ಫ್ರೆಂಚ್ ಓಪನ್ : ಇತಿಹಾಸ ಸೃಷ್ಟಿಸಿದ ಕೊಕೊ ಗವೂಫ್

ಕೊಕೊ ಗವೂಫ್
ಪ್ಯಾರೀಸ್ : ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್ ನಲ್ಲಿ ಫೈನಲ್ ಪ್ರವೇಶಿಸಿದ 18 ವರ್ಷದ ಅಮೆರಿಕನ್ ಆಟಗಾರ್ತಿ ಕೊಕೊ ಗವೂಫ್ ಅತ್ಯಂತ ಕಿರಿಯ ವಯಸ್ಸಿನಲ್ಲಿ ಈ ಸಾಧನೆ ಮಾಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಗುರುವಾರ ನಡೆದ ಸೆಮಿಫೈನಲ್ ನಲ್ಲಿ ಮಾರ್ಟಿನಾ ಟ್ರೆವಿಸನ್ ವಿರುದ್ಧ 6-3, 6-1 ನೇರ ಸೆಟ್ಗಳ ಜಯದೊಂದಿಗೆ ಗವೂಫ್, ಪ್ರಶಸ್ತಿಗಾಗಿ ವಿಶ್ವದ ನಂಬರ್ 1 ಆಟಗಾರ್ತಿ ಇಗಾ ಸ್ವಿಯಾಟೆಕ್ ಅವರನ್ನು ಎದರಿಸಲಿದ್ದಾರೆ.
ಮರಿಯಾ ಶರಪೋವಾ 2004ರಲ್ಲಿ ವಿಂಬಲ್ಡನ್ ಗೆದ್ದ ಬಳಿಕ ಗ್ರ್ಯಾಂಡ್ ಸ್ಲಾಂ ಫೈನಲ್ ತಲುಪಿದ ಅತ್ಯಂತ ಕಿರಿಯ ಆಟಗಾರ್ತಿ ಎಂಬ ಕೀರ್ತಿಗೆ ಗವೂಫ್ ಭಾಜನರಾದರು. "ಸದ್ಯಕ್ಕೆ ನನಗೆ ಸ್ವಲ್ಪಮಟ್ಟಿಗೆ ಆಘಾತವಾಗಿದೆ" ಎಂದು ಗವೂಫ್ ಈ ಸಾಧನೆ ಬಳಿಕ ಉದ್ಗರಿಸಿದರು. "ಪಂದ್ಯ ಮುಕ್ತಾಯದ ಬಳಿಕ ನನಗೆ ಏನು ಹೇಳಬೇಕೆಂದು ತೋಚಲಿಲ್ಲ" ಎಂದು ಹೇಳಿದರು.
18ನೇ ಶ್ರೇಯಾಂಕದ ಗವೂಫ್ ಫೈನಲ್ನಲ್ಲಿ ಸತತ 34 ಪಂದ್ಯಗಳನ್ನು ಗೆದ್ದಿರುವ ನಂಬರ್ ವನ್ ಆಟಗಾರ್ತಿ ಸ್ವಿಯಾಟೆಕ್ ಸವಾಲನ್ನು ಎದುರಿಸಬೇಕಿದೆ.
Next Story