ಜೂ.6ಕ್ಕೆ ನೇರ ಸಂದರ್ಶನ
ಉಡುಪಿ : ಟೆಸ್ಟಾ ಪ್ರಿಂಟ್ಸ್ ಪ್ರೈ.ಲಿ ಮತ್ತು ಓಮ್ನಿಯನ್ ಪ್ರೀಮಿಡಿಯಂ ಪ್ರೈ.ಲಿ, ರಿಲಯನ್ಸ್ ಜಿಯೋ ಇನ್ಪೋಕಾಮ್ ಪ್ರೈ.ಲಿ, ಪ್ರಕಾಶ ರಿಟೈಲ್ ಪ್ರೈ.ಲಿ ಹಾಗೂ ಮೇಡ್ ಪ್ಲಾಸ್ ಪ್ರೈ.ಲಿ ವತಿಯಿಂದ ಜೂನ್ ೬ರಂದು ಬೆಳಗ್ಗೆ ೧೦:೩೦ರಿಂದ ಅಪರಾಹ್ನ 3 ಗಂಟೆಯವರೆಗೆ ಮಣಿಪಾಲದ ಜಿಲ್ಲಾಧಿಕಾರಿ ಕಛೇರಿ ಸಂಕೀರ್ಣದ ಉದ್ಯೋಗ ವಿನಿಮಯ ಕಛೇರಿಯಲ್ಲಿ ನೇರ ಸಂದರ್ಶನ ನಡೆಯಲಿದೆ.
ಎಸೆಸೆಲ್ಸಿ, ಪಿಯುಸಿ, ಡಿಗ್ರಿ, ಬಿಸಿಎ, ಬಿಸಿಎಸ್, ಎಂಸಿಎ, ಬಿಕಾಂ. ಬಿಎಸ್ಸಿ, ಎಂಎಸ್ಸಿ, ಡಿಪ್ಲೋಮಾ ಇನ್ ಕಂಪ್ಯೂಟರ್ ಸೈನ್ಸ್, ಡಿಪ್ಲೋಮಾ ಇನ್ ಮೆಕ್ಯಾನಿಕಲ್, ಬಿಇ ಇಂಜಿನಿಯರಿಂಗ್ ಹಾಗೂ ಇತರೆ ಪದವಿ ವಿದ್ಯಾರ್ಹತೆ ಯೊಂದಿಗೆ ಉತ್ತೀರ್ಣರಾದ ಅಭ್ಯರ್ಥಿಗಳು ತಮ್ಮ ಅಂಕಪಟ್ಟಿ, ಸ್ವ-ವಿವರವುಳ್ಳ ರೆಸ್ಯೂಮ್/ಸಿವಿ ಹಾಗೂ ಆಧಾರ್ ಕಾರ್ಡ್‌ಪ್ರತಿಯೊಂದಿಗೆ ನೇರ ಸಂದರ್ಶನ ದಲ್ಲಿ ಭಾಗವಹಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ರಜತಾದ್ರಿ, ಮಣಿಪಾಲ, ಮೊ.ಸಂಖ್ಯೆ: ೮೧೦೫೬೧೮೨೯೧, ೮೧೯೭೪೪೦೧೫೫ ಹಾಗೂ ೯೯೪೫೮೫೬೬೭೦ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





