ಪೆರ್ಲ: ಯುವ ದಂಪತಿ ನೇಣು ಬಿಗಿದು ಆತ್ಮಹತ್ಯೆ

ಕಾಸರಗೋಡು, ಜೂ.4: ಯುವ ದಂಪತಿ ಮನೆಯೊಳಗೆ ಕುತ್ತಿಗೆಗೆ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಪೆರ್ಲದಲ್ಲಿ ನಡೆದಿದೆ.
ಸರ್ಪಮಲೆ ಶೇತ್ತಿಬೈಲ್ ನಿವಾಸಿ ವಸಂತ (26) ಮತ್ತು ಅವರ ಪತ್ನಿ, ಕಜಂಪಾಡಿ ನಿವಾಸಿ ಶರಣ್ಯಾ(22) ಮೃತಪಟ್ಟವರಾಗಿದ್ದಾರೆ. ಇವರು ಎರಡು ವರ್ಷಗಳ ಹಿಂದೆಯಷ್ಟೇ ವಿವಾಹಿತರಾಗಿದ್ದರು.
ಮನೆಯಲ್ಲಿ ಪತಿ-ಪತ್ನಿ ಮಾತ್ರ ವಾಸವಾಗಿದ್ದರು. ಶುಕ್ರವಾರ ದಿನವಿಡೀ ಇವರ ಮನೆಯ ಬಾಗಿಲು ತೆರೆದಿರಲಿಲ್ಲ ಎನ್ನಲಾಗಿದೆ. ಇದರಿಂದ ಸಂಶಯಗೊಂಡ ಪರಿಸರ ವಾಸಿಗಳು ಸಂಜೆ ವೇಳೆ ಮನೆಯತ್ತ ತೆರಳೀ ಗಮನಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೃತ್ಯಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಬದಿಯಡ್ಕ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Next Story





