ಜೂ. 6ರಂದು ಐಕಾನಿಕ್ ವೀಕ್ ಸೆಲೆಬ್ರೇಷನ್; ನೇರ ಪ್ರಸಾರ
ಉಡುಪಿ : ಆಜಾದಿ ಕಾ ಅಮೃತ್ ಮಹೋತ್ಸವ ಐಕಾನಿಕ್ ವೀಕ್ ಸೆಲೆಬ್ರೇಷನ್ ಕಾರ್ಯಕ್ರಮದ ಉದ್ಘಾಟನೆ ಜೂ. 6ರಂದು ಹೊಸದಿಲ್ಲಿಯಲ್ಲಿ ನಡೆಯಲಿದ್ದು, ಅದನ್ನು ಉಡುಪಿಯಲ್ಲಿ ನೇರ ಪ್ರವಾಸ ಮಾಡಲಾಗುವುದು.
ಐಕಾನಿಕ್ ವೀಕ್ ಸೆಲೆಬ್ರೇಷನ್ ಕಾರ್ಯಕ್ರಮವನ್ನು ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಉದ್ಘಾಟಿಸಲಿದ್ದಾರೆ.
ಕೇಂದ್ರ ಸರಕಾರದ ಹಣಕಾಸು ಸಚಿವಾಲಯ ಮತ್ತು ಕಾರ್ಪೊರೇಟ್ ವ್ಯವಹಾರ ಗಳ ಸಚಿವಾಲಯಗಳ ವತಿಯಿಂದ ನಡೆಯಲಿರುವ ಈ ಕಾರ್ಯಕ್ರಮವನ್ನು ದೇಶಾದ್ಯಂತ 75 ಜಿಲ್ಲೆಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತಿದ್ದು, ಕರ್ನಾಟಕ ದಿಂದ ಉಡುಪಿ ಜಿಲ್ಲೆಯನ್ನು ಆಯ್ಕೆ ಮಾಡಲಾಗಿದೆ.
ಎಲ್ಲಾ ಬ್ಯಾಂಕ್‌ಗಳ ಗ್ರಾಹಕರು, ಬ್ಯಾಂಕ್ ಅಧಿಕಾರಿಗಳು, ಸಾರ್ವಜನಿಕ ವಿಮಾ ಕಂಪನಿಗಳ ಅಧಿಕಾರಿಗಳು ಮತ್ತು ಕೇಂದ್ರ ಸರಕಾರದ ವಿವಿಧ ಇಲಾಖೆ ಗಳ ಅಧಿಕಾರಿಗಳು ಸೇರಿದಂತೆ ಐದು ನೂರಕ್ಕೂ ಹೆಚ್ಚು ಮಂದಿ ಭಾಗವಹಿಸಲಿರುವ ನೇರ ಪ್ರಸಾರವನ್ನು ಉಡುಪಿ ಜಿಲ್ಲೆಯ ಲೀಡ್ ಬ್ಯಾಂಕ್ ಆದ ಕೆನರಾ ಬ್ಯಾಂಕ್ ವತಿಯಿಂದ ಜೂನ್ ೬ರಂದು ಬೆಳಗ್ಗೆ 9.30ಕ್ಕೆ ಮಣಿಪಾಲದ ಕೆನರಾ ಬ್ಯಾಂಕ್ ಸಿಂಡಿಕೇಟ್ ಗೋಲ್ಡನ್ ಜ್ಯೂಬಿಲಿ ಹಾಲ್‌ನಲ್ಲಿ ಆಯೋಜಿಸಲಾಗಿದೆ.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಲೀಡ್ ಬ್ಯಾಂಕ್‌ನ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.