ನಾಪತ್ತೆಯಾದ ರಾಣೇಬೆನ್ನೂರಿನ ತಾಯಿ-ಮಕ್ಕಳ ಪತ್ತೆಗೆ ಮನವಿ

ಉಡುಪಿ : ರಾಣೇಬೆನ್ನೂರು ತಾಲೂಕು ಮೆಡ್ಲೇರಿ ಗ್ರಾಮದ ನಿವಾಸಿ ಶಶಿಕಲಾ ದಿಳ್ಳೆಪ್ಪಬುಡ್ಡಳ್ಳರ(೩೨) ಎಂಬವರು ತನ್ನ ಮಕ್ಕಳಾದ ಹರೀಶ ದಿಳ್ಳೆಪ್ಪ ಬುಡ್ಡಳ್ಳರ(೯) ಹಾಗೂ ಯಶವಂತ ದಿಳ್ಳೆಪ್ಪ ಬುಡ್ಡಳ್ಳರ(೦೪) ಎಂಬವರೊಂದಿಗೆ ೨೦೨೧ರ ಅ.೨೩ರಂದು ಮನೆಯಿಂದ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದು, ಈ ಬಗ್ಗೆ ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕಾಣೆಯಾದ ಶಶಿಕಲಾ ಐದು ಅಡಿ ಎತ್ತರ, ಗೋಧಿಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು, ದುಂಡು ಮುಖ ಹೊಂದಿದ್ದು, ಕನ್ನಡ ಮಾತನಾಡುತ್ತಾಳೆ. ಬಲಕೆನ್ನೆಯ ಮೇಲೆ ಗೆಳತಿ ಕಲೆ ಇದೆ. ಹರೀಶ ೩.೮ ಅಡಿ ಎತ್ತರ ಗೋದಿಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು, ದುಂಡು ಮುಖ ಹೊಂದಿದ್ದು, ಕನ್ನಡ ಮಾತನಾಡುತ್ತಾನೆ. ಯಶವಂತ ೩ ಅಡಿ ಎತ್ತರ, ಗೋದಿಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು, ದುಂಡು ಮುಖ ಹೊಂದಿದ್ದು, ಅಲ್ಪಸ್ವಲ್ಪ ಕನ್ನಡ ಮಾತ ನಾಡುತ್ತಾನೆ. ಬಲಗೈಮೇಲೆ ಹಳೆ ಗಾಯದ ಕಲೆ ಇದೆ.
ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕೂಡಲೇ ಹಾವೇರಿ ಕಂಟ್ರೋಲ್ ರೂಂ. ೦೮೩೭೫-೨೩೭೩೬೮, ಆರಕ್ಷಕರ ಅಧೀಕ್ಷಕರ ದೂ:೦೮೩೭೫-೨೩೨೮೦೦, ರಾಣೇ ಬೆನ್ನೂರು ಉಪವಿಭಾಗ ಡಿಎಸ್.ಪಿ. ದೂ: ೦೮೩೭೩-೨೬೬೩೪೪, ಮೊ- ೯೪೮೦೮೦೪೫೨೧, ರಾಣೇಬೆನ್ನೂರು ಗ್ರಾಮೀಣ ಠಾಣೆ ದೂ.೦೮೩೭೩-೨೬೬೪೩೩, ಮೊ- ೯೪೯೮೦೮೦೪೫೫೨ ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.