Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಆಮಿಷದ ಹೆಸರಿನಲ್ಲಿ ಸಮಾಜಮುಖಿ...

ಆಮಿಷದ ಹೆಸರಿನಲ್ಲಿ ಸಮಾಜಮುಖಿ ಕಾರ್ಯಗಳನ್ನು ಗುರಿಯಾಗಿಸುವುದು

ಜೆರಾಲ್ಡ್ ಡಿಸೋಜಾಜೆರಾಲ್ಡ್ ಡಿಸೋಜಾ3 Jun 2022 10:43 AM IST
share
ಆಮಿಷದ ಹೆಸರಿನಲ್ಲಿ ಸಮಾಜಮುಖಿ ಕಾರ್ಯಗಳನ್ನು ಗುರಿಯಾಗಿಸುವುದು

ಭಾಗ-1

ಶಿಕ್ಷಣದಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ತರಗತಿಗಳನ್ನು ನಡೆಸುತ್ತಿರುವ ಕ್ರೈಸ್ತ ಶಿಕ್ಷಕಿ, ತನ್ನ ಮಗನ ಸೈಕಲ್ ಅನ್ನು ಪಕ್ಕದ ಮನೆಯವರಿಗೆ ನೀಡುವ ಮುಸ್ಲಿಮ್ ವ್ಯಕ್ತಿ ಹಾಗೂ ಹಿಂದೂಯೇತರ ವ್ಯಕ್ತಿಯೊಬ್ಬ ಕಡು ಬಡತನದ ಹಿಂದೂ ಕುಟುಂಬಕ್ಕೆ ದಿನಸಿಗಳನ್ನು ನೀಡುವುದೆಲ್ಲವೂ ಕಪೋಲಕಲ್ಪಿತ ಬಲವಂತದ ಮತಾಂತರ ಮಾಡುವ ಉದ್ದೇಶದಿಂದ ನೀಡಲಾದ ‘ಆಮಿಷ’ ಎಂದು ಕರೆಯಬಹುದೇ? 

ಬಲವಂತದ ಮತಾಂತರ ಹಾಗೂ ಅನಧಿಕೃತ ಅಂತರ್ಜಾತಿ ವಿವಾಹಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮೇ 12, 2022ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ, ಸಾಮಾನ್ಯವಾಗಿ ಮತಾಂತರ ನಿಷೇಧ ಕಾಯ್ದೆ ಎನ್ನುವ ‘ಕರ್ನಾಟಕ ಧಾರ್ಮಿಕ ಹಕ್ಕು ಸಂರಕ್ಷಣಾ ಆಧ್ಯಾದೇಶ’ವನ್ನು ಸುಗ್ರೀವಾಜ್ಞೆಯ ಮೂಲಕ ಜಾರಿಗೆ ತರಲು ಕರ್ನಾಟಕದ ರಾಜ್ಯಪಾಲರಿಗೆ ಅನುಮೋದಿಸಲಾಯಿತು. ಈ ವಿಧೇಯಕಕ್ಕೆ ರಾಜ್ಯಪಾಲರು ಸಹಿ ಹಾಕಿದ ನಂತರ ಅದು ತಕ್ಷಣದಿಂದಲೇ ಕಾಯ್ದೆಯಾಗಿ ಜಾರಿಗೆ ಬಂದಿದೆ. ಈ ಆಧ್ಯಾದೇಶದ ಪ್ರಕಾರ ‘‘ಯಾವುದೇ ವ್ಯಕ್ತಿಯು ಮತ್ತೊಬ್ಬ ವ್ಯಕ್ತಿಯನ್ನು ಯಾವುದೇ ಧರ್ಮಕ್ಕೆ ಪ್ರತ್ಯಕ್ಷವಾಗಲಿ ಅಥವಾ ಪರೋಕ್ಷವಾಗಲಿ, ನಗದು ರೂಪದಲ್ಲಾಗಲಿ ಅಥವಾ ವಸ್ತುವಿನ ರೂಪದಲ್ಲಾಗಲಿ, ನೀಡುವ ಯಾವುದೇ ಪ್ರತಿಫಲ, ಉಡುಗೊರೆ, ಸುಲಭ ಹಣ ಅಥವಾ ಭೌತಿಕ ಪ್ರಯೋಜನದ ಮೂಲಕವಾಗಲಿ ಮತಾಂತರಿಸಲು ಪ್ರಯತ್ನಿಸಬಾರದು.’’

