ಬೆಂಗಳೂರಿನ ರಾಷ್ಟ್ರೋತ್ಥಾನ ಸಾಹಿತ್ಯ ಪ್ರಕಾಶನಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರ ಪ್ರಶಸ್ತಿ
2021ನೇ ಸಾಲಿನ ವಾರ್ಷಿಕ ಪ್ರಶಸ್ತಿ-ಬಹುಮಾನಗಳು ಪ್ರಕಟ

ಕನ್ನಡ ಪುಸ್ತಕ ಪ್ರಾಧಿಕಾರ
ಬೆಂಗಳೂರು, ಜೂ.4: ಕನ್ನಡ ಪುಸ್ತಕ ಪ್ರಾಧಿಕಾರದ 2021ನೇ ಸಾಲಿನ ವಾರ್ಷಿಕ ಪ್ರಶಸ್ತಿ ಹಾಗೂ ಬಹುಮಾನಗಳನ್ನು ಪ್ರಾಧಿಕಾರದ ಅಧ್ಯಕ್ಷ ಡಾ. ಎಂ.ಎನ್. ನಂದೀಶ್ ಹಂಚೆ ಪ್ರಕಟಿಸಿದ್ದಾರೆ.
ಶನಿವಾರ ನಗರದಲ್ಲಿರುವ ಕನ್ನಡ ಪುಸ್ತಕ ಪ್ರಾಧಿಕಾರದ ಕಚೇರಿಯಲ್ಲಿ ನಡೆದ ಸ್ಥಾಯಿ ಸಮಿತಿ ಹಾಗೂ ಸರ್ವ ಸದಸ್ಯರ ಸಭೆಯಲ್ಲಿ ಈ ಪ್ರಶಸ್ತಿಗಳ ಬಗ್ಗೆ ವಿಸ್ತೃತ ಚರ್ಚೆ ನಡೆದು ಸರ್ವಾನುಮತದಿಂದ ಪ್ರಶಸ್ತಿಗಳ ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಶಸ್ತಿ-ಬಹುಮಾನಗಳ ವಿವರ:
ಅತ್ಯುತ್ತಮ ಪ್ರಕಾಶನ ಪ್ರಶಸ್ತಿ- ಬೆಂಗಳೂರಿನ ರಾಷ್ಟ್ರೋತ್ಥಾನ ಸಾಹಿತ್ಯ(ಪ್ರಶಸ್ತಿ ಮೊತ್ತ- ಒಂದು ಲಕ್ಷ ರೂ.).
ಡಾ. ಎಂ.ಎಂ. ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿ- ಧಾರವಾಡದ ಡಾ.ಗುರುಲಿಂಗ ಕಾಪಸೆ(ಪ್ರಶಸ್ತಿ ಮೊತ್ತ-75 ಸಾವಿರ ರೂ.).
ಡಾ. ಜಿ.ಪಿ. ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ- ಮೂಡಬಿದರೆಯ ಡಾ.ಮೋಹನ್ ಆಳ್ವ(ಪ್ರಶಸ್ತಿ ಮೊತ್ತ-50 ಸಾವಿರ ರೂ.).
ಡಾ.ಅನುಪಮಾ ನಿರಂಜನ ವೈದ್ಯಕೀಯ ಹಾಗೂ ವಿಜ್ಞಾನ ಸಾಹಿತ್ಯ ಪ್ರಶಸ್ತಿ- ಬೆಂಗಳೂರಿನ ಡಾ.ನಾ.ಸೋಮೇಶ್ವರ(ಪ್ರಶಸ್ತಿ ಮೊತ್ತ-25 ಸಾವಿರ ರೂ.) ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕನ್ನಡ ಪುಸ್ತಕ ಸೊಗಸು ಹಾಗೂ ಮುದ್ರಣ ಸೊಗಸು ಬಹುಮಾನಗಳ ವಿವರ: ಪುಸ್ತಕ ಸೊಗಸು ಮೊದಲನೇ ಬಹುಮಾನ 25 ಸಾವಿರ ರೂ.ಗಳು.
