ಕಲಬುರಗಿ: ಅಪಘಾತಗೊಂಡ ಬಸ್ ನಲ್ಲಿ ಬೆಂಕಿ; 7 ಮಂದಿ ಪ್ರಯಾಣಿಕರು ಮೃತ್ಯು

ಕಲಬುರಗಿ: ಬೀದರ್-ಶ್ರೀರಂಗ ಪಟ್ಟಣ ಹೆದ್ದಾರಿ ಕಮಲಾಪುರ ಹೊರವಲಯದಲ್ಲಿ ಖಾಸಗಿ ಬೆಂಕಿ ಹೊತ್ತಿ ಸುಮಾರು 7 ಮಂದಿ ಪ್ರಯಾಣಿಕರು ಸಾವನ್ನಪ್ಪಿರುವ ಘಟನೆ ಇಂದು ಬೆಳಗ್ಗಿನ ಜಾವ ನಡೆದಿದೆ.
ಗೋವಾ ಮೂಲದ ಖಾಸಗಿ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಳಗ್ಗೆ 6.30ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದ್ದು, ಆರಂಭದಲ್ಲಿ 7 ಮಂದಿ ಮೃತಪಟ್ಟಿರುವ ಬಗ್ಗೆ ಶಂಕೆ ವ್ಯಕ್ತವಾಗಿತ್ತು. ಇದೀಗ ತೆಲಂಗಾಣ ಮೂಲದ 7 ಮಂದಿ ಮೃತಪಟ್ಟಿರುವುದಾಗಿ ಎಂದು ಕಮಲಾಪುರ ಠಾಣೆ ಪೊಲೀಸರು ಖಚಿತಪಡಿಸಿದ್ದಾರೆ.
ತೆಲಂಗಾಣದ ಹೈದರಬಾದ್‌ನಿಂದ ಗೋವಾಕ್ಕೆ ತೆರಳುತ್ತಿದ್ದ ಸುಮಾರು 30ಕ್ಕೂ ಹೆಚ್ಚು ಜನ ಪ್ರಯಾಣಿಕರಿದ್ದ ಖಾಸಗಿ ಬಸ್ ಟೆಂಪೊ ಒಂದಕ್ಕೆ ಢಿಕ್ಕಿ ಹೊಡೆದು ಕಂದಕಕ್ಕೆ ಉರುಳಿ ಬಿದ್ದಿದೆ. ಢಿಕ್ಕಿಯಾದ ರಭಸಕ್ಕೆ ಬಸ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಸಿಎಂ ಬೊಮ್ಮಾಯಿ ಸಂತಾಪ
ಕಲಬುರಗಿ ಹೊರವಲಯ ಕಮಲಾಪುರ ಬಳಿ ಇಂದು ಭೀಕರ ಅಪಘಾತ ನಡೆದು ಬಸ್ ನಲ್ಲಿದ್ದ 7 ಪ್ರಯಾಣಿಕರು ಸಜೀವ ದಹನರಾಗಿ ಹಲವರು ಗಾಯಗೊಂಡಿರುವ ವಿಷಯ ತಿಳಿದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
''ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಆಶಿಸಿರುವ ಮುಖ್ಯಮಂತ್ರಿಗಳು, ಗಾಯಗೊಂಡವರು ಶೀಘ್ರವಾಗಿ ಗುಣಮುಖರಾಗಲಿ'' ಎಂದು ಹಾರೈಸಿದ್ದಾರೆ.
ಕಲಬುರಗಿ ಹೊರವಲಯದ ಕಮಲಾಪುರ ಬಳಿ ಇಂದು ಭೀಕರ ಅಪಘಾತ ನಡೆದು ಬಸ್‌ನಲ್ಲಿದ್ದ 7 ಪ್ರಯಾಣಿಕರು ಸಜೀವ ದಹನರಾಗಿ, ಹಲವರು ಗಾಯಗೊಂಡಿರುವ ವಿಷಯ ತಿಳಿದು ದುಃಖಿತನಾಗಿದ್ದೇನೆ.
— Basavaraj S Bommai (@BSBommai) June 3, 2022
ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಗಾಯಗೊಂಡವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ.







