ಕೊಪ್ಪ | ತಲೆನೋವು ಎಂದಿದ್ದಕ್ಕೆ 6ನೇ ತರಗತಿ ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಶಿಕ್ಷಕನಿಂದ ಹಲ್ಲೆ

ಚಿಕ್ಕಮಗಳೂರು, ಜೂ.2: ತಲೆನೋವಾಗುತ್ತಿದೆ ಎಂದು ಹೇಳಿದ 6ನೇ ತರಗತಿ ವಿದ್ಯಾರ್ಥಿಗೆ ದೈಹಿಕ ಶಿಕ್ಷಣ ಶಿಕ್ಷಕನೋರ್ವ ಬಾಸುಂಡೆ ಬರುವಂತೆ ಹಲ್ಲೆ ನಡೆಸಿರುವ ಘಟನೆ ಕೊಪ್ಪ ತಾಲೂಕಿನ ಬಂಡೀಗಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿರುವುದು ವರದಿಯಾಗಿದೆ.
ಶ್ರೇಯಸ್ ಹಲ್ಲೆಗೊಳಗಾದ ವಿದ್ಯಾರ್ಥಿ. ದೈಹಿಕ ಶಿಕ್ಷಣ ಶಿಕ್ಷಕ ನಾಗರಾಜ್ ಎಂಬುವರು ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ.
ತರಗತಿಯಲ್ಲಿ ಸರಿಯಾಗಿ ಬರೆಯಬೇಕು ಎಂದು ಶ್ರೇಯಸ್ ತಲೆಗೆ ಶಿಕ್ಷಕ ನಾಗರಾಜ್ ಹೊಡೆದಿದ್ದರೆನ್ನಲಾಗಿದೆ. ಈ ವೇಳೆ ತಲೆನೋವಾಗುತ್ತಿದೆ ಎಂದು ಹೇಳಿದ್ದಕ್ಕೆ ಶ್ರೇಯಸ್ ಕಾಲಿಗೆ-ಬೆನ್ನಿಗೆ ಮನಸ್ಸೋ ಇಚ್ಛೆ ಹೊಡೆದರೆನ್ನಲಾಗಿದೆ. ಇದರಿಂದ ಬಾಲಕನ ಬೆನ್ನ ಮೇಲೆ ಬಾಸುಂಡೆ ಬಂದಿವೆ.
ವಿದ್ಯಾರ್ಥಿಗೆ ಥಳಿಸಿದ ದೈಹಿಕ ಶಿಕ್ಷಣ ಶಿಕ್ಷಕ ನಾಗರಾಜ್ ವಿರುದ್ಧ ಸ್ಥಳೀಯರು, ಪೋಷಕರ ಆಕ್ರೋಶ ವ್ಯಕ್ತಪಡಿಸಿದ್ದು, ಅವರ ವಜಾಕ್ಕೆ ಆಗ್ರಹಿಸಿದ್ದಾರೆ.
Next Story





