ನಿವೃತ್ತ ಯೋಧ ನಿರಂಜನ್ ಕಿಶೋರ್ ಹೆಗ್ಡೆ ನಿಧನ

ಉಡುಪಿ, : ಬ್ರಿಗೇಡಿಯರ್ ನಿಟ್ಟೆ ಗುತ್ತು ನಿರಂಜನ್ ಕಿಶೋರ್ ಹೆಗ್ಡೆ (79) ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜೂ.2ರಂದು ನಿಧನರಾದರು.
ಇವರು 33ವರ್ಷ ಕಾಲ ಭಾರತೀಯ ಸೇನೆಯ ಕೊಡೆ ಸೈನಿಕರ ಪಿರಂಗಿ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರು. ಭಾರತ ಸೇನಾ ಪಡೆಗಳ ರಾಷ್ಟ್ರೀಯ ಸೇನಾ ಶಿಕ್ಷಣ ಸಂಸ್ಥೆಯಲ್ಲಿ ಪದವೀಧರರಾಗಿದ್ದ ಇವರು, ಸೇವಾ ಸಮಯದಲ್ಲಿ ಭಾರತದ ರಾಜತಾಂತ್ರಿಕರಾಗಿ ಸುಮಾರು ನಾಲ್ಕು ವರ್ಷಗಳ ಕಾಲ ಯುರೋಪು ಖಂಡದ ಝಕೋಸ್ಲೋವಿಕಿಯದಲ್ಲಿ ಭಾರತದ ರಾಯಬಾರಿ ಕಚೇರಿಯಲ್ಲಿ ಸೇವೆ ಸಲ್ಲಿಸಿದ್ದರು.
1965 ಮತ್ತು 1971ರ ಭಾರತ ಪಾಕಿಸ್ಥಾನ ಯುದ್ಧದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಇವರು ಸೇವಾ ಸಮಯದಲ್ಲಿ ಸೇನಾ ಪಡೆಗಳ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದರು. ಇವರು ಪತ್ನಿ, ಇಬ್ಬರು ಪುತ್ರರನ್ನು ಹಾಗೂ ಅಪಾರ ಬಂಧುಬಳಗದವರನ್ನು ಅಗಲಿದ್ದಾರೆ.
Next Story





