ಉಪ ಚುನಾವಣೆ: ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿಗೆ ಭರ್ಜರಿ ಜಯ

Photo:PTI
ಹೊಸದಿಲ್ಲಿ: ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಚಂಪಾವತ್ ಉಪಚುನಾವಣೆಯಲ್ಲಿ 55,025 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ.
ಧಾಮಿ ಅವರು ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ನ ನಿರ್ಮಲಾ ಗಹ್ಟೋರಿ ಅವರನ್ನು ಸೋಲಿಸಿದ್ದಾರೆ ಎಂದು ಚಂಪಾವತ್ನಲ್ಲಿ ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.
ದಾಖಲೆಯ ಗೆಲುವಿಗಾಗಿ ಧಾಮಿ ಅವರನ್ನು ಅಭಿನಂದಿಸಿದ ಮೊದಲ ನಾಯಕರಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದ್ದಾರೆ. ಅವರು ಬಿಜೆಪಿ ಮೇಲೆ ಇಟ್ಟಿರುವ ನಂಬಿಕೆಗೆ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.
ಈ ವರ್ಷದ ಆರಂಭದಲ್ಲಿ ನಡೆದ ಚುನಾವಣೆಯಲ್ಲಿ ಸೋತಿದ್ದ ಧಾಮಿ ಮುಖ್ಯಮಂತ್ರಿ ಹುದ್ದೆ ಉಳಿಸಿಕೊಳ್ಳಲು ಈ ಉಪಚುನಾವಣೆಯಲ್ಲಿ ಗೆಲ್ಲುವುದು ಅನಿವಾರ್ಯವಾಗಿತ್ತು. ಮಂಗಳವಾರ ಉಪ ಚುನಾವಣೆ ನಡೆದಿತ್ತು.
ಬಿಜೆಪಿಯ ಮಾಜಿ ಶಾಸಕ ಕೈಲಾಶ್ ಗೆಹ್ಟೋರಿ ಅವರು ರಾಜ್ಯ ವಿಧಾನಸಭೆಗೆ ಧಾಮಿಗೆ ದಾರಿ ಮಾಡಿಕೊಡಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
Next Story





