ಸಾಮಾಜಿಕ ಕಾರ್ಯಕರ್ತ ಮುಹಮ್ಮದ್ ರಫೀಕ್ ಆತೂರು ನಿಧನ

ಕಡಬ, ಜೂ.2: ಸಾಮಾಜಿಕ ಕಾರ್ಯಕರ್ತ ಮುಹಮ್ಮದ್ ರಫೀಕ್ ಆತೂರು(50) ಅಲ್ಪಕಾಲದ ಅನಾರೋಗ್ಯದಿಂದ ಬುಧವಾರ ರಾತ್ರಿ ನಿಧನರಾಗಿದ್ದಾರೆ.
ದುಬೈಯಲ್ಲಿ ಸುಮಾರು ಇಪ್ಪತ್ತೈದು ವರ್ಷಗಳಿಂದ ಉದ್ಯೋಗದಲ್ಲಿದ್ದ ರಫೀಕ್ ಇತ್ತೀಚೆಗೆ ಅನಾರೋಗ್ಯ ಕ್ಕೊಳಗಾಗಿದ್ದರು. ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕಳೆದ ರಾತ್ರಿ ಕೊನೆಯುಸಿರೆಳೆದಿದ್ದಾರೆ.
ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಸಾಮಾಜಿಕ, ಧಾರ್ಮಿಕ ವಿದ್ಯಾ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ರಫೀಕ್ ಅವರು ಎಸ್ಕೆಎಸ್ಸೆಸ್ಸೆಫ್ ಕರ್ನಾಟಕ ಯುಎಇ ಸಮಿತಿ, ಕರ್ನಾಟಕ ಇಸ್ಲಾಮಿಕ್ ಸೆಂಟರ್ ಕೇಂದ್ರ ಸಮಿತಿ, ದಾರುನ್ನೂರು ಯುಎಇ ಸಮಿತಿ, ನೂರುಲ್ ಹುದಾ ಯುಎಇ ಸಮಿತಿ, ಸಂಶುಲ್ ಉಲಮಾ ಅರೆಬಿಕ್ ಕಾಲೇಜು ಯುಎಇ ಸಮಿತಿ, ದಾರುಸ್ಸಲಾಮ್ ದುಬೈ ಸಮಿತಿ ಮತ್ತು ಅಧೀನ ಸಮಿತಿಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಸಂತಾಪ: ಮುಹಮ್ಮದ್ ರಫೀಕ್ ಆತೂರು ನಿಧನಕ್ಕೆ ಎಸ್ಕೆಎಸ್ಸೆಸ್ಸೆಫ್ ಕರ್ನಾಟಕ ಯುಎಇ ಸಮಿತಿಯ ಅಧ್ಯಕ್ಷ ಸೈಯದ್ ಅಸ್ಗರ್ ಅಲಿ ತಂಙಳ್ ಮತ್ತು ಅಧೀನ ಸಮಿತಿಗಳ ಪ್ರಮುಖರು ಸಂತಾಪ ಸೂಚಿಸಿವೆ.





