ಬಸ್‌ಗಳಲ್ಲಿ ಕನ್ನಡ ಫಲಕ ಹಾಕಿಸಲು ಸೂಚನೆ
ಮಂಗಳೂರು : ಜಿಲ್ಲೆಯ ಎಲ್ಲಾ ಬಸ್‌ಗಳ ನಾಮಫಲಕ ಹಾಗೂ ಬಸ್ಸಿನ ಮಾರ್ಗ ಸೂಚಿಗಳನ್ನು ಕನ್ನಡದಲ್ಲೇ ನಮೂದಿಸುವಂತೆ ಕಳೆದ ಎಪ್ರಿಲ್‌ನಲ್ಲಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ಅಧ್ಯಕ್ಷತೆಯಲ್ಲಿ ನಡೆದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಅದರಂತೆ ಜಿಲ್ಲೆಯ ಎಲ್ಲಾ ಬಸ್‌ಗಳ ನಾಮಫಲಕ ಮತ್ತು ಮಾರ್ಗಸೂಚಿಗಳನ್ನು ಕನ್ನಡದಲ್ಲಿಯೇ ಕಡ್ಡಾಯವಾಗಿ ಬರೆಸುವಂತೆ ದ.ಕ.ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story