ಮಂಗಳೂರು: ಫೈನಾನ್ಸ್ ಹೆಸರಲ್ಲಿ ವಂಚನೆ: ದೂರು
ಮಂಗಳೂರು, ಜೂ.2: ಬಜಾಜ್ ಫೈನಾನ್ಸ್‌ನಿಂದ ಲೋನ್ ಪಡೆಯಲು ಯೋಜನೆ ರೂಪಿಸಿದ್ದ ವ್ಯಕ್ತಿಗೆ ಫೈನಾನ್ಸ್ ಹೆಸರಿನಲ್ಲಿ ಯಾರೋ ಒಬ್ಬ ಕರೆ ಮಾಡಿ ವಂಚಿಸಿದ ಬಗ್ಗೆ ದೂರು ದಾಖಲಾಗಿದೆ.
ಮೇ 25ರಂದು ವ್ಯಕ್ತಿಯೊಬ್ಬ ಕರೆ ಮಾಡಿ ಸಾಲ ಮಂಜೂರು ಮಾಡಲು ಕೆವೈಸಿ ಕಳುಹಿಸುವಂತೆ ತಿಳಿಸಿದ್ದಾರೆ. ಅದನ್ನು ನಂಬಿದ ದೂರುದಾರರು ಕೆವೈಸಿ ಕಳುಹಿಸಿದ್ದಾರೆ. ಆ ಬಳಿಕ ಇನ್ನೊಂದು ಕರೆ ಬಂದಿದ್ದು, ಲೋನ್ ಮಂಜೂರಾಗಿದೆ. ಅದರ ಮಾಹಿತಿಯನ್ನು ವಾಟ್ಸಾಪ್ ಮಾಡಲಾಗಿದೆ. ಅದಕ್ಕಾಗಿ ಅಗ್ರಿಮೆಂಟ್ ವೆಚ್ಚ, ಲೋನ್ ಪೇಮೆಂಟ್ ಹೋಲ್ಡ್ ವೆಚ್ಚವನ್ನು ಗೂಗಲ್ ಪೇ ಮಾಡುವಂತೆ ತಿಳಿಸಿದ್ದಾರೆ. ದೂರುದಾರರು ನಿಜವೆಂದು ನಂಬಿ ತನ್ನ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ 18,119 ರೂ. ವರ್ಗಾಯಿಸಿದ್ದಾರೆ. ಬಳಿಕ ತಾನು ಮೋಸ ಹೋಗಿರುವ ಬಗ್ಗೆ ಅರಿತುಕೊಂಡ ದೂರುದಾರರು ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
Next Story





