ಜೂ. 5:ಕಾಟಿಪಳ್ಳದಲ್ಲಿ ಸ್ವಾಲಿಹ್ ಉಸ್ತಾದರ ಅನುಸ್ಮರಣೆ
ಮಂಗಳೂರು : ಪಣಂಬೂರು ಮತ್ತು ಕಾಟಿಪಳ್ಳ ಪ್ರದೇಶಗಳಲ್ಲಿ ನಾಲ್ಕು ದಶಕಗಳ ಸುದೀರ್ಘ ಕಾಲ ಧಾರ್ಮಿಕ, ಲೌಕಿಕ, ಸಾಮಾಜಿಕ, ಶೈಕ್ಷಣಿಕ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ದುಡಿದು ೨೫ ವರ್ಷಗಳ ಹಿಂದೆ ಇಹಲೋಕ ತ್ಯಜಿಸಿದ ಮುಹಮ್ಮದ್ ಸ್ವಾಲಿಹ್ ಉಸ್ತಾದ್ ಕಾಟಿಪಳ್ಳ ಅವರ ಅನುಸ್ಮರಣೆ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮವು ಜೂ.೫ರಂದು ಸಂಜೆ ೪:೩೦ಕ್ಕೆ ಜಾಸ್ಮಿನ್ ಮಹಲ್‌ನಲ್ಲಿ ನಡೆಯಲಿದೆ.
ಶೈಖುನಾ ಅಸೈಯ್ಯದ್ ಫಝಲ್ ಕೋಯಮ್ಮ ತಂಙಳ್ ಕೂರತ್ ಪುಸ್ತಕ ಬಿಡುಗಡೆಗೊಳಿಸಲಿದ್ದಾರೆ. ಕೃಷ್ಣಾಪುರ ಖಾಝಿ ಅಲ್‌ಹಾಜ್ ಇ.ಕೆ. ಇಬ್ರಾಹೀಂ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಾಟಿಪಳ್ಳ ಮಸೀದಿಯ ಖತೀಬ್ ವಿ.ಯು. ಅಬ್ದುನ್ನಾಸಿರ್ ಮದನಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅಬೂಸುಫ್ಯಾನ್ ಎಚ್‌ಐ ಇಬ್ರಾಹೀಂ ಮದನಿ ಅನುಸ್ಮರಣಾ ಭಾಷಣ ಮಾಡಲಿರುವರು.
ಮರ್ಹೂಂ ಸ್ವಾಲಿಹ್ ಉಸ್ತಾದರ ಶಿಷ್ಯಂದಿರಿಂದ ಕವಿಗೋಷ್ಠಿ ಹಾಗೂ ಮಗ್ರಿಬ್ ನಮಾಜಿನ ಬಳಿಕ ಜಿಎಂ ಕಾಮಿಲ್ ಸಖಾಫಿ ಅವರಿಂದ ಧಾರ್ಮಿಕ ಉಪನ್ಯಾಸ ಜರುಗಲಿದೆ ಎಂದು ಸಂಘಟಕರಾದ ಅನ್ಸಾರ್ ಕಾಟಿಪಳ್ಳ, ಹುಸೈನ್ ಕಾಟಿಪಳ್ಳ ತಿಳಿಸಿದ್ದಾರೆ.





