ರಾಜ್ಯ ಮಟ್ಟದ ಸಬ್ ಜ್ಯೂನಿಯರ್ ಈಜು; ಒನ್ ಆಕ್ವಾ ಸೆಂಟರ್‌ನ ಅಲಿಸ್ಸಾ ರೇಗೋ ಚಾಂಪಿಯನ್
ಮಂಗಳೂರು : ಬೆಳಗಾವಿಯಲ್ಲಿ ಇತ್ತೀಚೆಗೆ ನಡೆದ ಎನ್.ಆರ್.ಜೆ ರಾಜ್ಯ ಮಟ್ಟದ ಜ್ಯೂನಿಯರ್, ಸಬ್ ಜ್ಯೂನಿಯರ್ ಈಜು ಸ್ಪರ್ಧೆಯಲ್ಲಿ ಮಂಗಳೂರಿನ ಒನ್‌ಆಕ್ವಾ ಸೆಂಟರ್‌ನಲ್ಲಿ ತರಬೇತಿ ಪಡೆಯುತ್ತಿರುವ ಅಲಿಸ್ಸಾ ಸ್ಪೀಡಲ್ ರೇಗೋ ಬಾಲಕಿಯರ ಸಬ್ ಜ್ಯೂನಿಯರ್ ವಿಭಾಗದಲ್ಲಿ ಚಿನ್ನ ಹಾಗೂ ಬೆಳ್ಳಿಯೊಂದಿಗೆ ವೈಯುಕ್ತಿಕ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ.
ನಗರದ ಲೇಡಿಹಿಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಿಯುತ್ತಿರುವ ರೇಗೋ ೬ ಚಿನ್ನ, ೬ ಬೆಳ್ಳಿ, ಹಾಗೂ ೧೧ ಕಂಚಿನೊಂದಿಗೆ ೨೩ ಪದಕ ಪಡೆದಿದ್ದಾರೆ.
ಸಬ್ ಜ್ಯೂನಿಯರ್ ವಿಭಾಗದಲ್ಲಿ ಸೈಂಟ್ ಥೆರೆಸಾ ಶಾಲೆಯ ದ್ವಿಶಾ ಎನ್. ಶೆಟ್ಟಿ ೨ ಬೆಳ್ಳಿ ಹಾಗೂ ೨ ಕಂಚು, ಮತ್ತು ಶೌರ್ಯ ಎಸ್. ಶೆಟ್ಟಿ ಬಾಲಕರ ವಿಭಾಗದಲ್ಲಿ ೨ ಕಂಚಿನ ಪದಕಗಳನ್ನು ಪಡೆದಿದ್ದಾರೆ.
ಜ್ಯೂನಿಯರ್ ವಿಭಾಗದಲ್ಲಿ ಸಂತ ಅಲೋಯಸ್ ಹೈಸ್ಕೂಲ್‌ನ ಅಲಿಸ್ಟರ್ ರೇಗೋ (೧ ಬೆಳ್ಳಿ), ಸಂತ ಅಲೋಯಸ್ ಗೋನ್ಝಾಗ ಸ್ಕೂಲ್‌ನ ಸಮಿತ್ ಇನ್ ಫಾಂಟ್ ಕ್ಷೇವಿಯರ್ ಹಾಗೂ ಸಾತ್ವಿಕ್ ನಾಯಕ ಸುಜೀ ತಲಾ ೧ ಕಂಚು ಹಾಗೂ ಸಂತ ಅಲೋಯಸ್ ಹಿರಿಯ ಪ್ರಾಥಮಿಕ ಶಾಲೆಯ ಯಶ್‌ರಾಜ್ ೧ ಬೆಳ್ಳಿ, ಉರ್ವ ಸಂತ ಅಲೋಶಿಯಸ್ ಪ್ರಾಥಮಿಕ ಶಾಲೆಯ ನಿಶಾನ್ ೨ ಕಂಚು ಹಾಗೂ ಲೇಡಿಹಿಲ್ ವಿಕ್ಟೋರಿಯ ಶಾಲೆಯ ಧೃತಿ ಫೆರ್ನಂಡಿಸ್ ಬೆಳ್ಳಿ ಹಾಗೂ ೩ ಕಂಚಿನ ಪದಕ ಗಳಿಸಿದ್ದಾರೆ.