ಬಿಕರ್ನಕಟ್ಟೆ: ಅಹ್ಸನುಲ್ ಮಸಾಜಿದ್‌ನಲ್ಲಿ ಮದ್ರಸ ಪ್ರಾರಂಭ

ಮಂಗಳೂರು, ಜೂ.2: ಅಸ್ಸುಫಾ ಅಕಾಡಮಿಯ ನೇತೃತ್ವದಲ್ಲಿ ಬಿಕರ್ನಕಟ್ಟೆಯ ಅಹ್ಸನುಲ್ ಮಸಾಜಿದ್‌ನಲ್ಲಿ ಮದ್ರಸ ಪ್ರಾರಂಭಿಸಲಾಗಿದೆ.
ಮೌಲಾನಾ ಶುಐಬ್ ಹುಸೈನಿ ನದ್ವಿ ಅವರು ಮದ್ರಸವನ್ನು ಉದ್ಘಾಟಿಸಿ ಶಿಕ್ಷಣದ ಮಹತ್ವದ ಬಗ್ಗೆ ವಿವರಿಸಿದರು. ಬೋಳಾರ್ ಇಸ್ಲಾಮಿಕ್ ಸೆಂಟರ್‌ನಲ್ಲಿ ಸ್ಥಾಪನೆಗೊಳ್ಳಲಿರುವ ಅರಬೀ ಭಾಷೆಯಲ್ಲಿ ಪಠ್ಯಕ್ರಮವಿರುವ ಸಂಸ್ಥೆಗೆ ತಮ್ಮ ಮಕ್ಕಳನ್ನು ದಾಖಲಿಸುವಂತೆ ಕೇಳಿಕೊಂಡರು.
ಮಸೀದಿಯ ಅಧ್ಯಕ್ಷ ಸಯ್ಯದ್ ಮೊಹಮ್ಮದ್ ಸಯೀದ್, ಮೌಲಾನ ಫರ್ಹಾನ್ ನದ್ವಿ, ರಹ್ಮತುಲ್ಲಾ ಸಾಬಾ, ನಝೀರ್ ಸಾಬ್, ಮಸೀದಿಯ ಖತೀಬ್ ಮೌಲಾನ ಅನೀಸ್ ಅಹ್ಮದ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಇಕ್ರಾ ಅರಬಿಕ್ ಶಾಲೆಯ ವಿದ್ಯಾರ್ಥಿ ಮುಹಮ್ಮದ್ ಅರ್ಶ್ ಕಿರಾಅತ್ ಪಠಿಸಿದರು. ಇಕ್ರಾ ಶಾಲೆಯ ವಿದ್ಯಾರ್ಥಿ ಇಶಾನ್ ಕಾರ್ಯಕ್ರಮ ನಿರೂಪಿಸಿದರು.
ಈ ಮದ್ರಸದಲ್ಲಿ ಅಕೀದ, ಕುರ್‌ಆನ್ ಕಂಠಪಾಠ, ಪ್ರವಾದಿ ವಚನ, ಫಿಕ್ಹ್ ಮುಂತಾದ ವಿಷಯಗಳನ್ನು ಬೋಧಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.