ನಮ್ಮ ದೇಹದ ವಿಜ್ಞಾನ
ಸಂ: ಡಾ. ಟಿ.ಆರ್. ಅನಂತರಾಮು,
ಡಾ. ನಾ. ಸೋಮೇಶ್ವರ,
ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್, ಬೆಂಗಳೂರು.
---------------------------------------------
ಪುಸ್ತಕ ಸೊಗಸು ಎರಡನೇ ಬಹುಮಾನ 20 ಸಾವಿರ ರೂ.ಗಳು.
ಅಜ್ಜಿ ಮನೆ ಸವಿ
ಸಂ: ಉದ್ಯಾವರ ವಿಜಯಲಕ್ಷ್ಮಿ ಶೆಣೈ,
ವಿಶೇಷ ಪಬ್ಲಿಕೇಷನ್ಸ್, ಬೆಂಗಳೂರು.
------------------------------------------
ಪುಸ್ತಕ ಸೊಗಸು ಮೂರನೇ ಬಹುಮಾನ 10 ಸಾವಿರ ರೂ.ಗಳು.
ಮಹಾತ್ಮರ ಚರಿತಾಮೃತ
ಲೇ: ಪ್ರಭುಚನ್ನಬಸವ ಸ್ವಾಮೀಜಿ
ಶ್ರೀ ಗುರುಚನ್ನಬಸವೇಶ್ವರ ಗ್ರಂಥಮಾಲೆ, ಅಥಣಿ.
--------------------------------------------------
ಮಕ್ಕಳ ಪುಸ್ತಕ ಸೊಗಸು ಬಹುಮಾನ 8 ಸಾವಿರ ರೂ.ಗಳು.
ನೋಟ್ಬುಕ್- ಮಕ್ಕಳ ಕಥೆಗಳು
ಲೇ: ಡಾ. ಕೆ. ಶಿವಲಿಂಗಪ್ಪ ಹಂದಿಹಾಳು
ಕವನ ಪ್ರಕಾಶನ, ಬಳ್ಳಾರಿ.
---------------------------------------------
ಮುಖಪುಟ ಚಿತ್ರ ವಿನ್ಯಾಸ ಬಹುಮಾನ 10 ಸಾವಿರ ರೂ.ಗಳು.
ಅಲ್ಪಸಂಖ್ಯಾತರು ಮತ್ತು ಜಾತಿ ವ್ಯವಸ್ಥೆ
ಲೇ: ಡಾ.ಮುಜಾಫರ್ ಅಸ್ಸಾದಿ
ಬಹುಮಾನಿತ ಕಲಾವಿದರು: ಜಿ. ಅರುಣ್ ಕುಮಾರ್
--------------------------------------------------------
ಮುಖಪುಟ ಚಿತ್ರ ಕಲೆಯ ಬಹುಮಾನ 8 ಸಾವಿರ ರೂ.ಗಳು.
ರೂಬಿಕ್ಸ್ ಕ್ಯೂಬ್ ಮತ್ತಿತರ ನಾಟಕಗಳು ಕ್ಲೀನ್ ಅಂಡ್ ಕ್ಲಿಯರ್ ಪಾಯಖಾನೆ ಮತ್ತು ಆಯಾಮ
ಲೇ: ಬೇಲೂರು ರಘುನಂದನ್
ಬಹುಮಾನಿತ ಕಲಾವಿದರು: ಮಂಜುನಾಥ ವಿ.ಎಂ.
-------------------------------------------------------------
ಪುಸ್ತಕ ಮುದ್ರಣ ಸೊಗಸು ಬಹುಮಾನ 5 ಸಾವಿರ ರೂ.ಗಳು.
ಸಿರಿ ಬೆಳಕು
ಲೇ: ಶಿ.ರಾ. ಹೂಗಾರ
ಮುದ್ರಣಾಲಯ: ತ್ವರಿತ ಮುದ್ರಣ ಆಫ್ಸೆಟ್ ಪ್ರಿಂಟರ್ಸ್, ಗದಗ. ಇವರನ್ನು ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







