ಸುನ್ನಿ ಜಂಇಯ್ಯತುಲ್ ಮುಅಲ್ಲಿಮೀನ್ ಮೋಂಟುಗೋಳಿ ರೇಂಜ್ ಮಹಾಸಭೆ

ಮಂಜನಾಡಿ, ಜೂ.4: ಸುನ್ನಿ ಜಂಇಯ್ಯತುಲ್ ಮುಅಲ್ಲಿಮೀನ್ ಮೋಂಟುಗೋಳಿ ರೇಂಜ್ ಇದರ ವಾರ್ಷಿಕ ಮಹಾಸಭೆ ಮುಹಿಯುದ್ದೀನ್ ಸಅದಿ ತೋಟಾಲ್ ಅಧ್ಯಕ್ಷತೆಯಲ್ಲಿ ಮಂಜನಾಡಿ ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ನಲ್ಲಿ ನಡೆಯಿತು.
ಸುನ್ನಿ ವಿದ್ಯಾಭ್ಯಾಸ ಶಿಕ್ಷಣ ಮಂಡಳಿ ಮುಫತ್ತಿಶ್ ಅಬ್ದುಲ್ ಹಮೀದ್ ಮದನಿ ಬೊಳ್ಮಾರ್ ಸಭೆಯನ್ನು ಉದ್ಘಾಟಿಸಿದರು. ಅಲ್ ಮದೀನಾ ವಿಧ್ಯಾ ಸಂಸ್ಥೆಯ ಜ.ಮೇನಜರ್ ಅಬ್ದುಲ್ ಖಾದರ್ ಸಖಾಫಿ ಶುಭಾಶಂಸನೆಗೈದರು
ರಿಟೈನಿಂಗ್ ಆಫೀಸರ್ ಇಸ್ಮಾಯೀಲ್ ಸಅದಿ ಉರುಮಣೆ ನೇತೃತ್ವದಲ್ಲಿ 2022-25ಗೆ ಸಾಲಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಸಿದ್ದೀಕ್ ಸಅದಿ ಮೊಂಟೆಪದವು, ಪ್ರ.ಕಾರ್ಯಾದರ್ಶಿ ಇಕ್ಬಾಲ್ ಮರ್ಝೂಖಿ ಸಖಾಫಿ ಅಲ್ ಮದೀನಾ, ಕೋಶಾಧಿಕಾರಿಯಾಗಿ ಮುಹಿಯುದ್ದೀನ್ ಸಅದಿ ತೋಟಾಲ್,
ಉಪಾಧ್ಯಕ್ಷರು: ಪರೀಕ್ಷೆ,ಐಟಿ, ವೆಲ್ಫೇರ್ ವಿಭಾಗ: ಹಮೀದ್ ಮದನಿ ಮೊಂಟೆಪದವು, ಕಾರ್ಯದರ್ಶಿ: ನಾಸಿರ್ ಮದನಿ ಪಡಿಕ್ಕಲ್
ಉಪಾಧ್ಯಕ್ಷರು: ಮ್ಯಾಗಝಿನ್ ವಿಭಾಗ: ಹನೀಫ್ ಲತೀಫಿ ಪೊಟ್ಟಳಿಕೆ, ಕಾರ್ಯದರ್ಶಿ: ಆಬಿದ್ ಸಖಾಫಿ ಮರಿಕ್ಕಳ
ಉಪಾಧ್ಯಕ್ಷರು: ಟ್ರೆನಿಂಗ್ ಮತ್ತು ಮಿಶನರಿ ವಿಭಾಗ: ಅಬೂಬಕರ್ ಸಅದಿ ಮೊಂಟುಗೋಳಿ, ಕಾರ್ಯದರ್ಶಿ: ಅನ್ಸಾರ್ ಸಅದಿ ಇವರನ್ನು ಆಯ್ಕೆ ಮಾಡಲಾಯಿತು.
ಇದೇವೇಳೆ ಪವಿತ್ರ ಹಜ್ ಯಾತ್ರೆ ಹೊರಡಲಿರುವ ರೇಂಜ್ ನಿಕಟಪೂರ್ವ ಕಾರ್ಯದರ್ಶಿ ಅಬ್ದುಲ್ ಖಾದರ್ ಮುಸ್ಲಿಯಾರ್ ರನ್ನು ರೇಂಜ್ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.
ರೇಂಜ್ ಪ್ರ.ಕಾರ್ಯದರ್ಶಿ ಅಬ್ದುಲ್ ಖಾದರ್ ಮುಸ್ಲಿಯಾರ್ ಸ್ವಾಗತಿಸಿದರು. ನೂತನ ಪ್ರ.ಕಾರ್ಯದರ್ಶಿ ಇಕ್ಬಾಲ್ ಮರ್ಝೂಖಿ ಸಖಾಫಿ ವಂದಿಸಿದರು.