ಆದರೆ ಪ್ರಸ್ತುತ ಧರ್ಮದಿಂದ ತಮ್ಮ ಹಿಂದಿನ ಧರ್ಮಕ್ಕೆ ಮತಾಂತರವಾಗುವವರಿಗೆ ಇವುಗಳಿಂದ ಹಲವು ವಿನಾಯಿತಿಯನ್ನು ನೀಡಲಾಗಿದೆ. ಮತಾಂತರವಾಗುತ್ತಿರುವವರ ಸಂಬಂಧಿಕರು ಅಥವಾ ಯಾವುದೇ ರೀತಿಯಲ್ಲಿ ಮತಾಂತರ ವ್ಯಕ್ತಿಯೊಂದಿಗೆ ಸಂಬಂಧವನ್ನು ಹೊಂದಿರುವವರು ದೂರನ್ನು ದಾಖಲಿಸಬಹುದು. ಈ ಕಾಯ್ದೆಯನ್ನು ಉಲ್ಲಂಘಿಸುವವರಿಗೆ 3 ರಿಂದ 5 ವರ್ಷಗಳ ಕಾಲ ಜೈಲುಶಿಕ್ಷೆ ಹಾಗೂ ಮತಾಂತರಿಸಿದ ವ್ಯಕ್ತಿ ಸಾಮಾನ್ಯ ವರ್ಗಕ್ಕೆ ಸೇರಿದ್ದರೆ 25 ಸಾವಿರ ರೂಪಾಯಿಗಳ ದಂಡ ಅಥವಾ ಮಂತಾತರಿಸಿದ ವ್ಯಕ್ತಿಗಳು ಮಕ್ಕಳು, ಮಹಿಳೆಯರು ಅಥವಾ ಅನುಸೂಚಿತ ಜಾತಿ ಮತ್ತು ವರ್ಗಗಳಿಗೆ ಸೇರಿದ್ದರೆ, ಶಿಕ್ಷೆಯ ಪ್ರಮಾಣವು 10 ವರ್ಷಗಳು ಹಾಗೂ 50 ಸಾವಿರ ರೂಪಾಯಿಗಳ ದಂಡವನ್ನು ವಿಧಿಸಲು ಅವಕಾಶ ಇರುತ್ತದೆ. ಇತರರ ಧಾರ್ಮಿಕ ಭಾವನೆಗಳನ್ನು ಕೆಡಿಸುವ ಉದ್ದೇಶದಿಂದ ನಡೆಸುವ ಬಲವಂತದ ಮತಾಂತರವು ಭಾರತೀಯ ದಂಡ ಸಂಹಿತೆ ಸೆಕ್ಷನ್ 295 ಎ ಹಾಗೂ ಸೆಕ್ಷನ್ 298ರ ಪ್ರಕಾರ ಸಂಜ್ಞೆಯ ಅಪರಾಧವಾಗಿದೆ. ಇದರ ಪ್ರಕಾರ ಆರೋಪ ಸಾಬೀತಾದರೆ ಅಪರಾಧಿಗೆ 3 ವರ್ಷಗಳ ಜೈಲು ಶಿಕ್ಷೆ ಹಾಗೂ ದಂಡವನ್ನು ವಿಧಿಸಬಹುದು. ತಮ್ಮ ಇಚ್ಛೆಗೆ ವಿರುದ್ಧವಾಗಿ ಯಾವ ವ್ಯಕ್ತಿಯನ್ನೂ ಇತರ ಧರ್ಮವನ್ನು ಪಾಲಿಸುವಂತೆ ಬಲವಂತ ಮಾಡುವಂತಿಲ್ಲ ಹಾಗೂ ಒತ್ತಡವನ್ನೂ ಸಹ ಹೇರುವಂತಿಲ್ಲ ಎಂದು ಕಾನೂನು ಹೇಳುತ್ತದೆ. ಮತ್ತೊಂದೆಡೆ, ಭಾರತದ ಸಂವಿಧಾನದ 25ನೇ ಅನುಚ್ಛೇದವು ತನ್ನ ಪ್ರಜೆಗಳು ತಮಗೆ ಇಷ್ಟವಾದ ಯಾವುದೇ ಧರ್ಮ, ವಿಶ್ವಾಸ ಮತ್ತು ನಂಬಿಕೆಯನ್ನು ಆಚರಿಸಲು ಸ್ವತಂತ್ರರು ಹಾಗೂ ಇಲ್ಲಿನ ಧರ್ಮಗಳು ತಮ್ಮ ಧಾರ್ಮಿಕ ವಿಧಿ ವಿಧಾನಗಳನ್ನು ಕಾನೂನಾತ್ಮಕವಾಗಿ, ಸಾರ್ವಜನಿಕ ಜೀವನಕ್ಕೆ ಧಕ್ಕೆಬರದಂತೆ ಆಚರಿಸಲು ಸ್ವತಂತ್ರರು ಎಂದೂ ಸ್ಪಷ್ಟವಾಗಿ ಉಲ್ಲೇಖಿಸಿದೆ. ‘‘ಬಲವಂತದ ಮತಾಂತರ’’ವನ್ನು ನಿಲ್ಲಿಸುವ ನೆಪದಲ್ಲಿ ಈ ಆಧ್ಯಾದೇಶವು ಸಂವಿಧಾನದ ಅನುಚ್ಛೇದ 25ರಲ್ಲಿನ ಅಂಶಗಳನ್ನು ಉಲ್ಲಂಘಿಸುತ್ತದೆ. ಉಚಿತ ಸವಲತ್ತುಗಳ ಅಪರಾಧೀಕರಣ

‘ಕರ್ನಾಟಕ ಧಾರ್ಮಿಕ ಹಕ್ಕು ಸಂರಕ್ಷಣಾ ಆಧ್ಯಾದೇಶ-2021’ ಈ ನೆಲದ ಬಡವರಿಗೆ ಹಾಗೂ ಸಮಾಜದಿಂದ ಅಂಚಿಗೆ ತಳ್ಳಲ್ಪಟ್ಟವರಿಗೆಂದೇ ಉಚಿತ ಹಾಗೂ ರಿಯಾಯಿತಿ ಸವಲತ್ತುಗಳನ್ನು ಅಪರಾಧೀಕರಿಸಿ, ಕ್ರೈಸ್ತ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಗಳನ್ನು ಗುರಿಯಾಗಿಸುವ ಉದ್ದೇಶದಿಂದಲೇ ರಚಿತವಾಗಿದೆ. ಶೈಕ್ಷಣಿಕ ಹಾಗೂ ಆರೋಗ್ಯತಜ್ಞರು ಈ ಕ್ಷೇತ್ರಗಳ ಸಾರ್ವಜನಿಕ ಹಾಗೂ ಖಾಸಗೀಕರಣದ ಪರ ಮತ್ತು ವಿರೋಧವಾಗಿ ಮಾತನಾಡುತ್ತಿರುವ ಹೊತ್ತಿನಲ್ಲೇ, ಈ ರಂಗಗಳು ಗುರುತಿಸುವಿಕೆಯಿಂದ ಹಿಂದೆ ಸರಿಯಲ್ಪಟ್ಟಿವೆ. ಖಾಸಗಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳು ಎಗ್ಗಿಲ್ಲದೆ, ಅನಿಯಂತ್ರಿತವಾಗಿ ಬೆಲೆಗಳನ್ನು ಏರಿಸುತ್ತಿರುವಾಗ, ಸಾರ್ವಜನಿಕ ಕ್ಷೇತ್ರಗಳು ಮಾತ್ರ ಸೂಕ್ತ ಅನುದಾನವಿಲ್ಲದೆ ಸೊರಗುತ್ತಿವೆಯಲ್ಲದೆ, ಬಹುತೇಕ ಸಂದರ್ಭಗಳಲ್ಲಿ ಕನಿಷ್ಠ ಸವಲತ್ತುಗಳಿಂದಲೂ ವಂಚಿತವಾಗಿವೆ. ಸಾರ್ವಜನಿಕ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳ ಸೇವೆಗಳು ಎಲ್ಲರಿಗೂ ಉಚಿತ ಹಾಗೂ ರಿಯಾಯಿತಿ ಬೆಲೆಯಲ್ಲಿ ನೀಡುವ ನಿಟ್ಟಿನಲ್ಲಿ ಸರಕಾರಗಳು ತಮ್ಮ ಜವಾಬ್ದಾರಿಯನ್ನು ಹೊಂದಿವೆಯಾದರೂ, ಈವರೆಗೂ ಸರಕಾರಗಳು ಮಾಡಬೇಕಿದ್ದ ಕಾರ್ಯಗಳ ನಡುವಿನ ಅಂತರವನ್ನು ತುಂಬಿರುವುದು ಈ ಸೇವಾ ಸಂಸ್ಥೆಗಳು ಎನ್ನುವುದನ್ನು ಮರೆಯಬಾರದು. ಆದಾಗ್ಯೂ, ಈ ಆಧ್ಯಾದೇಶದಲ್ಲಿ ಸಾಮಾಜಿಕ ಸೇವೆಯ ಹಿನ್ನೆಲೆಯಲ್ಲಿ ನೀಡುವಂತಹ ಸವಲತ್ತು ಹಾಗೂ ಸೌಲಭ್ಯಗಳನ್ನೂ ಆಮಿಷ ಎಂದು ಕರೆಯಲಾಗಿದೆ. ಆಮಿಷಗಳು ಎಂದು ಕರೆಯಲಾಗಿರುವ ಪಟ್ಟಿಯಲ್ಲಿ, ಈ ಕೆಳಗಿನವುಗಳನ್ನು ಸೇರಿಸಲಾಗಿದೆ. 1. ಉಡುಗೊರೆಗಳು, ಪ್ರತಿಫಲ, ಹಣ ಅಥವಾ ನಗದು ಹಾಗೂ ಇನ್ನಿತರ ರೂಪದ ಲಾಭದಾಯಕ ವಸ್ತುಗಳು.

2. ಉದ್ಯೋಗ, ಯಾವುದೇ ಧಾರ್ಮಿಕ ಸಭೆಗಳು ನಡೆಸುತ್ತಿರುವ ಪ್ರಸಿದ್ಧ ಶಾಲೆಗಳಲ್ಲಿ ಉಚಿತ ಶಿಕ್ಷಣ.

3. ಒಳ್ಳೆಯ ಜೀವನ ಶೈಲಿ, ದೈವಿಕ ಆನಂದ ಇತ್ಯಾದಿ.

