ವಿಶ್ವ ಬೈಸಿಕಲ್ ದಿನಾಚರಣೆ: ಮಣಿಪಾಲದಿಂದ ಮಲ್ಪೆಯವರೆಗೆ ಜಾಥಾ

ಉಡುಪಿ : ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ನೆಹರು ಯುವ ಕೇಂದ್ರ ಇವುಗಳ ಸಂಯುಕ್ತ ಆಶ್ರಯದಲ್ಲಿ ೭೫ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ವಿಶ್ವ ಬೈಸಿಕಲ್ ದಿನಾಚರಣೆಯ ಪ್ರಯುಕ್ತ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಮಲ್ಪೆ ಬೀಚ್‌ವರೆಗೆ ಬೈಸಿಕಲ್ ಜಾಥವನ್ನು ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಾಥಾಕ್ಕೆ ಜಿಲ್ಲಾಧಿಕಾರಿ ಕೂರ್ಮಾರಾವ್ ಚಾಲನೆ ನೀಡಿ, ನಂತರ ಮಲ್ಪೆ ಬೀಚ್‌ನಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ರ್ಯಾಲಿಯಲ್ಲಿ ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶಿಶ್ ರೆಡ್ಡಿ, ಜಿಲ್ಲಾ ಮಟ್ಟದ ಅಧಿಕಾರಿಗಳು, ಸೈಕ್ಲಿಸ್ಟ್‌ಗಳು ಮೊದಲಾದವರು ಭಾಗವಹಿಸಿದ್ದರು.
ಸೈಕ್ಲಿಂಗ್ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಸಂತೋಷ್ ಕುಮಾರ್, ಜಾನ್ ರಾಬರ್ಟ್ ಡಿಸಿಲ್ವಾ, ರಾಜೇಶ್ ನಾಯಕ್, ಡಾ. ತಿಲಕ್ ಚಂದ್ರ ಪಾಲ್, ಡಾ.ರಾಜೇಶ ಭಕ್ತ, ಡಾ.ಗುರುರಾಜ್ ಕೃಷ್ಣಮೂರ್ತಿ, ರಾಷ್ಟ್ರ ಮಟ್ಟದ ಸೈಕ್ಲಿಸ್ಟ್ ಶ್ರೀನಿಧಿ ಉರಾಳ, ಅಂತರಾಷ್ಟ್ರೀಯ ಮಟ್ಟದ ಸೈಕ್ಲಿಸ್ಟ್‌ಗಳಾದ ಗಣೇಶ್ ನಾಯಕ್ ಹಾಗೂ ಹಷೇರ್ಂದ್ರ ಅವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಯುವ ಸಮನ್ವಯಾಧಿಕಾರಿ ವಿಲ್ಫ್ರೆಡ್ ಡಿಸೋಜ ಸ್ವಾಗತಿಸಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ ವಂದಿಸಿದರು.







