹಿಳೆಯ ಮಾನ ಹಾನಿ ಮಾಡಿದ್ದಕ್ಕಾಗಿ 20 ಲಕ್ಷ ಡಾಲರ್ ಪರಿಹಾರ ನೀಡುವಂತೆಯೂ ನ್ಯಾಯಾಲಯ ಆದೇಶಿಸಿದೆ.
ಈ ಕುತೂಹಲಕಾರಿ ಪ್ರಕರಣದ ಟೆಲಿ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಲಯ ಈ ತೀರ್ಪು ನೀಡಿದೆ. ಈ ಪ್ರಕರಣದಲ್ಲಿ ಜಯ ಗಳಿಸಿ ತಮ್ಮ ಗೌರವವನ್ನು ಮರಳಿ ಪಡೆಯುವ ವಿಶ್ವಾಸವನ್ನು ಡಿಪ್ ಈ ಮುನ್ನ ವ್ಯಕ್ತಪಡಿಸಿದ್ದರು. ಈ ಪ್ರಕರಣದ ವಿಚಾರಣೆ ವೇಳೆ ಡಿಪ್ ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿ ಕೋರ್ಟ್ಹಾಲ್ನಲ್ಲಿ ಜಮಾಯಿಸಿದ್ದರು.
2018ರ ಡಿಸೆಂಬರ್ ನಲ್ಲಿ ಡಿಪ್ ವಿರುದ್ಧ ಹರ್ಡ್ ಫೇರ್ಫ್ಯಾಕ್ಸ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಇದಕ್ಕೆ ಪ್ರತಿಯಾಗಿ "ಕಿರುಕುಳ ಎದುರಿಸಿರುವ ಸಾರ್ವಜನಿಕ ಸೇವಕಿಯ ಪ್ರತಿನಿಧಿ" ಎಂದು ವಾಷಿಂಗ್ಟನ್ ಪೋಸ್ಟ್ನಲ್ಲಿ ಹೇಳಿಕೊಂಡಿದ್ದರು. ಈ ಲೇಖನದ ಮೂಲಕ ಡಿಪ್ ಅವರ ಮಾನಹಾನಿ ಮಾಡಿದ್ದಾಗಿ ವಕೀಲರು ವಾದಿಸಿದ್ದರು.
ಪ್ರಕರಣದಲ್ಲಿ ಡಿಪ್, ಹರ್ಡ್ಗೆ ದೈಹಿಕ ಹಾಗೂ ಲೈಂಗಿಕವಾಗಿ ಕಿರುಕುಳ ನೀಡಿದ್ದಾರೆಯೇ ಎನ್ನುವ ಬಗ್ಗೆ ಸಾಕ್ಷ್ಯವನ್ನು ಪರಿಶೀಲಿಸಲಾಗಿತ್ತು. ಆಸ್ಟ್ರೇಲಿಯಾದಲ್ಲಿ ಸಂಘರ್ಷ ಸೇರಿದಂತೆ ಹಲವು ಬಾರಿ ಹಲ್ಲೆ ನಡೆಸಿದ್ದಾಗಿ ಹರ್ಡ್ ಹೇಳಿದ್ದರು.