ಈ ಮೇಲಿನ ಅಂಶಗಳಿಂದ ಒಂದಂತೂ ಸ್ಪಷ್ಟವಾಗುತ್ತದೆ. ಅದೇನೆಂದರೆ ಕ್ರೈಸ್ತ ಶಾಲೆಗಳು ಹಾಗೂ ಸಂಸ್ಥೆಗಳ ಕುರಿತು ಅತೃಪ್ತಿ ಅಥವಾ ದ್ವೇಷವನ್ನು ಹೊಂದಿರುವ ಯಾವುದೇ ವ್ಯಕ್ತಿಯೊಬ್ಬ ಈ ಕಾನೂನನ್ನು ದುರುಪಯೋಗಪಡಿಸಿಕೊಳ್ಳಬಹುದು. ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ, ಇಲ್ಲಿ ಆರೋಪವನ್ನು ಸಾಬೀತುಪಡಿಸಬೇಕಾದ ಅನಿವಾರ್ಯ ಆರೋಪಿಯ ಮೇಲೆಯೇ ಇರುವುದು. ಇದು ಹೇಗೆ ಅಪರಾಧಿಕ ಕಾನೂನು ಕಾರ್ಯನಿರ್ವಹಿಸುತ್ತದೆ ಎಂಬುದರ ಮೂಲ ಆಶಯವನ್ನೇ ಧಿಕ್ಕರಿಸುತ್ತದೆ. ಈ ಕಾನೂನಿನ ಭಯದಿಂದ, ಕ್ರೈಸ್ತ ಶಾಲಾ ಸಂಸ್ಥೆಗಳು ಈಗಾಗಲೇ ತಾವು ನೀಡುತ್ತಿರುವ ಉಚಿತ ಶಿಕ್ಷಣದಂತಹ ಸೇವಾ ಕಾರ್ಯಗಳನ್ನು ಕೂಡಲೇ ನಿಲ್ಲಿಸಿಬಿಡಬಹುದು. ಈಗಲೂ ಕಾನ್ವೆಂಟ್ ಶಾಲೆಗಳು ಹಾಗೂ ಮಿಷನ್ ಆಸ್ಪತ್ರೆಗಳನ್ನೇ ತಮ್ಮ ಮೊದಲ ಆಯ್ಕೆಯನ್ನಾಗಿಸಿಕೊಂಡಿರುವ ಬಡವರು ಮತ್ತು ಮಧ್ಯಮ ವರ್ಗದವರು ಈ ಕಾನೂನಿಗೆ ಮೊದಲು ಬಲಿಯಾಗುತ್ತಾರೆ. ಅಪ್ರಾಪ್ತ ವಯಸ್ಕರ, ಮಹಿಳೆಯರ ಹಾಗೂ ಅನುಸೂಚಿತ ಜಾತಿ ಮತ್ತು ಬುಡಕಟ್ಟುಗಳ ಜನರನ್ನು ಮತಾಂತರಿಸಿದರೆ ಹೆಚ್ಚಿನ ಶಿಕ್ಷೆಯನ್ನು ನೀಡಲಾಗುವುದು ಎಂದು ಹೇಳಿರುವ ಈ ಆಧ್ಯಾದೇಶವು ಇವರೆಲ್ಲರೂ ಅಲ್ಪಜ್ಞಾನಿಗಳು, ತಮ್ಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಅಸಮರ್ಥರಾಗಿರುವ ಕಾರಣ, ಸರಕಾರ ಅವರ ಮೇಲ್ವಿಚಾರಣೆಯನ್ನು ವಹಿಸುತ್ತದೆ ಎಂದು ಪರೋಕ್ಷವಾಗಿ ಹೇಳುತ್ತಿದೆ ಅಥವಾ ಈ ರೀತಿಯ ಅಭಿಪ್ರಾಯವನ್ನು ಹೊಂದಿದೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ. ಇದರ ಬದಲಾಗಿ ಸರಕಾರವು ಈ ಸಮುದಾಯಗಳಿಗೆ ತಾರತಮ್ಯದ ವಿರುದ್ಧದ ಹಕ್ಕು, ಶೈಕ್ಷಣಿಕ ಹಕ್ಕು, ಜೀವನೋಪಾಯದ ಹಕ್ಕು, ವಿದ್ಯಾರ್ಥಿ ವೇತನದ ಹಕ್ಕು ಹಾಗೂ ಸಾಮಾಜಿಕ ಭದ್ರತೆಯ ಕಾರ್ಯಕ್ರಮಗಳ ಹಕ್ಕುಗಳನ್ನು ಹೆಚ್ಚಿನ ರೀತಿಯಲ್ಲಿ ನೀಡಬೇಕಿದೆ. ಈ ಆಧ್ಯಾದೇಶದಲ್ಲಿ ಬಳಸಲಾಗಿರುವ ‘ತಪ್ಪುನಿರೂಪಣೆ, ಬಲವಂತ, ವಂಚನೆ, ಅನುಚಿತ ಪ್ರಭಾವ, ಒತ್ತಾಯ, ಆಮಿಷ, ಮದುವೆಯ ವಾಗ್ದಾನ’ ಎಂಬ ಪದಗಳು ಕಾನೂನಾತ್ಮಕ ಸ್ಪಷ್ಟತೆಯನ್ನು ಒದಗಿಸುವುದಿಲ್ಲ, ಬದಲಿಗೆ ಕಾನೂನಿನ ವೇಷದಲ್ಲಿ ದೌರ್ಜನ್ಯ ಮತ್ತು ಹಿಂಸೆಗೆ ದಾರಿಮಾಡಿಕೊಡುತ್ತವೆ. ಶಿಕ್ಷಣದಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ತರಗತಿಗಳನ್ನು ನಡೆಸುತ್ತಿರುವ ಕ್ರೈಸ್ತ ಶಿಕ್ಷಕಿ, ತನ್ನ ಮಗನ ಸೈಕಲ್ ಅನ್ನು ಪಕ್ಕದ ಮನೆಯವರಿಗೆ ನೀಡುವ ಮುಸ್ಲಿಮ್ ವ್ಯಕ್ತಿ ಹಾಗೂ ಹಿಂದೂಯೇತರ ವ್ಯಕ್ತಿಯೊಬ್ಬ ಕಡು ಬಡತನದ ಹಿಂದೂ ಕುಟುಂಬಕ್ಕೆ ದಿನಸಿಗಳನ್ನು ನೀಡುವುದೆಲ್ಲವೂ ಕಪೋಲಕಲ್ಪಿತ ಬಲವಂತದ ಮತಾಂತರ ಮಾಡುವ ಉದ್ದೇಶದಿಂದ ನೀಡಲಾದ ‘ಆಮಿಷ’ ಎಂದು ಕರೆಯಬಹುದೇ? ಆದ್ದರಿಂದ, ಈ ಕಾನೂನು ಎಂಬುದು ಸೋದರತ್ವದ ಕಲ್ಪನೆಯನ್ನೇ ನಾಶಗೊಳಿಸುವಂತಹದ್ದಾಗಿದೆ ಮಾತ್ರವಲ್ಲದೆ, ಸರ್ವ ರೀತಿಯಲ್ಲಿಯೂ ಸಂವಿಧಾನ ವಿರೋಧಿಯಾಗಿದೆ. ಈ ಕಾನೂನನ್ನು ಬಳಸಿಕೊಂಡು ಯಾರು ಬೇಕಾದರೂ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳನ್ನು ಗುರಿಯಾಗಿಸಬಹುದು ಎಂದು ತಿಳಿಯಲು ಕಷ್ಟವೇನಲ್ಲ. ಆರೋಪಗಳಿಗೆ ಸಾಕ್ಷಿಯನ್ನು ಒದಗಿಸಬೇಕಾದ ಹೊರೆಯನ್ನೂ ಆರೋಪಿಯ ಮೇಲೆ ಹಾಕುವುದು ಕಾನೂನು ಯಾವ ರೀತಿ ಇರಬಾರದು ಎನ್ನುವುದನ್ನು ಸೂಚಿಸುತ್ತದೆ. ಭಾರತೀಯ ಸಾಕ್ಷ ಅಧಿನಿಯಮ, 1872ರ ಸೆಕ್ಷನ್ 103 ‘‘ಯಾವುದೇ ಒಂದು ಕಾನೂನು ಪುರಾವೆಯನ್ನು ಒದಗಿಸದ ಹೊರತು ಒಂದು ನಿರ್ದಿಷ್ಟ ಅಂಶವನ್ನು ನ್ಯಾಯಾಲಯಗಳು ನಂಬಬೇಕು ಎಂದು ಬಯಸುವ ವ್ಯಕ್ತಿಯ ಮೇಲೆ ಸಾಕ್ಷದ ಜವಾಬ್ದಾರಿ ಇರುತ್ತದೆ.’’ ಎಂದು ಹೇಳುತ್ತದೆ. ಸಾಕ್ಷದ ಹೊರೆಯನ್ನು ಹಿಮ್ಮುಖವಾಗಿಸುವುದು ಹಾಗೂ ಅದನ್ನು ‘ಆಮಿಷ’ದೊಂದಿಗೆ ಸಮೀಕರಿಸುವುದು ಎಲ್ಲಾ ಕ್ರೈಸ್ತ ಸಂಸ್ಥೆಗಳನ್ನು ಅಂದರೆ ಶಾಲಾ ಕಾಲೇಜುಗಳು, ಆಸ್ಪತ್ರೆಗಳು, ಸಮಾಜ ಸೇವಾ ಕೇಂದ್ರಗಳು ಸುಳ್ಳು ಆರೋಪಗಳು, ದೌರ್ಜನ್ಯ ಹಾಗೂ ಅಕ್ರಮ ಹಣ ವಸೂಲಾತಿಯ ಜೊತೆಗೆ ಸುದೀರ್ಘ ಕಾನೂನಾತ್ಮಕ ಹೋರಾಟವನ್ನು ಎದುರಿಸುವಂತೆ ಮಾಡುವ ಹುನ್ನಾರವಾಗಿದೆ. ಸಂವಿಧಾನ ಶಿಲ್ಪಿಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರು ‘‘ಶೋಷಕ ಸಮುದಾಯಗಳು ಶಿಕ್ಷಣ, ಉತ್ತಮ ಬದುಕು ಮತ್ತು ಘನತೆಯನ್ನು ಪಡೆಯುವಲ್ಲಿ ಇರುವ ಶೋಷಿತ ಸಮುದಾಯಗಳ ಮಹತ್ವಾಕಾಂಕ್ಷೆಯನ್ನು ಸಹಿಸುವುದಿಲ್ಲ’’ ಎಂದು ಹೇಳುತ್ತಾರೆ. ಈ ಕುರಿತು ಮುಂದುವರಿದು ಮಾತನಾಡುವ ಅವರು ‘‘ದಲಿತರು ಶಿಕ್ಷಣವನ್ನು ಪಡೆದರೆ, ಒಳ್ಳೆಯ ಬಟ್ಟೆಗಳನ್ನು ಧರಿಸಿದರೆ ಅಥವಾ ತಾಮ್ರ ಮತ್ತು ಇತರ ಒಳ್ಳೆಯ ಗುಣಮಟ್ಟದ ಪಾತ್ರೆಗಳನ್ನು ಬಳಸಿದರೆ, ವ್ಯವಸಾಯಕ್ಕಾಗಿ ಜಮೀನನ್ನು ಖರೀದಿಸಿದರೆ, ಸತ್ತ ಪ್ರಾಣಿಗಳನ್ನು ತೆಗೆಯಲು ನಿರಾಕರಿಸಿದರೆ ಅಥವಾ ಮೇಲ್ಜಾತಿ ಹಿಂದೂಗಳಿಗೆ ಶಿರಬಾಗಿ ನಮಸ್ಕರಿಸಲು ನಿರಾಕರಿಸಿದರೆ, ಅವರು ಈ ಮೇಲ್ಜಾತಿಗಳ ಜಾತಿ ದೌರ್ಜನ್ಯಕ್ಕೆ ಗುರಿಯಾಗುತ್ತಾರೆ’’ ಎನ್ನುತ್ತಾರೆ. ‘‘ದೈಹಿಕ ಹಿಂಸೆಯು ಸಾಧ್ಯವಾಗದಿರುವಾಗ, ಸಾಮಾಜಿಕ ಬಹಿಷ್ಕಾರವನ್ನು ತಮ್ಮ ಆಯುಧವನ್ನಾಗಿ ಮಾಡಿಕೊಂಡು ದಲಿತ ಮತ್ತು ಹಿಂದುಳಿದ ವರ್ಗಗಳ ಮೇಲೆ ತಮ್ಮ ಶೋಷಣೆ ಮತ್ತು ದಬ್ಬಾಳಿಕೆಯನ್ನು ನಡೆಸುತ್ತಾರೆ’’ ಎಂದು ಡಾ. ಬಿ.ಆರ್. ಅಂಬೇಡ್ಕರ್ ಸ್ಪಷ್ಟವಾಗಿ ಉಲ್ಲೇಖಿಸುತ್ತಾರೆ.

