ಅಕ್ಷಯ್ ಕುಮಾರ್ ಅವರೊಂದಿಗೆ ಸಿನೆಮಾ ವೀಕ್ಷಿಸಿದ ಆದಿತ್ಯನಾಥ್: ಅಖಿಲೇಶ್ ವ್ಯಂಗ್ಯ

Photo:twitter
ಹೊಸದಿಲ್ಲಿ: ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಗುರುವಾರ ತಮ್ಮ ಸಂಪುಟ ಸಹೋದ್ಯೋಗಿಗಳೊಂದಿಗೆ "ಸಾಮ್ರಾಟ್ ಪೃಥ್ವಿರಾಜ್" ಸಿನೆಮಾದ ವಿಶೇಷ ಪ್ರದರ್ಶನವನ್ನು ವೀಕ್ಷಿಸಿದರು. ರಾಜ್ಯದಲ್ಲಿ ಈ ಚಲನಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡುವುದಾಗಿಯೂ ಘೋಷಿಸಿದರು. ಬಿಜೆಪಿ ಸರಕಾರದ ವಿರುದ್ಧ ವ್ಯಂಗ್ಯವಾಡಿದ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಟಿಕೆಟ್ ಖರೀದಿಸಿ ನೋಡಿದ್ದರೆ ಆ ಚಿತ್ರ ಇನ್ನೂ ಉತ್ತಮವಾಗಿರುತ್ತಿತ್ತು ಎಂದು ಹೇಳಿದ್ದಾರೆ.
"ಲೋಕಭವನದಲ್ಲಿ ಸಮಾಜವಾದಿ ಪಕ್ಷದ ಸರಕಾರವು ನಿರ್ಮಿಸಿರುವ ಆಧುನಿಕ ಸಭಾಂಗಣದಲ್ಲಿ ಬಿಜೆಪಿ ಸರಕಾರದ ಸಂಪುಟ ಐತಿಹಾಸಿಕ ಚಲನಚಿತ್ರವನ್ನು ಆನಂದಿಸುತ್ತಿದೆ. ಚಿತ್ರವನ್ನು ಹಿಂಬದಿ ಆಸನದಿಂದ ವೀಕ್ಷಿಸಿದ್ದರೆ, ಉಚಿತವಾಗಿ ವೀಕ್ಷಿಸುವ ಬದಲಿಗೆ ಟಿಕೆಟ್ನೊಂದಿಗೆ ವೀಕ್ಷಿಸಿದ್ದರೆ ಅದು ಇನ್ನೂ ಉತ್ತಮವಾಗಿ ಕಾಣುತ್ತದೆ. ಏಕೆಂದರೆ ಇದರಿಂದ ರಾಜ್ಯದ ಆದಾಯಕ್ಕೆ ನಷ್ಟವಾಗುವುದಿಲ್ಲ" ಎಂದು ಯಾದವ್ ಟ್ವಿಟರ್ನಲ್ಲಿ ತಿಳಿಸಿದ್ದಾರೆ.
"ಐತಿಹಾಸಿಕ ಚಲನಚಿತ್ರವನ್ನು ವೀಕ್ಷಿಸಿದ ನಂತರ ಉತ್ತರ ಪ್ರದೇಶದ ಪ್ರಸ್ತುತ ಪರಿಸ್ಥಿತಿಯನ್ನು ಕೂಡ ನೋಡುವಂತೆ ಸಂಪುಟವನ್ನು ವಿನಂತಿಸುತ್ತೇನೆ”ಎಂದು ಯಾದವ್ ಅವರು ಮತ್ತೊಂದು ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಚಿತ್ರದ ಪ್ರದರ್ಶನವು ಲಕ್ನೋದ ಲೋಕಭವನದಲ್ಲಿ ನಡೆದಿದೆ. ಬಾಲಿವುಡ್ ನಟ ಅಕ್ಷಯ್ ಕುಮಾರ್, ನಾಯಕಿ ಮಾನುಷಿ ಚಿಲ್ಲರ್ ಹಾಗೂ ನಿರ್ದೇಶಕ ಚಂದ್ರಪ್ರಕಾಶ್ ದ್ವಿವೇದಿ ಉಪಸ್ಥಿತರಿದ್ದರು.
लोकभवन में सपा सरकार के बनाए ‘आधुनिक’ ऑडिटोरियम में भाजपा सरकार की कैबिनेट ‘ऐतिहासिक’ फ़िल्म देख रही है।
— Akhilesh Yadav (@yadavakhilesh) June 2, 2022
वैसे फ़िल्म पीछे बैठकर देखी जाए तो और भी अच्छी दिखती है और मुफ़्त के बजाय टिकट लेकर भी क्योंकि इससे राज्य के राजस्व का नुक़सान नहीं होता। pic.twitter.com/X91Ltscf2g