ಮಂಗಳೂರು: ಮಹಿಳೆಯರಿಗಾಗಿ ಸೈಕಲ್ ರ‍್ಯಾಲಿ

ಮಂಗಳೂರು : ವಿಶ್ವ ಸೈಕಲ್ ದಿನಾಚರಣೆಯ ಅಂಗವಾಗಿ ಮಂಗಳೂರು ಸ್ಮಾರ್ಟ್ ಸಿಟಿ ವತಿಯಿಂದ ಶುಕ್ರವಾರ ನಗರದಲ್ಲಿ ಮಹಿಳಾ ಸೈಕಲ್ ರ‍್ಯಾಲಿ ನಡೆಯಿತು.
ಮಂಗಳೂರು ಮಹಾನಗರ ಪಾಲಿಕೆ ಕಚೇರಿಯ ಆವರಣದಿಂದ ಆರಂಭವಾದ ರ‍್ಯಾಲಿ ಲೇಡಿಹಿಲ್‌ನಲ್ಲಿರುವ ಮಂಗಳ ಕ್ರೀಡಾಂಗಣದಲ್ಲಿ ಸಮಾಪ್ತಿಗೊಂಡಿತು. ಮಂಗಳೂರು ಉಪಮೇಯರ್ ಸುಮಂಗಲಾ ರಾವ್ ಹಾಗೂ ಸಂಚಾರ ಎಸಿಪಿ ಗೀತಾ ಕುಲಕರ್ಣಿ ರ‍್ಯಾಲಿಗೆ ಚಾಲನೆ ನೀಡಿದರು.
ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ ಮಾತನಾಡಿ ಸೈಕಲ್ ಸವಾರಿ ಆರೋಗ್ಯಕ್ಕೂ ಅಲ್ಲದೆ ಸುಸ್ಥಿರ ಸಂಚಾರ ವ್ಯವಸ್ಥೆಗೆ ಅನುಕೂಲಕರ. ಪರಿಸರ ಸ್ನೇಹಿಯಾದ ಸೈಕಲ್ ಸವಾರಿ ಯುವಜನರಲ್ಲಿ ಮತ್ತಷ್ಟು ಜಾಗೃತಿ ಮೂಡಿಸುವಂತಾಗಬೇಕು ಎಂದರು.
ಶಾಸಕ ವೇದವ್ಯಾಸ್ ಕಾಮತ್, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಮೆಸ್ಕಾಂ ಮತ್ತು ಮಂಗಳೂರು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಕುಮಾರ್ ಮಿಶ್ರ, ತಾಂತ್ರಿಕ ವಿಭಾಗದ ಪ್ರಧಾನ ವ್ಯವಸ್ಥಾಪಕ ಅರುಣ್ ಪ್ರಭಾ, ವಿವಿಧ ವಿಭಾಗಗಳ ಇಂಜಿಯರ್‌ಗಳಾದ ಚಂದ್ರಕಾಂತ್, ರಾಘವೇಂದ್ರ ಶೇಟ್, ಮಂಜು ಕೀರ್ತಿ, ಸುಧಾಕರ್, ಮುಹಮದ್ ಸಾಬೀರ್ ಮತ್ತಿತರರು ಉಪಸ್ಥಿತರಿದ್ದರು.