ಈ ದೇಶದ, ವಿಶೇಷವಾಗಿ ನಮ್ಮ ರಾಜ್ಯದ ಅತ್ಯಂತ ಶೋಷಿತ ಹಾಗೂ ಹಿಂದುಳಿದ ಸಮುದಾಯಗಳಿಗೆ ಮೌನವಾಗಿ ದಶಕಗಳಿಂದಲೂ ಉತ್ತಮ ಗುಣಮಟ್ಟದ ಶೈಕ್ಷಣಿಕ ಹಾಗೂ ಆರೋಗ್ಯ ಸೇವೆಗಳನ್ನು ನೀಡುತ್ತಿದ್ದ ಕ್ರೈಸ್ತ ಸಮುದಾಯದ ಗುರಿಯಾಗಿಸುವಿಕೆಯನ್ನು ನಾವು ಇದೇ ದೃಷ್ಟಿಯಿಂದ ನೋಡಬೇಕು. ಈ ಸಂಸ್ಥೆಗಳು ಸಾವಿರಾರು ಯುವಕ ಯುವತಿಯರಿಗೆ ಜಾತಿಯ ಕೂಪದಿಂದ ಹೊರಬರಲು ದಾರಿಯನ್ನು ತೋರಿಸುತ್ತವೆ. ಇಲ್ಲವಾದಲ್ಲಿ ಈ ಯುವ ಮನಸ್ಸುಗಳು ಪ್ರಾಚೀನ ಕಾಲದ ಜಾತಿ ವ್ಯವಸ್ಥೆಯು ಸೃಷ್ಟಿಸಿದ ಕೆಲಸಗಳನ್ನೇ ಮುಂದುವರಿಸಬೇಕಿತ್ತು. ನಿಜಾರ್ಥದಲ್ಲಿ, ಡಾ. ಬಿ.ಆರ್. ಅಂಬೇಡ್ಕರ್ ಅವರು ಪ್ರತಿಪಾದಿಸಿದಂತೆ ಮತಾಂತರ ಎನ್ನುವುದು ಹೊಸ ಮತ್ತು ಘನತೆಯ ಬದುಕಿಗೆ ನಾಂದಿಯಾಗುತ್ತದೆ ಎನ್ನುವುದು ಜಾತಿ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟಿರುವ ಹಾಗೂ ಅದರ ವಿನಾಶವು ತಮ್ಮ ಸವಲತ್ತುಗಳ ವಿನಾಶ ಎಂದು ಪರಿಗಣಿಸುವವರಿಗೆ ಮಗ್ಗುಲಮುಳ್ಳಾಗಿ ಪರಿಣಮಿಸಿದೆ. 

-ಲೇಖಕರು ನಿರ್ದೇಶಕರು, ಸಂತ ಜೋಸೆಫರ ಕಾನೂನು ಕಾಲೇಜು, ಬೆಂಗಳೂರು

share
ಜೆರಾಲ್ಡ್ ಡಿಸೋಜಾ
ಜೆರಾಲ್ಡ್ ಡಿಸೋಜಾ
Next Story
X