ಉಡುಪಿ: ಯುವಕ ನಾಪತ್ತೆ
ಉಡುಪಿ, ಜೂ.2: ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಕಾರ್ಕಳ ತಾಲೂಕು ರೆಂಜಾಳ ಗ್ರಾಮದ ಬ್ರಹ್ಮರಹಾಡಿ ನಿವಾಸಿ ಹರೀಶ್ ಶೆಟ್ಟಿ (33) ಎಂಬ ಯುವಕ ಮೇ 24 ರಂದು ಅಪರಾಹ್ನ 2:45ರ ಸುಮಾರಿಗೆ ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿದ್ದಾರೆ.
168 ಸೆಂ.ಮೀ. ಎತ್ತರ, ಗೋಧಿ ಮೈಬಣ್ಣ, ಅಗಲ ಮುಖ, ಸಾಧಾರಣ ಶರೀರ ಹೊಂದಿದ್ದು, ಕನ್ನಡ, ತುಳು ಹಾಗೂ ಹಿಂದಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಉಪನಿರೀಕ್ಷಕರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
Next Story